ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ಲಾಲ್ ಸಾಹುಕಾರ, ಅಪ್ಪುಗೌಡ ಪಾಟೀಲ, ಭೀಮಣ್ಣ ಕೌಲಗಿ, ಬಿ.ಸಿ. ಸಾಹುಕಾರ ಮತ್ತಿತರರಿದ್ದರು.
- ಯಶವಂತರಾಯಗೌಡ ಪಾಟೀಲ ಅಭಿಮತ
- ಕಾಮಗಾರಿಗೆ ಭೂಮಿ ಪೂಜೆ
- ಇಂಡಿಯನ್ನು ಶಿಕ್ಷಣ ಕಾಶಿ ಮಾಡಿರುವೆ
ಇಂಡಿ: ರಾಜಕೀಯವಾಗಿ ನನ್ನನ್ನು ಬೆಳೆಸಿರುವ ಹಂಜಗಿ ಗ್ರಾಮದ ಜನತೆಯ ಋಣ ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಮರೆಯುವುದಿಲ್ಲ. ಸಹಾಯ ಮಾಡಿದವರನ್ನು ಸ್ಮರಿಸದಿದ್ದರೆ ಮನುಷ್ಯತ್ವ ಎನ್ನುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಹಂಜಗಿ ಗ್ರಾಮದಲ್ಲಿ ಶನಿವಾರ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿ ಅವರು ಮಾತನಾಡಿ, ಹಂಜಗಿ ಗ್ರಾಮದ ಜನತೆ ಹೃದಯ ವೈಶಾಲ್ಯತೆ ಹೊಂದಿದ್ದಾರೆ. ನನಗೂ ಈ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಮತಕ್ಷೇತ್ರದಲ್ಲಿ ಈ ಹಿಂದೆ ಒಂದೇ ಒಂದು ಪಿಯುಸಿ ಕಾಲೇಜ್ ಇರಲಿಲ್ಲ. ನಾನು ಪ್ರಯತ್ನಿಸಿ ನಾಲ್ಕಾರು ಪಿಯು ಕಾಲೇಜ್ ತಂದಿರುವೆ. ಇಂಡಿಯನ್ನು ಶಿಕ್ಷಣ ಕಾಶಿ ಮಾಡಿರುವೆ ಎಂದರು.
ಮುತ್ತಪ್ಪ ಪೋತೆ, ಅಬಶಾ ಜಮಖಂಡಿ, ಸದಾಶಿವ ಪ್ಯಾಟಿ, ಬಸವರಾಜ ಪಾಟೀಲ, ರಜಾಕ ಕಾರಬಾರಿ, ಪ್ರಶಾಂತ ಕಾಳೆ, ಜಾವೀದ ಮೋಮಿನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭೀಮಾಶಂಕರ ಕನ್ನೂರ, ಕೃಷಿ ಇಲಾಖೆ ಅಧಿಕಾರಿ ಮಹಾದೇವಪ್ಪ ಏವೂರ, ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಪಿಐಆರ್‌ಡಿ ಶಿವಾಜಿ ಬನಸೊಡೆ ಇತರರಿದ್ದರು.