ಕಲಬುರಗಿ ಎನ್​ವಿ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಂಗಣದಲ್ಲಿ ಹರಿದಾಸ ಸಾಹಿತ್ಯಪ್ರಚಾರ ವಾಹಿನಿಯ ರಜತ ಮಹೊತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀ ಸತ್ಯಾತ್ಮತಿರ್ಥ ಶ್ರೀಗಳು ಹಿರಿಯ ಪತ್ರಕರ್ತ ಪ್ರಭಾಕರ ಜೋಶಿಯವರಿಗೆ ಜಗನ್ನಾಥ ವಿಠ್ಠಲ ಪ್ರಶಸ್ತಿ ನೀಡಿ ಆಶೀರ್ವದಿಸಿದರು. ಪಂ.ಗೋಪಾಲಾಚಾರ್ಯ ಅಕಮಂಚಿ ಇತರರಿದ್ದರು. 
ರಾಜ್ಯ

ಮುಕುತಿ ಮಾರ್ಗಕೆ ಮೂಲ ರಾಮ ಮಂತ್ರ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸತ್ಯಾತ್ಮತಿರ್ಥ ಶ್ರೀಪಾದಂಗಳವರ ಆಶೀರ್ವಚನ
  • ಜಗನ್ನಾಥ ವಿಠ್ಠಲ ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ: ಸಾಧನೆಗೆ ಅನೇಕ ಮಾರ್ಗಗಳು ಉಂಟು. ಆದರೆ ಮುಕ್ತಿಗೆ ರಾಮಂತ್ರವೆ ಮೂಲ ಎಂದು ಉತ್ತರಾದಿ ಮಠದ ಮಠಾಧೀಶ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಂಗಣದಲ್ಲಿ ಹರಿದಾಸ ಸಾಹಿತ್ಯಪ್ರಚಾರ ವಾಹಿನಿಯ ರಜತ ಮಹೊತ್ಸವ ನಿಮಿತ್ತ ಸಾಧಕರಿಗೆ ಜಗನ್ನಾಥ ವಿಠ್ಠಲ ಹಾಗೂ ವಿಪ್ರಶ್ರೀ ಪ್ರಶಸ್ತಿ ನೀಡಿ ಆಶೀರ್ವಚನ ನೀಡಿದರು.
ದೇಹ ಶಾಸ್ವತವಲ್ಲ ಆತ್ಮ ಶಾಶ್ವತ. ಆತ್ಮಶುದ್ಧಿಗೆ ಮೊದಲಾದ್ಯತೆ ನೀಡಬೇಕು. ಸನಾತನ ಧರ್ಮದಲ್ಲಿ ಮೋಕ್ಕೆ ಮಹತ್ವ ನೀಡಲಾಗಿದೆ. ಮೋಕ್ಕಾಗಿ ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಮೋದ ಮಾರ್ಗ ಗೊತ್ತಿಲ್ಲ. ಮೋ ಎಂದರೆ ಏನು ಇಲ್ಲದ ವ್ಯವಸ್ಥೆ ಎಂದು ಭಾವಿಸಲಾಗಿದೆ. ನಿಜವಾದ ಮೋದ ಅರ್ಥ ಅದಲ್ಲ. ಮೋ ಅಂದರೆ ಶಾಶ್ವತ ಆನಂದ. ನಾವು ಏನನ್ನೂ ಕಂಡಿಲ್ಲ, ಏನನ್ನೂ ಅನುಭವಿಸಿಲ್ಲ. ಅದು ಮೋಕ್ಷದಲ್ಲಿ ದೊರೆಯುತ್ತದೆ. ಹೀಗಾಗಿ ಸನಾತನ ಧರ್ಮದಲ್ಲಿ ಮೋಕ್ಕೆ ಮಹತ್ವ ನೀಡಲಾಗಿದೆ ಎಂದು ವಿವರಿಸಿದರು.
