ಹುಣಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯನ್ನು ಎಐಸಿಸಿ ಉಸ್ತುವಾರಿ ರಾಜೇಶ್ ಠಾಕೂರ್ ಉದ್ಘಾಟಿಸಿದರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ರವಿಪ್ರಸನ್ನ ಇತರರಿದ್ದರು. 
ರಾಜ್ಯ

ಕಾಂಗ್ರೆಸ್‌ನ ಆಧಾರಸ್ತಂಭಗಳು ಕಾರ್ಯಕರ್ತರು

ಪ್ರಮುಖ ಮುಖ್ಯಾಂಶಗಳು

  • ಜಾರ್ಖಂಡ್ ರಾಜ್ಯದ ಕೆಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್ ಠಾಕೂರ್
  • ಕಾಂಗ್ರೆಸ್ ಕಚೇರಿ
ಹುಣಸೂರು: ಬೂತ್ ಮಟ್ಟದ ಕಾರ್ಯಕರ್ತರು, ಬ್ಲಾಕ್ ಅಧ್ಯಕ್ಷರು ಹಾಗೂ ಯೂತ್ ಕಾಂಗ್ರೆಸ್ ಪದಾಧಿಕಾರಿಗಳೇ ಕಾಂಗ್ರೆಸ್ ಸಂಘಟನೆಯ ಪ್ರಮುಖ ಆಧಾರಸ್ತಂಭಗಳು ಎಂದು ಎಐಸಿಸಿ ಉಸ್ತುವಾರಿ, ಜಾರ್ಖಂಡ್ ರಾಜ್ಯದ ಕೆಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್ ಠಾಕೂರ್ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಸಂಘಟನ್ ಸೃಜನ್ ಅಭಿಯಾನ್ ಕಾರ್ಯಕ್ರಮದಲ್ಲಿ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕಿ ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚಿಂತನೆಗಳನ್ನು ತಳ ಮಟ್ಟದಲ್ಲಿ ಜಾರಿಗೊಳಿಸಿ ದೇಶದಲ್ಲಿ ಕಾಂಗ್ರೆಸ್ ಪುನರ್ ಸಂಘಟನೆಗೆ ಅಭಿಯಾನ ಆರಂಭವಾಗಿದೆ. ಕಾಂಗ್ರೆಸ್ ಸಂಘಟನೆ ಗ್ರಾಮ, ವಾರ್ಡ್ ಮತ್ತು ಬೂತ್ ಮಟ್ಟದವರೆಗೆ ಬಲಿಷ್ಠವಾಗಿರಬೇಕು ಎಂದರು.
ಪಕ್ಷದ ಕಾರ್ಯಕರ್ತರು ಪಕ್ಷದ ಸಿದ್ಧಾಂತ ಮತ್ತು ಜನಪರ ವಿಚಾರಗಳನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ ಮಾಡಬೇಕು. ಸಮಸ್ಯೆಗಳಿಗಾಗಿ ಹೋರಾಡಬೇಕು. ಕಾಂಗ್ರೆಸ್‌ನ ಸಿದ್ಧಾಂತಗಳಿಗೆ ಸಂಪೂರ್ಣ ಬದ್ಧರಾಗಿರಬೇಕು ಎಂದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಅಧ್ಯಕ್ಷರು, ಕಾರ್ಯಕರ್ತರ ಮಾಹಿತಿ ಸಂಗ್ರಹಿಸುತ್ತಿದ್ದು, ತಮ್ಮ ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಂಡರೆ ಎಐಸಿಸಿ ಉಸ್ತುವಾರಿಗಳು ಹೈಕಮಾಂಡ್‌ಗೆ ಮಾಹಿತಿ ನೀಡಲಿದ್ದಾರೆ. ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ಏನು ಮಾಡುತ್ತಿದ್ದೀ? ಯಾವ ರೀತಿಯ ಸಂಘಟನೆಯಲ್ಲಿ ತೊಡಗಿದ್ದೀರಿ? ಹಾಗೂ ತಾಲೂಕು, ಜಿಲ್ಲೆಯ ಕಾಂಗ್ರೆಸ್‌ನ ಅಧ್ಯಕ್ಷರು, ಪದಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಮಗ್ರ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯದಲ್ಲಿ ಸದೃಢವಾದ ಪಕ್ಷ ಕಟ್ಟುವ ಉದ್ದೇಶದಿಂದ ಈ ಅಭಿಯಾನ ಪ್ರಾರಂಭವಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರ್‌ನಾಥ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವಪ್ರಸಾದ್, ಕೆಪಿಸಿಸಿ ವಕ್ತಾರ ಬಸವರಾಜು, ಕಾರ್ಯಾಧ್ಯಕ್ಷ ದೇವರಾಜ್, ಬ್ಲಾಕ್ ಅಧ್ಯಕ್ಷ್ಷ ಪ್ರೇಮ್ ಕುಮಾರ್, ರವಿಪ್ರಸನ್ನ, ಬಾಲ್ ಸುಂದರ್, ಸುನೀತಾ ಜಯರಾಮೇಗೌಡ, ಅಕ್ರಮ- ಸಕ್ರಮ ಸದಸ್ಯ ಕುಮಾರ್, ಗ್ಯಾರಂಟಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಘು ಮುಖಂಡರಾದ ಬಸವರಾಜ್, ಕುನ್ನೇಗೌಡ, ಗೌರಮ್ಮ ಸೋಮಶೇಖರ್, ಅಣ್ಣಯ್ಯನಾಯಕ್, ಕೆಂಪನಾಯಕ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.