ಬಿಟ್ಟಂಗಾಲ ಅಂಬಟ್ಟಿ ಗ್ರಾಮದಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಮಿತೇಶ್ ಮಾತನಾಡಿದರು. ಮಂಜಪ್ಪ ಪೂಜಾರಿ, ಬಿ.ಆರ್.ರಾಜ, ಪುರುಷೋತ್ತಮ್, ಜನಾರ್ದನ, ಸರೋಜಾ ಗಣೇಶ್, ಚಿತ್ರಾ ಜನಾರ್ದನ, ನಾರಾಯಣ, ಎಂ.ಕೆ.ಮೋಹನ್, ಶಾಂಭಶಿವ, ಚಂದ್ರಶೇಖರ್, ಗಣೇಶ್ ಇದ್ದರು. 
ರಾಜ್ಯ

ಂತ ನಾರಾಯಣ ಗುರುಗಳ ತತ್ವ ಸಮಾಜಕ್ಕೆ ಅವಶ್ಯ

ಪ್ರಮುಖ ಮುಖ್ಯಾಂಶಗಳು

  • ಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವಾಗ್ಮಿ, ಕಲಾವಿದ ಸ್ಮಿತೇಶ್
  • ಬಿಲ್ಲವ ಸೇವಾ ಸಂಘದ ವಿರಾಜಪೇಟೆ ತಾಲೂಕು ಘಟಕ
ವಿರಾಜಪೇಟೆ: ಕುಲ ಹಾಗೂ ಜಾತಿ ಒಂದೇ ಎಂದು ಪ್ರತಿಪಾದಿಸಿ ಶೋಷಿತ ಸಮುದಾಯಕ್ಕೆ ಹೊಸ ದಿಕ್ಕು ತೋರಿಸಿದ ಸಂತ ನಾರಾಯಣ ಗುರುಗಳ ತತ್ವ ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವಾಗ್ಮಿ, ಕಲಾವಿದ ಸ್ಮಿತೇಶ್ ಅಭಿಪ್ರಾಯಪಟ್ಟರು.
ಬಿಲ್ಲವ ಸೇವಾ ಸಂಘದ ವಿರಾಜಪೇಟೆ ತಾಲೂಕು ಘಟಕ ವತಿಯಿಂದ ಬಿಟ್ಟಂಗಾಲ ಅಂಬಟ್ಟಿ ಗ್ರಾಮದಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಆವರಣದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ ಮತ್ತು ಬಿಲ್ಲವ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗುರು ನಮನ ಸಲ್ಲಿಸಿ ಮಾತನಾಡಿದರು.
ಮೌನ ಕ್ರಾಂತಿಯ ಹರಿಕಾರಕನಾಗಿ ವೇದಗಳನ್ನು ಕಲಿತು ಶೋಷಿತರಿಗೂ ದೇವಾಲಯ ಪ್ರವೇಶ ಹಾಗೂ ಆರಾಧನೆ ಮಾಡುವ ಹಕ್ಕು ಕಲ್ಪಿಸಿದ ವ್ಯಕ್ತಿ ನಾರಾಯಣ ಗುರು. 1903ರಲ್ಲಿ ಎಸ್‌ಎನ್‌ಡಿಪಿ ಸಂಘಟನೆ ಮೂಲಕ ಶಿಕ್ಷಣದ ಕ್ರಾಂತಿಯನ್ನು ಜಗತ್ತಿಗೆ ಪಸರಿಸಿದ ವ್ಯಕ್ತಿಯ ತತ್ವ-ಸಿದ್ದಾಂತಗಳು ಇಂದಿಗೂ ಸಮಾಜಕ್ಕೆ ದಾರಿದೀಪ ಎಂದು ಹೇಳಿದರು.
ಬಿಲ್ಲವ ಸಮುದಾಯದವರು ಶಿಕ್ಷಣದ ಮಹತ್ವ ಅರಿತು ಸಮಾಜದಲ್ಲಿ ನೆಲೆ ಕಂಡುಕೊಳ್ಳಬೇಕು. ಪ್ರಸ್ತುತ ಬಾಲ್ಯದಿಂದ ಮುಪ್ಪಿನ ವರೆಗೂ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿರುವುದು ಶೋಚನೀಯ. ಅತೀವ ಮೊಬೈಲ್ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂದು ಹೇಳಿದರು.
