ನೆಲಮಂಗಲ ತಾಲೂಕಿನ ಅರ್ಜುನಬೆಟ್ಟಹಳ್ಳಿ ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ನ ಆರ್ಯುವೇದ ಕಾಲೇಜಿನಲ್ಲಿ ಬೆಂಗಳೂರು ನಗರದ ವಿವಿಎನ್ ಪದವಿ ಕಾಲೇಜಿನಿಂದ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರಕ್ಕೆ ಕಾಲೇಜು ಪ್ರಾಂಶುಪಾಲ ಡಾ.ಸ್ವಾಗತ್ ನಾರಾಯಣ ಚಾಲನೆ ನೀಡಿದರು. ಪ್ರಾಧ್ಯಾಪಕರಾದ ಮಹದೇಶ್, ಕಾವ್ಯ ಯೋಗಾನಂದ್, ಆರ್ಯುವೇದ ಕಾಲೇಜಿನ ಸಿಬ್ಬಂದಿ ಸಿದ್ದುಸ್ವಾಮಿ, ಪತ್ರಕರ್ತ ಸತೀಶ್ ಇತರರು ಇದ್ದರು.
ನೆಲಮಂಗಲ : ಮೊಬೈಲ್ನಲ್ಲಿ ಮುಳುಗಿ ಜೀವನದ ಅತ್ಯಮೂಲ್ಯ ಣಗಳನ್ನು ಕಳೆದುಕೊಳ್ಳುವುದು ಬೇಡ.
ಜೀವನದ ಉದ್ದೇಶವನ್ನು ಅರ್ಥ ಮಾಡಿಕೊಂಡು ಸಮಾಜಕ್ಕೆ ಅವಶ್ಯವೆನಿಸುವಂತಾಗಬೇಕು ಎಂದು
ಶ್ರೀ ಪರಿಪೂರ್ಣ ಸನಾತನ ಆಯುರ್ವೇದ ಆಸ್ಪತ್ರೆ ವೈದ್ಯಕಿಯ ಕಾಲೇಜು ಪ್ರಾಂಶುಪಾಲ ಡಾ.ಸ್ವಾಗತ್ ನಾರಾಯಣ ಅಭಿಪ್ರಾಯಿಸಿದರು.
ತಾಲೂಕಿನ ಅರ್ಜುನಬೆಟ್ಟಹಳ್ಳಿ ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ನ ಆರ್ಯುವೇದ ಕಾಲೇಜಿನಲ್ಲಿ ಬೆಂಗಳೂರು ನಗರದ ವಿವಿಎನ್ ಪದವಿ ಕಾಲೇಜಿನಿಂದ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜಕ್ಕೆ ಹತ್ತಿರವಾಗುವ, ಗ್ರಾಮೀಣ ಭಾಗದ ಜನಜೀವನವನ್ನು ಅರ್ಥ ಮಾಡಿಕೊಳ್ಳುವ ಅವಕಾಶವನ್ನು ಶಿಬಿರ ಕಲ್ಪಿಸಲಿದೆ. ಪದವಿ ಶಿಣ ಮುಗಿಸಿದ ಬಳಿಕ ಭವಿಷ್ಯದಲ್ಲಿ ಅಧಿಕಾರಿ, ರಾಜಕಾರಣಿ ಮತ್ತು ಉದ್ಯಮಿಗಳಾಗಬಹುದು. ಆದ್ದರಿಂದ ಶಿಬಿರದ ಅವಧಿಯಲ್ಲಿ ಗ್ರಾಮೀಣ ಭಾಗದ ಜನ ಎದುರಿಸುತ್ತಿರುವ ಸಮಸ್ಯೆಗಳು, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದರು.
ಕಾಲೇಜು ಉಪ ಪ್ರಾಂಶುಪಾಲ ಡಾ.ಕೆ.ಎಸ್.ರೇವಣ್ಣಗೌಡ ಮಾತನಾಡಿ, ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮವಾಗಿದೆ. ಆದ್ದರಿಂದ ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಸೇವಾ ಮನೋಭಾವನೆ ಗುರಿಯಾಗಿಸಿಕೊಂಡು ಮಾಡುವ ಕಾರ್ಯಕ್ರಮ. ವ್ಯಕ್ತಿತ್ವ ವಿಕಸಕ್ಕೂ, ಭಾಷೆಗೂ ಅವಿನಾವಭಾವ ಸಂಬಂಧವಿದೆ. ವ್ಯಕ್ತಿಯ ಆಲೋಚನೆ, ಭಾವನೆಗಳು ಹಾಗೂ ನಡವಳಿಕೆಗಳು ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಇದರಲ್ಲಿ ಭಾಷಾ ಪ್ರೌಢಿಮೆಯೂ ಪ್ರಮುಖ ಪಾತ್ರವಹಿಸಲಿದೆ. ಹಾಗಾಗಿ ವಿದ್ಯಾರ್ಥಿಗಳಾದವರು ಆತ್ಮ ವಿಶ್ವಾಸ ಬೆಳೆಸಿಕೊಂಡಲ್ಲಿ ಎಂತಹ ಸಂದರ್ಭಗಳನ್ನೂ ಎದುರಿಸಬಹುದು ಎಂದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಜಿ.ಎಸ್.ಅಂಬಿಕಾ ಮಾತನಾಡಿ, ಶಿಬಿರದಲ್ಲಿ ನಿತ್ಯವೂ ಶ್ರಮದಾನದ ಸಮುದಾಯದ ಸಂಪರ್ಕ ಸಾಧಿಸುವುದು. ಸಚ್ಛತೆ, ಆರೋಗ್ಯ ಹಾಗೂ ಪರಿಸರ ಸಂರಣೆ ಕುರಿತಾಗಿ ತಾಲೂಕಿನ ಭಾಗದ ಜನರಲ್ಲಿ ಅರಿವು ಮೂಡಿಸುವುದಾಗಿದೆ ಎಂದರು.