The one who shows arrogance will be punished!
ಚಿಂತಾಮಣಿ: ನಗರದ ರಾಷ್ಟ್ರೀಯ ಹೆದ್ದಾರಿಯ ಕಾಂಪ್ಲೆಕ್ಸ್ ಬಳಿ ಸೋಮವಾರ ನಗರಠಾಣೆ ಪೊಲೀಸರು ದ್ವಿಚಕ್ರವಾಹನಗಳ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾಗ ದಾಖಲಾತಿ ಹಾಜರುಪಡಿಸದೆ ದರ್ಪ ಪ್ರದರ್ಶಿಸಿದ ಬೈಕ್ ಸವಾರನಿಗೆ ಒಂದು ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಲಾಗಿದೆ.
ಮಹಿಳಾ ಪಿಎಸ್ಐ ಪದ್ಮಾ ನೇತೃತ್ವದ ತಂಡ ವಾಹನಗಳ ದಾಖಲೆಗಳ ಜತೆಗೆ ಹೆಲ್ಮೆಟ್ ಧರಿಸದ ಸವಾರರನ್ನು ತಡೆದು ತಪಾಸಣೆ ಮಾಡುತ್ತಿದ್ದಾಗ ನೋಂದಣಿ ಸಂಖ್ಯೆ ಇಲ್ಲದ ಬೈಕ್ ಚಾಲನೆ ಮಾಡಿಕೊಂಡು ಬಂದವನನ್ನು ಪ್ರಶ್ನಿಸಿದ್ದಕ್ಕೆ ದರ್ಪ ತೋರಿದ್ದ.
ಕರ್ತವ್ಯನಿರತ ಮಹಿಳಾ ಪೊಲೀಸ್ ಪೇದೆ, ಎಎಸ್ಐ ಮತ್ತು ಪುರುಷ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೂ ಯಾರನ್ನೂ ಲೆಕ್ಕಿಸದೆ ಏರುಧ್ವನಿಯಲ್ಲಿ ನಿಂದಿಸಿ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬೈಕ್ ಏರಿ ಹೊರಡಲು ಮುಂದಾಗಿದ್ದ. ಈ ವೇಳೆ ಆತನನನ್ನು ಹಿಡಿದು ಗೂಡ್ಸ್ ವಾಹನದ ಮೂಲಕ ನಗರಠಾಣೆಗೆ ಕಳುಹಿಸಿಕೊಟ್ಟರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬೈಕ್ ಸವಾರ ಸಾವಿರಾರು ರೂ. ದಂಡ ಕಟ್ಟಿ ವಾಹನ ಪಡೆದುಕೊಂಡು ತೆರಳಿದನು.