ನಿವೃತ್ತ ನ್ಯಾಯಾಧೀಶ ಬಿ.ಎಂ.ರಾಜು ಮಾತನಾಡಿ, ಒಂದಾನೊಂದು ಕಾಲದಲ್ಲಿ ಮೇಲ್ಜಾತಿ ಪಂಗಡಗಳಿಗೆ ಕೆಳವರ್ಗದ ಜನರು ವಿಧೇಯರಾಗಿ ಕೆಲಸ ಮಾಡುತ್ತಿದ್ದರು. ಜತೆಗೆ ಶಿಕ್ಷಣದಿಂದ ವಂಚಿತರಾಗಿದ್ದರು. ಸ್ತ್ರೀಯರಿಗೆ ಸಮಾನತೆ ಇರಲಿಲ್ಲ. ಇದನ್ನು ಮನಗಂಡ ನಾರಾಯಣ ಗುರುಗಳು ಸ್ತ್ರೀ-ಪುರುಷರು ಸಮಾನರು. ಜಾತಿ ಬೇಧ ಇಲ್ಲ. ದೇವರು ಒಬ್ಬನೇ ಎಂದು ಪ್ರತಿಪಾದಿಸಿ ಶಿಕ್ಷಿತ ಸಮಾಜ ನಿರ್ಮಾಣ ಮಾಡಿದರು. ಪ್ರಸ್ತುತ ಬಿಲ್ಲವ ಸಮುದಾಯದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲವ ಸೇವಾ ಸಂಘದ ವಿರಾಜಪೇಟೆ ತಾಲೂಕು ಅಧ್ಯಕ್ಷ ಬಿ.ಎಂ.ಗಣೇಶ್ ಮಾತನಾಡಿ, 19ರ ದಶಕದಲ್ಲಿ ಸಮುದಾಯದ ಹಿರಿಯ ಜೀವಿಗಳ ಕಲ್ಪನೆಯಿಂದ ಸಂಘಟನೆ ಈ ಮಟ್ಟಕ್ಕೆ ಬೆಳೆದಿದೆ. ಆದರೆ ಸಂಘಟನೆ ಬೆಳೆವಣಿಗೆಗೆ ಸರ್ವ ಜನಾಂಗದ ಸಹಕಾರ ಅತ್ಯಗತ್ಯ. ಹಿರಿಯರು ಸಂಘದ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಲು ಸ್ಥಳ ಖರೀದಿಸಿ ಪ್ರಸ್ತುತ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಸರ್ವರೂ ಕೈಜೋಡಿಸಿದಲ್ಲಿ ಬಹುಬೇಗ ಕಟ್ಟಡ ನಿರ್ಮಾಣದ ಕನಸು ನನಸಾಗಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಗುರು ಮಂದಿರದಲ್ಲಿ ನಾರಾಯಣ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಪೂಜೆ ನೆರೆವೇರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 7, ಪಿಯುಸಿಯಲ್ಲಿ 5 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂತೆಯೇ 4 ವಿದ್ಯಾರ್ಥಿಗಳನ್ನು ಗುರುತಿಸಿ ಸಂಘದ ವತಿಯಿಂದ ಧನಸಹಾಯ ಮಾಡಲಾಯಿತು.
ವೇದಿಕೆಯಲ್ಲಿ ಉದ್ಯಮಿ ಮಂಜಪ್ಪ ಪೂಜಾರಿ, ಗೌರವಾಧ್ಯಕ್ಷ ಬಿ.ಆರ್.ರಾಜ, ಉಪಾಧ್ಯಕ್ಷ ಪುರುಷೋತ್ತಮ್, ಗೌ.ಕಾರ್ಯದರ್ಶಿ ಜನಾರ್ದನ, ಸರೋಜಾ ಗಣೇಶ್, ಚಿತ್ರಾ ಜನಾರ್ದನ, ನಾರಾಯಣ, ಎಂ.ಕೆ.ಮೋಹನ್, ಉದ್ಯಮಿ,ಶಾಂಭಶಿವ, ಚಂದ್ರಶೇಖರ್, ಉಪಸ್ಥಿತರಿದ್ದರು.