ಮತ್ತೆ ಮುನ್ನೆಲೆಗೆ ಬಂದ ಅರ್ಚಕರ ವಿವಾದ priest
- ಆಲಂಬಗಿರಿಯ ಸ್ವಯಂ ಉದ್ಭವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಕಲಹ
- ಜಿಲ್ಲಾಧಿಕಾರಿಯಿಂದ ನ್ಯಾಯಾಲಯದ ಆದೇಶ ಉಲ್ಲಂನೆ ಆರೋಪ
ಚಿಂತಾಮಣಿ: ತಾಲೂಕಿನ ಸುಪ್ರಸಿದ್ಧ ಆಲಂಬಗಿರಿ ಕ್ಷೇತ್ರದ ಸ್ವಯಂ ಉದ್ಭವ ಶ್ರೀಲಕ್ಷಿ$್ಮ ವೆಂಕಟರಮಣಸ್ವಾಮಿ ದೇವಳದಲ್ಲಿ ಹಳೆಯ ಅರ್ಚಕರಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ನ್ಯಾಯಾಲಯದ ಆದೇಶವನ್ನು ಜಿಲ್ಲಾಧಿಕಾರಿ ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಭಕ್ತರು ಆರೋಪಿಸಿದ್ದಾರೆ. priest
ಪ್ರವರ ಪರೀಕ್ಷೆಯನ್ನು ಉತ್ತಿರ್ಣ ಮಾಡಿರುವವರಿಗೆ ಅರ್ಚಕ ವೃತ್ತಿ ಮಾಡಲು ಅವಕಾಶ ಮಾಡಿಕೊಡುವಂತೆ ಈಗಾಗಲೇ ಹೈಕೋರ್ಟ್ ತೀರ್ಪು ನೀಡಿದೆ. ಆದರೆ, ಇಲ್ಲಿನ ಹಳೇ ಅರ್ಚಕರಾರೂ ಪ್ರವರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು, ಹಳೇ ಅರ್ಚಕರಾದ ಸುದರ್ಶನಾಚಾರ್ ಮತ್ತು ಶ್ರೀನಿವಾಸಾಚಾರ್ ಅವರಿಗೆ ಪೂಜೆ ಮಾಡಲು ಅವಕಾಶ ನೀಡಿರುವುದು ಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳು ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ವಿನಂತಿಸಿದ್ದಾರೆ.
ಆಗಿದ್ದೇನು?: ಹಲವು ದಶಕಗಳಿಂದ ಶಿಥಿಲವಾಗಿದ್ದ ದೇವಾಲಯವನ್ನು ಜೀಣೋರ್ದ್ಧಾರ ಮಾಡಿ, ಹಳೇ ಅರ್ಚಕರಿಂದ ಉತ್ತಮ ಪೂಜಾ ವಿಧಾನ ಹಾಗೂ ದೇವಾಲಯದ ಅಭಿವೃದ್ಧಿ ನಿರೀಸಿದ್ದೆವು. ಆದರೆ, ಅರ್ಚಕರು ಸಹಕಾರ ನೀಡಲಿಲ್ಲ.
ಅದಕ್ಕೂ ಮೊದಲು ಆಗಿನ ಜಿಲ್ಲಾಧಿಕಾರಿಗಳು, ಅರ್ಚಕರನ್ನು ನೇಮಿಸುವ ವೇಳೆ ಎರಡು ವರ್ಷದಲ್ಲಿ ಪ್ರವರ ಪರೀಕ್ಷೆ ಉತ್ತೀರ್ಣ ಮಾಡಬೇಕು. ಇಲ್ಲವಾದಲ್ಲಿ ವೃತ್ತಿಯಿಂದ ತೆಗೆಯಲಾಗುವುದು ಎಂಬ ಷರತ್ತು ಹಾಕಿದ್ದರು. ಆದರೆ, ಅರ್ಚಕರಾರೂ ಪ್ರವರ ಪರೀಕ್ಷೆ ಉತ್ತಿರ್ಣ ಮಾಡಲಿಲ್ಲ. ಆದಾಗ್ಯೂ, ದೇವಾಲಯ ನಮ್ಮದು, ಪೂಜೆ ಮಾಡುವುದು ನಮ್ಮ ಹಕ್ಕು, ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಮೊಂಡುತನ ಪ್ರದರ್ಶಿಸಿದರು. ಪುನ@ ಏಕಾಏಕಿ ದೇವಾಲಯಕ್ಕೆ ಬೀಗ ಹಾಕಿ ಪೂಜೆ ಮಾಡಲಿಲ್ಲ. 15 ದಿನಗಳ ಬಳಿಕ ಜಿಲ್ಲಾಧಿಕಾರಿಗಳ ಆದೇಶದಂತೆ ಚಿಂತಾಮಣಿ ತಹಸೀಲ್ದಾರ್ ಬೀಗ ಮುರಿದು ನೂತನ ಅರ್ಚಕರನ್ನು ನೇಮಿಸಿ, ಹಳೇ ಅರ್ಚಕರನ್ನು ಅಮಾನತು ಮಾಡಿದರು.
ಹಿಂದಿನ ಅರ್ಚಕರಾದ ರಾಮಾಚಾರ್, ಸುದರ್ಶನಾಚಾರ್ ಹಾಗೂ ಶ್ರೀನಿವಾಸಾಚಾರ್ ಅಮಾನತು ಪ್ರಕರಣ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಇರುವದರ ನಡುವೆ ತಹಸೀಲ್ದಾರ್, ಒತ್ತಡಗಳಿಗೆ ಮಣಿದು ಹಿಂದಿನ ಅರ್ಚಕರಿಗೇ ಪೂಜೆ ಮಾಡುವ ಆದೇಶ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿತ್ತು.
ಈ ವಿವಾದ ಮುಜರಾಯಿ ಇಲಾಖೆಯ ಆಯುಕ್ತರ ಕಚೇರಿ ಹಾಗೂ ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥವಾಗಿಲ್ಲ.ಪರಿಸ್ಥಿತಿ ಹೀಗಿದ್ದರೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಳೇ ಅರ್ಚಕರಿಗೆ ಪೂಜೆಯನ್ನು ಮಾಡಲು ಅವಕಾಶ ನೀಡಿರುವುದನ್ನು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.