ಬೇಲೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು. ಡಾ.ಸಂತೋಷ್, ಮೆಡಿಕಲ್ಸ್ ಮಹೇಶ್, ಧರ್ಮ ಪ್ರಕೃತಿ, ಮೋಹನ್, ಡಾ.ರಾಜೀವ್, ಡಾ.ಸತೀಶ್, ಡಾ.ಜಯಲಕ್ಷ್ಮೀ, ಡಾ.ಗುರುಮೂರ್ತಿ ಇದ್ದರು. 
ರಾಜ್ಯ

ಹೆಚ್ಚುತ್ತಿದೆ ವೈದ್ಯರನ್ನು ದೂಷಿಸುವ ಪದ್ಧತಿ

ಪ್ರಮುಖ ಮುಖ್ಯಾಂಶಗಳು

  • ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್
  • ವೈದ್ಯರ ದಿನಾಚರಣೆ
ಬೇಲೂರು: ಆಪತ್ಕಾಲದಲ್ಲಿ ರೋಗಿಯ ಪ್ರಾಣ ಕಾಪಾಡುವ ಅಸಾಮಾನ್ಯ ಕೆಲಸ ಮಾಡುವ ವೈದ್ಯರನ್ನು ನಡೆದಾಡುವ ದೇವರೆಂದು ಪರಿಗಣಿಸಬೇಕು ಎಂದು ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಹೇಳಿದರು.
ವೈದ್ಯರ ದಿನಾಚರಣೆ ಅಂಗವಾಗಿ ದೇಶಭಕ್ತರ ಬಳಗದಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ರಾಜೀವ್, ಡಾ.ಸತೀಶ್, ಡಾ.ಜಯಲಕ್ಷ್ಮೀ, ಡಾ.ಗುರುಮೂರ್ತಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸಣ್ಣಪುಟ್ಟ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಬಾರದು. ಪ್ರಸ್ತುತ ವೈದ್ಯಕೀಯ ವೃತ್ತಿ ಮುಳ್ಳಿನ ಮೇಲಿನ ನಡಿಗೆ ಇದ್ದಂತೆ. ವೈದ್ಯರು ಎಷ್ಟೇ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದರೂ ಆತನದಲ್ಲದ ಕಾರಣಕ್ಕೆ ನಿಂದನೆ ಮಾತು ಕೇಳುವಂಥ ಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ಯಾರಿಗೂ ತಾಳ್ಮೆ ಎಂಬುದಿಲ್ಲ. ಅವರವರ ಸ್ವಯಂಕೃತ ಅಪರಾಧಕ್ಕೆ ವೈದ್ಯರನ್ನು ದೂಷಿಸುವ ಪದ್ಧತಿ ದಿನೇ ದಿನೆ ಜಾಸ್ತಿ ಆಗುತ್ತಿರುವುದು ವಿಷಾದನೀಯ. ರೋಗಿಯ ಪ್ರಾಣ ಕಾಪಾಡುವಲ್ಲಿ ಳ ಮುತುವರ್ಜಿಯಿಂದ ಕೆಲಸ ಮಾಡುವ ವೈದ್ಯರನ್ನು ಗೌರವದಿಂದ ನೋಡಿ ಎಂದು ಮನವಿ ಮಾಡಿದರು.
ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ ಮೆಡಿಕಲ್ಸ್ ಮಹೇಶ್, ಉಪನ್ಯಾಸಕ ಧರ್ಮ ಪ್ರಕೃತಿ ಮಾತನಾಡಿದರು. ಬಳಗದ ಸದಸ್ಯರಾದ ಮೋಹನ್, ವೈದ್ಯರಾದ ಡಾ.ರಾಜೀವ್, ಡಾ.ಸತೀಶ್, ಡಾ.ಜಯಲಕ್ಷ್ಮೀ, ಡಾ.ಗುರುಮೂರ್ತಿ, ಮಲ್ಲಿಕಾರ್ಜುನ ಮೆಡಿಕಲ್ ಸೌಮ್ಯಾ, ಲಕ್ಷ್ಮೀ ಇದ್ದರು.
ಚಿತ್ರ:1(ಬಿಎಲ್‌ಆರ್)3-