ಶಹಾಬಾದ್ ಜೋಗಿ ಬಡಾವಣೆಯಲ್ಲಿ ಮೊಹರಂ ನಿಮಿತ್ತ ಆಯೋಜಿಸಿದ್ದ ಖವ್ವಾಲಿ ಕಾರ್ಯಕ್ರಮವನ್ನು ಪಿಎಸ್ಐ ಚಂದ್ರಕಾಂತ ಮೆಕಾಲೆ ಉದ್ಘಾಟಿಸಿದರು. ಕಾಶೀನಾಥ ಜೋಗಿ, ಮಲ್ಲಿಕಾರ್ಜುನ ಭಂಕೂರ, ಮಲ್ಲಪ್ಪ ಶಿರೂರ, ಶಾರೂಖ್ ಸಾಹೇಬ ಇತರರಿದ್ದರು.
- ಶಹಾಬಾದ್ನಲ್ಲಿ ಮೊಹರಂ ನಿಮಿತ್ತ ಆಯೋಜನೆ
- ಗಾಯಕರ ಮೇಲೆ ಹಣದ ಮಳೆ ಸುರಿಸಿದ ಜನ
ಶಹಾಬಾದ್: ಇಂದಿರಾ ನಗರ ಮಡ್ಡಿ&1ರ ಜೋಗಿ ಬಡಾವಣೆಯಲ್ಲಿ ಮೊಹರಂ ನಿಮಿತ್ತ ಬುಧವಾರ ಸಂಜೆ ಆಯೋಜಿಸಿದ್ದ ಖವ್ವಾಲಿ ಕಾರ್ಯಕ್ರಮದಲ್ಲಿ ಗಾಯಕರ ಹಾಡಿಗೆ ಸಾರ್ವಜನಿಕರು ತಲೆದೂಗಿದರು. ಕೆಲವರಂತೂ ಗಾಯಕರ ಮೇಲೆ ಹಣದ ಮಳೆ ಸುರಿಸಿ ಅಭಿಮಾನ ವ್ಯಕ್ತಪಡಿಸಿದರು.
ಜೋಗಿ ಬಡಾವಣೆಯ ಬಾಲಗಂಗಾಧರ ತಿಲಕ ವೃತ್ತದಲ್ಲಿ ಜೋಗಿ ಸಮೂದಾಯದಿಂದ ಮೊಹರಂ ನಿಮಿತ್ತ ಆಯೋಜಿಸಿದ್ದ ಖವ್ವಾಲಿ ಕಾರ್ಯಕ್ರಮದಲ್ಲಿ ಹೈದರಾಬಾದ್ನ ಖ್ಯಾತ ಖವ್ವಾಲಿ ಗಾಯಕ ಸೈಯದ್ ಜಾಕೀರ್ ಹುಸೇನ್ ತಂಡ ಸುಸ್ರಾವ್ಯವಾಗಿ ಖವ್ವಾಲಿಗಳನ್ನು ಹಾಡಿ ಜನರನ್ನು ರಂಜಿಸಿತು. ಪ್ರತಿ ಹಾಡಿಗೂ ಜನ ಗಾಯಕರಿಗೆ ಹಣ ಕೊಟ್ಟು, ವೇದಿಕೆ ಮುಂದೆ ಕುಣಿದಾಡಿದರು. ಜನರ ಉತ್ಸಹದಿಂದ ನಸುಕಿನ ಜಾವದರೆಗೂ ಕಾರ್ಯಕ್ರಮ ನಡೆಯಿತು.
ಪಿಎಸ್ಐ ಚಂದ್ರಕಾಂತೆ ಮೆಕಾಲೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಕಾಶೀನಾಥ ಜೋಗಿ, ಮಲ್ಲಿಕಾರ್ಜುನ ಭಂಕೂರ, ಮಲ್ಲಪ್ಪ ಶಿರೂರ, ಮಲ್ಕಪ್ಪ ಯಂಕಂಚಿ, ಶಾರುಖ್ ಸಾಹೇಬ್, ಮಹ್ಮದ್ ಮಸ್ತಾನ್, ರೇವಣಸಿದ್ದಪ್ಪ ಭಂಡಾರಿ, ಇಮ್ರಾನ್ ಎಂಟಿಆರ್, ರಫೀಕ್ ಶೇಕ್ ಮಿನಾಜ್, ಮಚ್ಚೇಂದ್ರ ಜೋಗಿ, ಮಹ್ಮದ್ ರಕೀರ್, ಶ್ರೀಧರ ಮಕಾಲೆ, ಟಿವಿಎಸ್ ಬಾಬು, ಕಾಂತು, ಚಾಂದ್ ಪಾಷಾ, ರಾಕೇಶ ಬೇಕರಿ, ಶೇಖ್ ಷಾನವಾಸ್, ದಶರಥ ದಾಸರ ಇತರರಿದ್ದರು.