ಬಸವ ಜಯಂತಿ ನಿಮಿತ್ತ ಜೇವರ್ಗಿಯಲ್ಲಿ ಶ್ರೀ ಷಣ್ಮುಖ ಶಿವಯೋಗಿ ಬ್ರಿಗೇಡ್ನಿಂದ ಬಸವೇಶ್ವರ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು.
- ಜೇವರ್ಗಿಯಲ್ಲಿ ಶ್ರೀ ಷಣ್ಮುಖ ಶಿವಯೋಗಿ ಬ್ರಿಗೇಡ್ನಿಂದ ಆಯೋಜನೆ
- ಕುಣಿದು-ಕುಪ್ಪಳಿಸಿದ ಯುವಜನ
ಜೇವರ್ಗಿ: ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ನಿಮಿತ್ತ ಶ್ರೀ ಷಣ್ಮುಖ ಶಿವಯೋಗಿ ಬ್ರಿಗೇಡ್ನಿಂದ ಪಟ್ಟಣದಲ್ಲಿ ಭಾನುವಾರ ಬಸವೇಶ್ವರ ಮೂರ್ತಿಯ ಬೃಹತ್ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಮಧ್ಯಾಹ್ನ ಶ್ರೀ ಷಣ್ಮುಖ ಶಿವಯೋಗಿಗಳ ಮಠದಿಂದ ಶುರುವಾರ ಮೆರವಣಿಗೆ ಅಖಂಡೇಶ್ವರ ವೃತ್ತ ಮಾರ್ಗವಾಗಿ ಬಸವೇಶ್ವರರ ವೃತ್ತದವರೆಗೆ ಸಾಗಿತು. ದಾರಿಯುದ್ದಕ್ಕೂ ನಾಶಿಕ ಡೋಲ್, ಮಣೂರ ಹಲಗಿ, ಕಾರವಾರದ ಗೊಂಬೆ ಕುಣಿತ ಗಮನಸೆಳೆದವು. ವಿವಿಧ ವೇಷ ಭೂಷಣದ ಪಾತ್ರಗಳು ರಂಜಿಸಿದವು. ಯುವಕರು, ಮುಖಂಡರು ಹಾಗೂ ಅಸಂಖ್ಯ ಬಸವಾಭಿಮಾನಿಗಳು ಉತ್ಸಾಹದಿಂದ ಕುಣಿದಾಡಿದರು.
ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಯಡ್ರಾಮಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಪ್ರಮುಖರಾದ ರಾಜಶೇಖರ ಸೀರಿ, ಶಿವರಾಜ ಪಾಟೀಲ್ ರದ್ದೇವಾಡಗಿ, ಷಣ್ಮುಖಪ್ಪ ಸಾಹು ಗೋಗಿ, ಬಾಪುಗೌಡ ಪಾಟೀಲ್ ಬಿರಾಳ, ಸಿದ್ದು ಅಂಗಡಿ, ಶರಣಬಸವ ಕಲ್ಲಾ, ಗುರುಗೌಡ ಮಾಲಿಪಾಟೀಲ್, ಗುಂಡುಸಾಹು ಗೋಗಿ, ಸಂಗಣ್ಣಗೌಡ ಪಾಟೀಲ್ ಆಂದೋಲಾ, ಸುನೀಲ್ ಸಜ್ಜನ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ನೀಲಕಂಠ ಅವಂಟಿ, ರವಿ ಕೋಳಕೂರ, ಅನೀಲ ರಾಂಪೂರ, ಮಲ್ಲಿಕಾಜುನ ಬಿರಾದಾರ, ಧರ್ಮರಾಜ ಜೋಗೋರ, ಶಿವಾನಂದ ಮೂಧೋಳ, ಸಂಗಣ್ಣಗೌಡ ಅವರಾದ, ಶರಣು ಕೋಳಕೂರ, ಸಂತೋಷ ಸಾಹು ಮದ್ರಿ, ಚಂದ್ರಶೇಖರ ಪಾಟೀಲ್, ಕರುಣೇಶ ಘಂಟಿ, ಮಲ್ಲಿಕಾರ್ಜುನ ಅವರಾದ, ಸುನೀಲ ಹಳ್ಳಿ, ಸಾಹೇಬಗೌಡ ಹಿರೇಗೌಡ ಚಿಕ್ಕಜೇವರ್ಗಿ, ಸಿದ್ದಣ್ಣ ಗಡ್ಡದ, ರಾಜಶೇಖರ ವಾರದ ಇತರರಿದ್ದರು.