ಕಲಬುರಗಿಯಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ್​ ಉದ್ಘಾಟಿಸಿದರು. ಶ್ರೀ ಸೋಮಶೇಖರ ಶಿವಾಚಾರ್ಯ, ಬಾಲ ಬ್ರಹ್ಮಚಾರಿ ಶ್ರೀ ರಾಜ ಶಿವಯೋಗಿಗಳು, ಡಾ.ನಾಗಪ್ಪ ಗೋಗಿ, ಈರಣ್ಣ ಹಡಪದ ಸಣ್ಣೂರ, ಜಗದೀಶ್ವರಿ ನಾಸಿ ಇತರರಿದ್ದರು. 
ರಾಜ್ಯ

ಸಮಾನತೆ, ಕಾಯಕ ನಿಷ್ಠೆಗೆ ಶರಣರ ತತ್ವ ಒತ್ತು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಲ್ಲಮಪ್ರಭು ಪಾಟೀಲ್​ ಅಭಿಮತ
  • ಕಲಬುರಗಿ ಪಂಡಿತ ರಂಗಮಂದಿರದಲ್ಲಿ ಹಡಪದ ಅಪ್ಪಣ್ಣ ಜಯಂತಿ
ಕಲಬುರಗಿ: ಹಡಪದ ಸಮಾಜ ಅನಾದಿ ಕಾಲದಿಂದಲೂ ಕಾಯಕ ನಿಷ್ಠೆಗೆ ಹೆಸರುವಾಸಿ. 12ನೇ ಶತಮಾನದ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರ ಕೊಡುಗೆ ಅಮೂಲ್ಯ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್​ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಡಿ ಡಾ.ಎಸ್​.ಎಂ. ಪಂಡಿತ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್​. ಅಂಬೇಡ್ಕರ್​ ರಚಿಸಿದ ಸಂವಿಧಾನದ ಮೂಲ ತತ್ವಗಳಿಗೂ ಶರಣರ ವಚನಗಳೇ ಪ್ರಮುಖ ಆಧಾರ ಮತ್ತು ಪ್ರೇರಣೆ ಎಂದರು.
ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಾತಾನಾಡಿ, ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಳ್ಳುವ ಮೂಲಕ ದೂರದೃಷ್ಟಿ ಮೆರೆದಿದ್ದರು. ಯಾರೇ ಬಸವಣ್ಣನವರ ಭೇಟಿಗೆ ಬಂದರೂ ಮೊದಲು ಹಡಪದ ಅಪ್ಪಣ್ಣನವರ ದರ್ಶನ ಪಡೆದು ಅವರ ಅನುಮತಿ ಕೇಳಿಯೇ ಬರಬೇಕಾಗಿತ್ತು. ರೈತ ಸಮಾಜ ಹೊಟ್ಟೆಗೆ ಅನ್ನ ನೀಡಿದರೆ, ಹಡಪದ ಸಮಾಜ ಮನುಷ್ಯನನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಯುವಕರು ಕಾಯಕ ನಂಬಿದವನೇ ನಿಜವಾದ ನಾಯಕನಾಗಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.
ಶಹಾಬಾದ್​ ಶರಣ ಹಡಪದ ಅಪ್ಪಣ್ಣ ದೇವಸ್ಥಾನದ ಬಾಲ ಬ್ರಹ್ಮಚಾರಿ ಶ್ರೀ ರಾಜ ಶಿವಯೋಗಿಗಳು ಮಾತಾನಾಡಿ, ಬಸವಣ್ಣನವರ ವಚನದಲ್ಲಿ ಹೇಳಿದಂತೆ ಸಕಲ ಜೀವಾತ್ಮರಲ್ಲೂ ದಯೆ ಇರಬೇಕು. ದಯೆಯೇ ಧರ್ಮದ ಮೂಲ. ಹಡಪದ ಅಪ್ಪಣ್ಣನವರು ಅಂತಹ ಮಹಾದಯೆ ಹೊಂದಿದ್ದರು. ಕಲ್ಯಾಣಕ್ಕೆ ಬಂದವರನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಗುಣ ಅವರಲ್ಲಿತ್ತು. ಬಸವಣ್ಣನವರೇ ಸ್ವತ@ ಹಡಪದ ಅಪ್ಪಣ್ಣನವರನ್ನು ಭೇಟಿಯಾಗಲು ಒತ್ತು ನೀಡುತ್ತಿದ್ದರು ಎಂದು ಹೇಳಿದರು.
ಸಮಾಜದ ಜಿಲ್ಲಾಧ್ಯ ಈರಣ್ಣ ಹಡಪದ ಸಣ್ಣೂರ ಸ್ವಾಗತಿಸಿದರು. ಜಿಲ್ಲಾಧಿಕಾರಿ ಕಚೇರಿ ಸಹಾಯಕ ಶಿವಪ್ರಭು ಹಿರೇಮಠ, ಕನ್ನಡ ಮತ್ತು ಸಂಸತಿ ಇಲಾಖೆ ಉಪ ನಿರ್ದೇಶಕಿ ಜಗದೀಶ್ವರಿ ನಾಶಿ, ಶಾಂತಪ್ಪ ಕಟ್ಟಿಮನಿ, ಶಂಕ್ರಪ್ಪ ಹಡಪದ, ರಾಷ್ಟ್ರೀಯ ಬಸವದಳದ ಬಸವರಾಜ ಹೊನ್ನಕಿರಣಗಿ, ಬಸವಣ್ಣ ಸೂಗೂರು, ಮಲ್ಲಿಕಾರ್ಜುನ ಸಾವಳಗಿ, ಗ್ರಾಮ ಪಂಚಾಯಿತಿ ಅಧ್ಯ ರಮೇಶ ಇತರರಿದ್ದರು.
ಡಾ.ನಾಗಪ್ಪ ಗೋಗಿ ಅವರು ಹಡಪದ ಅಪ್ಪಣ್ಣನವರ ಬದುಕು ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಪರಿಚಯಿಸುವಂಥ ಜನಪ್ರಿಯ ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮಾಡಿದರು.
"

ಮಾನವ ಕುಲ ಒಂದೇ ಎಂಬ ಉದಾತ್ತ ಭಾವನೆಯನ್ನು ಶರಣರು ಜಗತ್ತಿಗೆ ಸಾರಿದ್ದಾರೆ. ಇಂಥ ಮಹನೀಯರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಯುವ ಪೀಳಿಗೆಯ ಪ್ರಗತಿಗೆ ಒಟ್ಟಾಗಿ ಶ್ರಮಿಸಬೇಕಾದ ಅಗತ್ಯವಿದೆ.

— > ಅಲ್ಲಮಪ್ರಭು ಪಾಟೀಲ್​ ಶಾಸಕ