ಸುರಪುರ ನಗರದ ಬುದ್ಧ ವಿಹಾರದಲ್ಲಿ ಶುಕ್ರವಾರ ಭಗವಾನ್​ ಗೌತಮ ಬುದ್ಧ ಜಯಂತಿ ಆಚರಿಸಲಾಯಿತು. 
ರಾಜ್ಯ

ವಿಶ್ವಕ್ಕೆ ಬೆಳಕು ನೀಡಿದ ಬುದ್ಧನ ತತ್ವಗಳು

ಸುರಪುರ: ನಗರದ ಬುದ್ಧ ವಿಹಾರದಲ್ಲಿ ಶುಕ್ರವಾರ ಬುದ್ಧ ಜಯಂತಿಯನ್ನು ಶ್ರದ್ಧಾ&ಭಕ್ತಿಯೊಂದಿಗೆ ಆಚರಿಸಲಾಯಿತು. ಗೌತಮ ಬುದ್ಧರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಮೇಣದ ಬತ್ತಿ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಭಗವಾನ್​ ಗೌತಮ ಬುದ್ಧರು ಜ್ಞಾನದ ಸಂಕೇತ, ಜಗದ ಬೆಳಕು. ಜಗತ್ತಿಗೆ ಶಾಂತಿ, ಕರುಣೆಯ ಸಂದೇಶ ಸಾರಿದ ಅವರ ತತ್ವಗಳು ಇಂದಿಗೂ ಹಾಗೂ ಎಂದೆಂದಿಗೂ ಪ್ರಸ್ತುತವಾಗಿವೆ. ಜಗತ್ತಿಗೆ ಅಹಿಂಸಾ ಮಾರ್ಗ ಹೇಳಿದ ಅವರ ಪಂಚಶೀಲ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬುದ್ಧನ ತತ್ವ&ಬೋಧನೆಗಳು ವಿಶ್ವಕ್ಕೆ ಬೆಳಕಾಗಿವೆ ಎಂದರು.
ಗೌತಮ ಬುದ್ಧರು ಸಾರಿದ ತತ್ವ, ಸಿದ್ಧಾಂತಗಳು ಸಾರ್ವಕಾಲಿಕ ಸತ್ಯವಾಗಿವೆ. ಈಗಿನ ಯುದ್ದಗಳಿಗೆ ಬುದ್ಧರ ತತ್ವಗಳಲ್ಲಿ ಪರಿಹಾರ ಅಡಗಿದೆ. ಮಹಾತ್ಮ ಬುದ್ಧರ ನೀಡಿದ ಅಹಿಂಸೆ ಮತ್ತು ಸಮಾನತೆಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಬುದ್ಧನ ಜ್ಞಾನದ ದೀಪ್ತಿ ಇಂದಿಗೂ ಪ್ರಜ್ವಲಿಸುತ್ತಿದೆ ಎಂದು ತಿಳಿಸಿದರು.
ಪ್ರಮುಖರಾದ ಮಾನಪ್ಪ ಕಟ್ಟಿಮನಿ, ಸಿದ್ದಣ ಸುರಪುರಕರ್​, ಮಹೇಶ ಸುರಪುರ, ಮರೆಪ್ಪ ತೇಲ್ಕರ್​, ಸಿದ್ದಪ್ಪ, ಬಲಶೆಟ್ಟಿಯಾಳ, ನಿಂಗಣ್ಣ, ಪತ್ರಕರ್ತರಾದ ಶ್ರೀಮಂತ ಚಲುವಾದಿ ಹಸನಾಪುರ, ಶರಣು ಚಲುವಾದಿ, ಶಂಕರ ಕಾಂಬ್ಳೆ, ಬಸವರಾಜ ಶೆಳ್ಳಗಿ, ಸಂಗಣ್ಣ ಹೆಮ್ಮಡಗಿ, ಹಣಮಂತ ತೇಲ್ಕರ್​ ಸೇರಿ ಇನ್ನಿತರರಿದ್ದರು.