ಮನುಷ್ಯರ ಸಾಧನೆಯ ಕೊನೆ ಗುರಿ ಮೋ. ಅಂತಹ ದುರ್ಲಭವಾದ ಮೋವನ್ನು ಕರುಣಿಸುವ ಶಕ್ತಿ ರಾಮಂತ್ರದಲ್ಲಿದೆ. ಹೀಗಾಗಿ ಮುಕುತಿ ಮಾರ್ಗಕೆ ಇದೆ ಮೂಲಮಂತ್ರ. ಅದೇ ರಾಮಮಂತ್ರ ಜಪಿಸೋ ಮನಜು ಎಂದು ಪುರಂದರ ದಾಸರು ಸಾರಿ ಹೇಳಿದ್ದಾರೆ ಎಂದು ಶ್ರೀಗಳು ನುಡಿದರು.
ರ ಎಂದರೆ ರಾಮ, ಆ ಎಂದರೆ ಚನ್ನಾಗಿ, ಮ ಎಂದರೆ ನಿರ್ಮಾಣ. ಸುಂದರ ಜಗತ್ತು ನಿರ್ಮಿಸಿದ ರಾಮ ಎಂದು ರಾಮ ಶಬ್ದದ ಅರ್ಥವಾಗಿದೆ ಎಂದು ರಾಮನಾಮದ ಅರ್ಥ ಎಳೆ ಎಳೆಯಾಗಿ ಬಿಡಿಸಿ ಹೇಳಿದರು.
ಪ್ರಚಾರ ವಾಹಿನಿಯ ಅಧ್ಯ ಪಂ.ಗೋಪಾಲಾಚಾರ್ಯ ಅಕಮಂಚಿ, ಉಪಾಧ್ಯ ವ್ಯಾಸರಾಜ ಸಂತೆಕೆಲ್ಲೂರ ನಿರೂಪಿಸಿದರು. ಸಂಚಾಲಕ ಬೆಂಕಿ ಭೀಮಣ್ಣ, ಪಂ.ಹಣಮಂತಾಚಾರ್ಯ ಸರಡಗಿ, ಪಂ.ಡಾ.ಗುರುಮಧ್ವಾಚಾರ್ಯ ನವಲಿ, ಪಂ.ಭೀಮಸೇನಾಚಾರ್ಯ ಜೋಶಿ, ಪಂ.ಪ್ರಸನ್ನಾಚಾರ್ಯ ಜೋಶಿ, ಪಂ.ಗಿರೀಶಾಚಾರ್ಯ ಅವಧಾನಿ, ಮಠಾಧಿಕಾರಿ ರಾಮಾಚಾರ್ಯ ಂಟಿ, ಎನ್​ವಿ ಸಂಸ್ಥೆಯ ಅಧ್ಯಕ್ಷ ಡಾ.ಗೌತಮ ಜಹಾಗೀರದಾರ್​, ಕಾರ್ಯದರ್ಶಿ ಅಭಿಜಿತ್​ ದೇಶಮುಖ, ರವಿ ಲಾತೂರಕರ್​, ಡಾ.ಗಿರೀಶ ಗಲಗಲಿ, ಸತ್ಯಾತ್ಮತಿರ್ಥ ಸೇನೆ ಸದಸ್ಯರು ಮತ್ತು ವಿವಿಧ ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಪಾಲ್ಗೊಂಡಿದ್ದರು.

ಜಗನ್ನಾಥ ವಿಠ್ಠಲ ಪ್ರಶಸ್ತಿ ಪುರಸತರು

ಹಿರಿಯ ನ್ಯಾಯವಾದಿ ರಾವೇಂದ್ರ ನಾಡಗೌಡ, ವಾಸುದೇವರಾವ ನಾಲತವಾಡ, ರಾವೇಂದ್ರ ಶಿರವಾಳ, ಹಿರಿಯ ಪತ್ರಕರ್ತ, ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿಯವರಿಗೆ ಪ್ರಸಕ್ತ ಸಾಲಿನ ಜಗನ್ನಾಥ ವಿಠ್ಠಲ ಪ್ರಶಸ್ತಿಯನ್ನು ಶ್ರೀಗಳು ಪ್ರದಾನ ಮಾಡಿ, ಆಶೀರ್ವದಿಸಿದರು. ಗಿರೀಶಾಚಾರ್ಯ ಆಡಕಿ, ಶ್ರೀನಿವಾಸ ಶರ್ಮಾ ಕಾನರೆಡ್ಡಿ ಅವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಶ್ರೀಗಳು ಅನುಗ್ರಹಿಸಿದರು.

