ಗುರುಮಠಕಲ್​ ತಾಲೂಕಿನ ಪುಟಪಾಕ್​ ಗ್ರಾಪಂ ವ್ಯಾಪ್ತಿಯ ದಂತಾಪುರ ಗ್ರಾಮದಲ್ಲಿ ತಾಪಂ ಸಿಇಒ ಅಮರೇಶ ಪಾಟೀಲ್​ ಜಲ ಅರ್ಪಣಾ ಕಾರ್ಯಾಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯಲ್ಲಾಲಿಂಗ ಡಾ.ಶರಣಬಸಪ್ಪ, ಭೀಮರಾಯ, ಆಂಜನೇಯ ನಾಯಕ್​, ರಾಜಶೇಖರ್​, ಹಣಮಂತ ಜಾಧವ್​ ಇತರರಿದ್ದರು. 
ರಾಜ್ಯ

ಸಾರ್ವಜನಿಕರು ನೀರು ಮಿತವಾಗಿ ಬಳಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ತಾಪಂ ಸಿಇಒ ಅಮರೇಶ ಪಾಟೀಲ್​ ಸಲಹೆ
  • ದಂತಾಪುರದಲ್ಲಿ ಜಲ ಅರ್ಪಣಕ್ಕೆ ಚಾಲನೆ
ಗುರುಮಠಕಲ್​: ನೀರು ನಮ್ಮ ನಿತ್ಯ ಬಳಕೆಯ ಅತ್ಯಮೂಲ್ಯ ಸಂಪತ್ತಾಗಿದ್ದು, ಇದನ್ನು ಹಿತ ಮತ್ತು ಮಿತವಾಗಿ ಬಳಸಬೇಕು ಎಂದು ತಾಲೂಕು ಪಂಚಾಯಿತಿ ಸಿಇಒ ಅಮರೇಶ ಪಾಟೀಲ್​ ಹೇಳಿದರು.
ತಾಲೂಕಿನ ಪುಟಪಾಕ್​ ಗ್ರಾಪಂ ವ್ಯಾಪ್ತಿಯ ದಂತಾಪುರ ಗ್ರಾಮದಲ್ಲಿ ಜಲ ಅರ್ಪಣಾ ಕಾರ್ಯಾಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲ. ಕೆಲವೊಂದು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಯಾರು ಕೂಡ ನೀರು ವಿನಾ@ ಕಾರಣ ಪೋಲು ಮಾಡಬಾರದು. ಅನಗತ್ಯವಾಗಿ ಬಳಕೆ ಮಾಡಬಾರದು ಎಂದು ವರು ಕಿವಿಮಾತು ಹೇಳಿದರು.
ಜಲಮಿಷನ್​ ಯೋಜನೆಯಡಿಯಲ್ಲಿ 24/7 ನೀರು ಸರಬರಾಜು ಆದಲ್ಲಿ ನೀರು ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ತಪ್ಪುತ್ತದೆ. ನಿಮಗೆ ಯಾವಾಗಲೂ ನೀರು ಲಭ್ಯವಿದ್ದಾಗ ನೀರು ಶೇಖರಿಸಿಟ್ಟುಕೊಳ್ಳುವ ಪ್ರಮೇಯ ಬರುವುದಿಲ್ಲ. ಹೀಗಾಗಿ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ತಾಂತ್ರಿಕ ಬೆಂಬಲ ಟಕದ ಸಾಮಾಜಿಕ ಅಭವೃದ್ಧಿ ಸಮಾಲೋಚಕ ಕಾಶೀನಾಥ ಕಲಾಲ್​ ಪ್ರಾಸ್ತಾವಿಕ ಮಾತನಾಡಿ, ಜಲ ಜೀವನ ಮಿಷನ್​ ಯೋಜನೆಯ ಅನುಷ್ಠಾನ 24/7 ನೀರು ಸರಬರಾಜು ಅಂದರೆ 24 ಗಂಟೆ ನೀರು ಸಂಗ್ರಾಹಣಾ ಟ್ಯಾಂಕ್​ನಲ್ಲಿ 24 ಗಂಟೆಗಳ ಕಾಲ ನೀರು ಲಭ್ಯವಿರಬೇಕು. ಅವಶ್ಯಕತೆಗೆ ತಕ್ಕಂತೆ ಬೆಳಗ್ಗೆ ಮತ್ತು ಸಂಜೆ ಬಳಕೆಗೆ ಅನೂಕಲವಾಗಬೇಕು ಎಂದರು.
ಈ ವೇಳೆ ಗ್ರಾಪಂ ಆಡಳಿತಾಧಿಕಾರಿ ಯಲ್ಲಾಲಿಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಶರಣಬಸಪ್ಪ, ಗ್ರಾಪಂ ಪಿಡಿಒ ಭೀಮರಾಯ, ಆಂಜನೇಯ ನಾಯಕ್​, ಜೆಜೆಎಂ ಜಿಲ್ಲಾ ಯೋಜನಾ ವ್ಯವಸ್ಥಾಪಕ ರಾಜಶೇಖರ್​, ಹಣಮಂತ ಜಾಧವ್​ ಸೇರಿ ಅನೇಕರು ಇದ್ದರು.