ಜೇವರ್ಗಿಯ ಎಪಿಎಂಸಿ ಯಾರ್ಡ್ ಆವರಣದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ ಧರ್ಮಸಿಂಗ್ ಅವರನ್ನು ಸನ್ಮಾನಿಸಲಾಯಿತು. ಅಲ್ಲಮಪ್ರಭು ಪಾಟೀಲ್, ಪ್ರವಿಣ ಪಾಟೀಲ್, ಸಿದ್ದಲಿಂಗರಡ್ಡಿ ಇಟಗಿ, ರುಕುಂ ಪಟೇಲ್ ಇಜೇರಿ, ನೀಲಕಂಠರಾವ ಮುಲಗೆ, ಶಿವಶರಣಪ್ಪ ಸೀರಿ, ಶಿವಶರಣಪ್ಪ ಕೋಬಾಳ, ಸಕ್ರೆಪ್ಪಗೌಡ ಹರನೂರ, ವಿಜಯಕುಮಾರ ಪಾಟೀಲ್, ಮಲ್ಲಿಕಾರ್ಜುನ ಸಾಹು ಆಲೂರ, ರಾಜಶೇಖರ ಸೀರಿ ಇತರರಿದ್ದರು.
- ಸಚಿವ ಡಾ.ಅಜಯ ಧರ್ಮಸಿಂಗ್ ಭಾವುಕ
- ಜೇವರ್ಗಿಯಲ್ಲಿ ಅಭಿನಂದನೆ ಸಮಾರಂಭ
ಜೇವರ್ಗಿ: ಕ್ಷೇತ್ರದ ಜನರ ಪ್ರೀತಿ, ವಾತ್ಸಲ್ಯ ಹಾಗೂ ಆಶೀರ್ವಾದವೇ ನನ್ನನ್ನು ಸಚಿವನನ್ನಾಗಿ ಮಾಡಿದೆ. ನಿಮ್ಮೆಲ್ಲರ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ ಧರ್ಮಸಿಂಗ್ ಭಾವುಕರಾಗಿ ಹೇಳಿದರು.
ಎಪಿಎಂಸಿ ಯಾರ್ಡ್ ಆವರಣದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ನಿಂದ ಭಾನುವಾರ ಆಯೋಜಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ, ಕ್ಷೇತ್ರದ ಜನತೆಯೇ ನನಗೆ ತಂದೆ& ತಾಯಿ, ಬಂಧು&ಬಳಗ. ನೀವೆಲ್ಲರೂ ನನ್ನ ಕುಟುಂಬದಂತೆ ಜತೆಯಾಗಿ ನಿಂತು ಸದಾ ಕಾಲ ಸಹಕಾರ ನೀಡುತ್ತಿದ್ದೀರಿ. ನಿಮ್ಮೆಲ್ಲರ ಆಶಯಕ್ಕೆ ತಕ್ಕಂತೆ ಪ್ರಮಾಣಿಕವಾಗಿ ಕೆಲಸ ಮಾಡುವೆ. ಕ್ಷೇತ್ರದ ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಎಂದು ಭರವಸೆ ನೀಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿ ಡಾ.ಅಜಯಸಿಂಗ್ ಅವರು ಕೆಕೆಆರ್ಡಿಬಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅಕ್ಷರ ಅವಿಷ್ಕಾರದೊಂದಿಗೆ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ದುಡಿದಿದ್ದಾರೆ. ಹಲವು ಜನಪರ ಯೋಜನೆಗಳೊಂದಿಗೆ ಕಲ್ಯಾಣ ಕರ್ನಾಟಕದ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಬಣ್ಣಿಸಿದರು.
ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗರಡ್ಡಿ ಇಟಗಿ (ಜೇವರ್ಗಿ), ರುಕುಂ ಪಟೇಲ್ ಇಜೇರಿ (ಯಡ್ರಾಮಿ), ಪ್ರಮುಖರಾದ ನೀಲಕಂಠರಾವ ಮುಲಗೆ, ಶಿವಶರಣಪ್ಪ ಸಿರಿ, ಶಿವಶರಣಪ್ಪ ಕೋಬಾಳ, ಮಲ್ಲಿಕಾರ್ಜುನ ಸಾಹು ಆಲೂರ, ರಾಜಶೇಖರ ಸಿರಿ, ಕಾಶಿರಾಯಗೌಡ ಯಲಗೋಡ, ಗುರುಲಿಂಗಪ್ಪಗೌಡ ಆಂದೋಲಾ, ಗಿರೆಪ್ಪಗೌಡ ಪಾಟೀಲ್ ಕಲ್ಲಹಂಗರಗಾ, ವಿಜಯಕುಮಾರ ಪಾಟೀಲ್ ಕಲ್ಲಹಂಗರಗಾ, ಸಕ್ರೆಪ್ಪಗೌಡ ಹರನೂರ, ವಿಜಯಕುಮಾರ ಹಿರೇಮಠ, ನೀಲಕಂಠ ಅವಂಟಿ, ಮಲ್ಲಿಕಾರ್ಜುನ ಹಲಕರ್ಟಿ ಯಡ್ರಾಮಿ, ಸಂಗಣ್ಣಗೌಡ ಗುಳ್ಯಾಳ, ಅಬ್ದುಲ್ ಮಾಜೀದ ಗಿರಣಿ, ಚಂದ್ರಶೇಖರ ಪುರಾಣಿಕ, ಷಣ್ಮುಖಪ್ಪ ಹಿರೇಗೌಡ, ಅಬ್ದುಲ್ ರಹೆಮಾನ್ ಪಟೇಲ್, ಸುದರ್ಶನ ಆಲಬಾಳ, ಖಾಸೀಂ ಪಟೇಲ ಮುದಬಾಳ, ಚಂದ್ರಶೇಖರ ಹರನಾಳ, ಷಣ್ಮುಖಪ್ಪ ಹಪ್ತಿ, ಬಹಾದ್ದೂರ ರಾಠೋಡ್, ಮಲ್ಲಣ್ಣಗೌಡ ನೇದಲಗಿ, ಶಿವಪುತ್ರ ಸಾಹು ಕೋರಿ, ಶಾಂತಪ್ಪ ಕೂಡಲಗಿ, ಶೌಕತಲಿ ಆಲೂರ, ಸುಧೀಂದ್ರ ವಕೀಲ್, ಚಂದ್ರಶೇಖರ ನೇರಡಗಿ, ಮರೆಪ್ಪ ಸರಡಗಿ, ಶಿವು ಕಲ್ಲಾ,ಬಾಬಾಫರೀದ್ ಮಳ್ಳಿಕರ್, ಸುಧೀಂದ್ರ ಇಜೇರಿ ಇತರರಿದ್ದರು.
ಪ್ರೀತಿಯ ನಾಯಕನಿಗೆ ಆತ್ಮೀಯ ಸ್ವಾಗತ
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಜೇವರ್ಗಿಗೆ ಆಗಮಿಸಿದ ಡಾ.ಅಜಯಸಿಂಗ್ ಅವರನ್ನು ಕ್ಷೇತ್ರದ ಜನರು, ಅಭಿಮಾನಿಗಳು ಹಾಗೂ ಮುಖಂಡರು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದರು. ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ನಿಂದ ಆರಂಭವಾದ ಮೆರವಣಿಗೆ ಅಖಂಡೇಶ್ವರ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಮಾರಂಭದ ವೇದಿಕೆ ಎಪಿಎಂಸಿ ಯಾರ್ಡ್ ಆವರಣದವರೆಗೂ ಸಾಗಿತು. ಅಭಿಮಾನಿಗಳಿಂದ ಹಾದಿಯುದ್ದಕ್ಕೂ ಜೈೂಷ, ಪುಷ್ಪವೃಷ್ಟಿ ನಡೆಯಿತು. ಬಾಜಾ&ಭಜಂತ್ರಿ, ಡೊಳ್ಳು ಕುಣಿತ, ಕುಂಭ ಮೆರವಣಿಗೆ ಗಮನಸೆಳೆದವು.