ಮಹಿಳಾ ಸಾಧಕರಿಗೆ ಸತ್ಕಾರ

ವಿವಿಧ ಭಜನಾ ಮಂಡಳಿ ಸದಸ್ಯೆಯರಾದ ಪ್ರಭಾವತಿ ಕುಲಕರ್ಣಿ, ಜಯಶ್ರೀ ಖಜೂರಿ, ನಂದಾ ತಾವರಗೇರಿ, ಅನಿತಾ ಕುಲಕರ್ಣಿ, ವಾಣಿ ಜೋಶಿ, ಲತಾ ಪಾಟೀಲ್​, ಅರುಣಾ ಭೆಂಕಿ, ವನಮಾಲಾ ಕುಲಕರ್ಣಿ, ಸುಧಾ ಓಂಕಾರ್​, ಪ್ರತಿಭಾ ಅಫಜಲಪುರಕರ್​, ಮೀನಾಕ್ಷಿ ಕುಲಕರ್ಣಿ, ಚಂದ್ರಕಲಾ ಜಹಾಗೀರದಾರ್​, ರೇಖಾ ಕೊರಳ್ಳಿ, ಪದ್ಮಜಾ ಕುಲಕರ್ಣಿ, ಜಯಶ್ರೀ ಕುಲಕರ್ಣಿ, ಜ್ಯೋತಿ ಅಫಜಲಪುರಕರ್​, ವಿದ್ಯಾ ಕುಲಕರ್ಣಿ, ಶಾರದಾ ನವಲಿಯವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.
"

ಭಗವಂತನ ದರ್ಶನವಾದರೆ ಮೋಕ್ಷ ಸಿಗುವುದು ನಿಶ್ಚಿತ. ಕೇವಲ ಮೋಕ್ಷಕ್ಕೆ ಅಲ್ಲ, ಎಲ್ಲಾ ಸಾಧನೆಗೂ ಇದು ಮೂಲಮಂತ್ರ ಹೌದು. ಜಗತ್ತಿಗೆ ಮೂಲನಾದ ರಾಮನ ಮಂತ್ರ ಜಪಿಸುವುದರಿಂದ ಮೋಕ್ಷ ಮಾರ್ಗ ಕಂಡುಕೊಳ್ಳಬಹುದು.

ಶ್ರೀ ಸತ್ಯಾತ್ಮತಿರ್ಥ ಶ್ರೀಪಾದಂಗಳವರು,

ಮಠಾಧೀಶರು, ಉತ್ತರಾದಿ ಮಠ.

"

ವೇದಿಕೆ ವತಿಯಿಂದ ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಆದರೆ ಈ ಬಾರಿ ಶ್ರೀಪಾದಂಗಳವರ ಅಮೃತ ಹಸ್ತದಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಪುರಸತರ ಸುದೈವ. ದಾಸರ ಸಂದೇಶ ಮನೆ ಮನಗಳಿಗೆ ತಲುಪಿಸುವ ಕಾರ್ಯ ವಾಹಿನಿ ನಿರಂತರ ಮಾಡುತ್ತಿದೆ. ಶ್ರೀಗಳ ಅನುಗ್ರಹದಿಂದ ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ಕಾರ್ಯ ಮುಂದುವರಿಸಲಾಗುವುದು.

ಪಂ.ಗೋಪಾಲಾಚಾರ್ಯ ಅಕಮಂಚಿ,

ಅಧ್ಯಕ್ಷ, ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ.