ಹುಣಸೀಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರುದ್ರಮುನಿ ಶಿವಯೋಗಿಗಳ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯನ್ನು ಶ್ರೀಗಳು, ಗಣ್ಯರು ಉದ್ಘಾಟಿಸಿದರು. ಡಾ.ಅಮರಸಿದ್ಧೇಶ್ವರ ಸ್ವಾಮೀಜಿ, ಬಸವರಾಜ ದೇವರು, ಅಭಿನವ ಸಿದ್ಧಲಿಂಗ ಸ್ವಾಮೀಜಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಎಂ.ಕೆ.ಹುಬ್ಬಳ್ಳಿ
ಹನ್ನೆರಡನೇ ಶತಮಾನ ನಮ್ಮೆಲ್ಲರ ಬದುಕು ಬೆಳಗುವ ಅದ್ಭುತ ವಚನ ಸಾಹಿತ್ಯ ನೀಡಿದೆ. ನುಡಿದಂತೆ ನಡೆದ ಶರಣರ ತತ್ತ್ವಾದರ್ಶ ವಚನಗಳ ಮೂಲಕ ಜಗತ್ತಿಗೆ ಸನ್ಮಾರ್ಗ ತೋರಿವೆ ಎಂದು ಅಂಕಲಗಿ&ಕುಂದರಗಿ ಅಡವಿ ಸಿದ್ಧೇಶ್ವರ ಸಂಸ್ಥಾನಮಠದ ಡಾ.ಅಮರಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಹುಣಸೀಕಟ್ಟಿ ಗ್ರಾಮದ ಮಲಪ್ರಭಾ ನದಿ ತೀರದ ಸುೇತ್ರ ಶ್ರೀ ರುದ್ರಮುನಿ ದೇವಸ್ಥಾನ ಹೊಸಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ರುದ್ರಮುನಿ ಶಿವಯೋಗಿಗಳ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಚನ ಸಾಹಿತ್ಯ ರಣೆಗಾಗಿ ಉಳವಿಯತ್ತ ಹೊರಟಿದ್ದ ಚನ್ನಬಸವಣ್ಣವರ ನೇತೃತ್ವದ ಶರಣರ ತಂಡವನ್ನು
ಸುರತವಾಗಿ ಮುಟ್ಟಿಸಿದವರು ರುದ್ರಮುನಿ ಶಿವಯೋಗಿಗಳು. ರುದ್ರಮುನಿಗಳು ತಪಗೈದ ಹುಣಸೀಕಟ್ಟಿ ಪಾವನೇತ್ರವಾಗಿದೆ. ಸನ್ಮಾರ್ಗದಲ್ಲಿ ಸಾಗಿ, ಶ್ರದ್ಧಾ, ಭಕ್ತಿಯಿಂದ ಆರಾಧಿಸಿದರೆ ಗುರು ಕೃಪೆ ನಮ್ಮೆಲ್ಲರ ಮೇಲಿರಲಿದೆ ಎಂದರು.
ಹೊನ್ನಿಹಾಳ ಬೃಹನ್ಮಠದ ಬಸವರಾಜ ದೇವರು ಮಾತನಾಡಿ, ರುದ್ರಮುನಿ ಶಿವಯೋಗಿಗಳ ಪಾದ ಸ್ಪರ್ಶದಿಂದ ಪುಣ್ಯಭೂಮಿಯಾದ ಗ್ರಾಮದಲ್ಲಿರುವ ಭಕ್ತರು ಪುಣ್ಯವಂತರು. ಕ್ಷೇತ್ರದ ಕೀರ್ತಿ ನಾಡಿನಾದ್ಯಂತ ಪಸರಿಸುತ್ತಿರುವ ಹೊಸಮಠದ ಚಂಬಯ್ಯ ಸ್ವಾಮೀಜಿ ಕಾರ್ಯ ಮಾದರಿಯಾಗಿದೆ ಎಂದರು.
ನಯಾನಗರದ ಸುಖದೇವಾನಂದ ಪುಣ್ಯಾಶ್ರಮದ ಗುರು ಅಭಿನವ ಸಿದ್ಧಲಿಂಗ ಸ್ವಾಮೀಜಿ, ಶಿಗನಳ್ಳಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಗೋಕಾಕ ಜ್ಞಾನಮಂದಿರದ ಸುವರ್ಣಾತಾಯಿ ಹೊಸಮಠ, ಪೂರ್ಣಿಮಾ ತಾಯಿ, ವಿರೂಪಾಯ್ಯ ಹಿರೇಮಠ, ಶ್ರೀಮಠದ ಪೀಠಾಧ್ಯ ಚಂಬಯ್ಯ ಸ್ವಾಮೀಜಿ ಅಧ್ಯತೆ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ರಾಣಿ ಶುಗರ್ಸ್ ನಿರ್ದೇಶಕ ಶಂಕರ ಹೊಳಿ, ರುದ್ರಯ್ಯ ಹೊಸಮಠ, ಶಿವಲಿಂಗಯ್ಯ ಅಲ್ಲಯ್ಯನವರಮಠ, ರಾಜು ಹೊಸಮಠ, ವಿಠ್ಠಲ ನೀಲಜಕರ್ ಇತರರಿದ್ದರು. ವಿವೇಕ ಕುರಗುಂದ ನಿರೂಪಿಸಿದರು. ಶರಣಪ್ಪ ಪಟ್ಟೇದ ಸ್ವಾಗತಿಸಿದರು.