ಮಾದನಹಿಪ್ಪರಗಿಯ ಖಂಡೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿಭಾ ಫುಲೆ ಅವರ 199ನೇ ಜಯಂತಿ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದರಾಮ ಮೇತ್ರೆ ಉದ್ಘಾಟಿಸಿದರು. ಶ್ರೀ ಶಾಂತವೀರ ಶಿವಾಚಾರ್ಯ, ಆರ್.ಕೆ.ಪಾಟೀಲ್, ಗಣೇಶ ಪಾಟೀಲ್, ಪ್ರಥಮೇಶ ಮೇತ್ರೆ, ಸಿದ್ದಾರಮ ತೋಳನೂರ ಇತರರಿದ್ದರು
- ಮಾಜಿ ಸಚಿವ ಸಿದ್ದರಾಮ ಮೇತ್ರೆ ಶ್ಲಾಘನೆ
- ಮಾದನಹಿಪ್ಪರಗಿಯಲ್ಲಿ ಜಯಂತ್ಯುತ್ಸವ ಸಂಭ್ರಮ
ಮಾದನಹಿಪ್ಪರಗಿ: ಅಂಧಶ್ರದ್ಧೆ, ಮೂಢನಂಬಿಕೆ, ಗುಲಾಮಗಿರಿ ತುಂಬಿದ ದೇಶದಲ್ಲಿ ಜನಸಾಮಾನ್ಯರು, ದೀನ&ದಲಿತರ ಪರ ಧ್ವನಿ ಎತ್ತಿದ ಶ್ರೇಷ್ಠ ಸಮಾಜ ಸುಧಾರಕರು ಮಹಾತ್ಮ ಜ್ಯೋತಿಭಾ ಫುಲೆ ದಂಪತಿ ಎಂದು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸಿದ್ದರಾಮ ಮೇತ್ರೆ ಬಣ್ಣಿಸಿದರು.
ಶ್ರೀ ಖಂಡೇಶ್ವರ ದೇವಾಲಯದಲ್ಲಿ ತಾಲೂಕು ಮಾಳಿ ಮಾಲಗಾರ ಶ್ರೇಯೋಭಿವೃದ್ಧಿ ಸಂದಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿಭಾ ಫುಲೆ ಅವರ 199ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಜ್ಯೋತಿಭಾ ಮತ್ತು ಸಾವಿತ್ರಿ ದಂಪತಿ ದೇಶದಲ್ಲಿ ಜನಿಸದೆ ಹೋಗಿದ್ದರೆ ಸಿ ಶಿಕ್ಷಣ ಮರೀಚಿಕೆ ಆಗುತ್ತಿತ್ತು. ಪುರುಷ ಪ್ರಧಾನ ಸಮಾಜದ ವಿರುದ್ಧ ಹೋರಾಡಿ ತಮ್ಮ ಜೀವನವನ್ನೇ ಸವೆಸಿದ ಮಹಾನ ವ್ಯಕ್ತಿಗಳು. ಹಿಂದುಳಿದವರ ಅಭಿವೃದ್ಧಿಗಾಗಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದ್ದನ್ನು ಯಾರೂ ಮರೆಯಲಾರರು ಎಂದರು.
ಶ್ರೀಶೈಲ ಮಾಡ್ಯಾಳ ಉಪನ್ಯಾಸ ನೀಡಿ, ಶಿಕ್ಷಣವೇ ಬದುಕಿನ ಮಾರ್ಗ, ಶಿಕ್ಷಣದಿಂದಲೇ ಮನುಷ್ಯತ್ವ ಹಾಗೂ ಮೂರ್ಖತನಕ್ಕೆ ಶಿಕ್ಷಣವೇ ಮದ್ದು ಎಂಬ ಫುಲೆ ಅವರ ೂಷಣೆಗಳು ಸರ್ವಕಾಲಿಕವಾಗಿವೆ ಎಂದು ಹೇಳಿದರು.
ಕಲಬುರಗಿ&ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಮಾತನಾಡಿದರು.
ಚಲಗೇರಾದ ಶ್ರೀ ಶಾಂತವೀರ ಶಿವಾಚಾರ್ಯ, ಶ್ರೀ ಅಭಿನವ ಶಿವಲಿಂಗ ಸ್ವಾಮಿಗಳು ಸಾನ್ನಿಧ್ಯ, ತಾಲೂಕು ಮಾಳಿ ಮಾಲಗಾರ ಸಮಾಜದ ಅಧ್ಯಕ್ಷ ಗಣೇಶ ರಾವಸಾಹೇಬ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿದೇರ್ಶಕ ಶಿವಶರಣಪ್ಪ ಮೂಳೆಗಾಂವ, ದುಧನಿ ನಗರಸಭೆ ಅಧ್ಯಕ್ಷ ಪ್ರಥಮೇಶ ಮೇತ್ರೆ, ಅಕ್ಕಲಕೋಟ ತಾಪಂ ಸದಸ್ಯ ಮಾಣಿಕ ಮಾಡ್ಯಾಳೆ, ಪ್ರಮುಖರಾದ ಸಿದ್ದರಾಮ ತೋಳನೂರ, ಸುಭಾಷ ಬಳೂರಗಿ, ಗುರುನಾಥ ಜಂಧೆ, ಗುರುನಾಥ ಧುಳೆ, ಬಸವರಾಜ ಮೇತ್ರಿ, ಮಲ್ಲಿಕಾರ್ಜುನ ವಣದೆ, ವಿಶ್ವನಾಥ ಧುಳೆ, ಸಾತಪ್ಪ ಕೋಳಶೆಟ್ಟಿ, ಶಿವಲಿಂಗಪ್ಪ ಮೈಂದರಗಿ, ವಿಶ್ವನಾಥ ಪರೇಣಿ, ಗುರುನಾಥ ಶಿವಪುರೆ, ಬಸವರಾಜ ಪ್ಯಾಟಿ, ಶಿವಪುತ್ರ ಯಲ್ದೆ ಇತರರಿದ್ದರು. ಸಮಾಜದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿ, ನಿವೃತ್ತ ನೌಕರರು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.