ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಡಾ.ಸದಾನಂದ ಪೆರ್ಲ ದೀಪ ಬೆಳಗಿದರು. ವಿಜಯಕುಮಾರ ಪಾಟೀಲ್​, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ್​ ಛಪ್ಪರ್​ಬಂದಿ, ಡಾ.ಸಂಧ್ಯಾ ಕಾನೇಕರ್​, ಮಂಜುನಾಥ ನಾಲವಾರಕರ್​, ಪೂರ್ಣಿಮಾ ಜಾನೆ, ಧರ್ಮರಾಜ ಜವಳಿ, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಶಿವಲೀಲಾ ಕಲಗುರ್ಕಿ ಇದ್ದರು. 
ರಾಜ್ಯ

ಬಿಸಿಲ ಧಗೆಗೆ ತಂಪೆರೆದ ಕಾವ್ಯ ಝರಿ

ಪ್ರಮುಖ ಮುಖ್ಯಾಂಶಗಳು

  • ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ ಹೇಳಿಕೆ
  • ಬಿಸಿ ಉಸಿರು ಕಾವ್ಯ ನೀರು ಜಾಗೃತಿ ಕವಿಗೋಷ್ಠಿ
ಕಲಬುರಗಿ: ಬಿಸಿಲ ಬೇಗೆಯ ಬದುಕು ಕಟ್ಟಿಕೊಂಡವರ ನೋವಿಗೆ ಸ್ಪಂದಿಸಿದ ಬಿಸಿ ಉಸಿರು ಕಾವ್ಯ ನೀರು ಕವಿಮನವು ಜಾಗೃತಿಯ ದೀಪ ಹಚ್ಚಿದೆ ಎಂದು ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದಪೆರ್ಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಸಿ ಉಸಿರು ಕಾವ್ಯ ನೀರು ವಿಶೇಷ ಜಾಗೃತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಕವಿಗೋಷ್ಠಿ ಬಿಸಿಲ ಧಗೆಗೆ ಕಾವ್ಯದಝರಿ ನಿಜಕ್ಕೂ ತಂಪೆರೆದಂತಾಗಿದೆ. ಇಂದು ಪ್ರಕೃತಿಯ ತಾಪಮಾನ ಏರಿಕೆ, ಅದರಿಂದ ಪರಿಸರಕ್ಕೆ ಉಂಟಾಗುವ ಹಾನಿ, ನವ ನಾಗರೀಕತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲಿನ ಶೋಷಣೆಗೆ ಕವಿಗಳು ಭಾವನೆಗಳ ಮೂಲಕ ಕಾವ್ಯ ಕಟ್ಟಿಕೊಟ್ಟ ಬಗೆ ಅತ್ಯಂತ ವಿಶಿಷ್ಟವಾಗಿತ್ತು ಎಂದರು.
ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದು ಮಿತಿಮೀರಿದ ಬಿಸಿಲಿನಿಂದ ರಸಿಕೊಳ್ಳಲು ನಾವುಗಳು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿಶಿಷ್ಠ ಶೈಲಿಯ ಕಾವ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನ ಪರಿಷತ್ತು ಮಾಡಿದೆ. ವಿಭಿನ್ನ ಕಾರ್ಯಕ್ರಮಗಳ ಮೂಲಕವೇ ಜನಜಾಗೃತಿ ಮೂಡಿಸುವ ಕಾರ್ಯವನ್ನೂ ಪರಿಷತ್ತು ಮಾಡುತ್ತಿದೆ ಎಂದರು.
ವ್ಯೆದ್ಯಾಧಿಕಾರಿ ಡಾ.ಸಂಧ್ಯಾ ಕಾನೇಕರ್​, ಜನಪರ ಹೋರಾಟಗಾರ ಮಂಜುನಾಥ ನಾಲವಾರಕರ್​, ನ್ಯಾಯವಾದಿ ಪೂರ್ಣಿಮಾ ಜಾನೆ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಧರ್ಮರಾಜ ಜವಳಿ, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಶಿವಲೀಲಾ ಕಲಗುರ್ಕಿ ವೇದಿಕೆ ಮೇಲಿದ್ದರು.
ಕವಿಗಳಾದ ವೆಂಕಟೇಶ ಜನಾದ್ರಿ, ವಿಜಯಕುಮಾರ ಪಾಟೀಲ ವಿಕೆ ಸಲಗರ, ಶಾಂತಾ ಪಸ್ತಾಪೂರ, ಅಮೃತ ದೊಡ್ಮನಿ, ಮೋಹನ ಕಟ್ಟಿಮನಿ, ಅನುಪಮಾ ಅಪಗುಂದೆ, ಡಾ.ಶೀಲಾದೇವಿ ಬಿರಾದಾರ ಅವರು ಬಿಸಿಲಿನ ರಕ್ಷಣೆ ಕುರಿತು ಜಾಗೃತಿ ಕವನ ವಾಚಿಸಿ ವಿಶೇಷ ಗಮನ ಸೆಳೆದರು.
ಜ್ಞಾನವಂತ ನಿಜವಾದ ಶ್ರೀಮಂತ
ಪಿಯುಸಿ ದ್ವೀತಿಯ ವರ್ಷದ ಪರೀೆಯ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಖ್ಯಾತಿ ವಿಜ್ಞಾನಿ ಡಾ.ಎಂ.ಎಸ್​.ಜೋಗದ ಮಾತನಾಡಿ, ಜೀವನದಲ್ಲಿ ನಮ್ಮ ಗುರಿ ತಲುಪಬೇಕಾದರೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಆಸ್ತಿಕ್ಕಿಂತ ಶಿಕ್ಷಣವನ್ನೇ ಆಸ್ತಿಯನ್ನಾಗಿ ಮಾಡಬೇಕು. ಒಳ್ಳೆಯ ಶಿಕ್ಷಣವೇ ನಿಜವಾದ ಸಂಪತ್ತು. ಶಿಕ್ಷಣದಿಂದ ಗೌರವ ಸ್ಥಾನಮಾನಗಳು ಸಮಾಜದಲ್ಲಿ ದೊರೆಯುತ್ತದೆ. ಈ ದಿಸೆಯಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಹಾಕಿಕೊಂಡ ಗುರಿ ಮುಟ್ಟಬೇಕು ಎಂದು ಹೇಳಿದರು.
"

ಕವಿಯು ಸಾಮಾಜಿಕ ಜವಾಬ್ದಾರಿ ಹೊತ್ತು ಉತ್ತರದಾಯಿತ್ವದಿಂದ ಒಬ್ಬ ರಾಯಭಾರಿಯಾಗಿ ಕೆಲಸ ಮಾಡುವ ಹೊಣೆಗಾರಿಕೆಯ ಎಚ್ಚರಿಕೆಯಿಂದ ಮೂಡಿ ಬಂದ ಕವನಗಳು ಬಿಸಿಲ ಧಗೆಗೆ ಜಾಗೃತಿಯ ದೀಪ ಹಚ್ಚಿದ ಕವನಗಳು ಬಿಸಿಲ ಉಸಿರಿಗೆ ಕಾವ್ಯ ಗಂಗೆಯಾಗಿ ಹರಿದು ಸಹೃದಯರ ಮನ ಗೆದ್ದವು ಎಂದರು.