ಯುಡೈಸ್ ಪ್ಲಸ್ ವರದಿ 
ರಾಜ್ಯ

ರಾಜ್ಯದಲ್ಲಿ 66 ಸಾವಿರ ವಿದ್ಯಾರ್ಥಿಗಳ ಸಂಖ್ಯೆ ಕಡಿತ: ಕಾರಣವೇನು ಗೊತ್ತಾ?

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ಪದವಿ ಪೂರ್ವ (ಪಿಯು) ಶಿಕ್ಷಣದವರೆಗಿನ ಸರ್ವೆ ಮಾಡಲಾಗಿದೆ.
  • ಖಾಸಗಿ ಶಾಲೆಗಳಲ್ಲಿ 58,61,960 ಮಕ್ಕಳು ದಾಖಲಾಗಿದ್ದರೆ, ಸರ್ಕಾರಿ ಶಾಲೆಗಳಲ್ಲಿ 45,39,093 ಹಾಗೂ ಅನುದಾನಿತ ಶಾಲೆಗಳಲ್ಲಿ 13,12,859 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
  • ಅಂಕಿ-ಅಂಶಗಳ ಪ್ರಕಾರ, ಶೂನ್ಯ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. 270ರಿಂದ ಪ್ರಸಕ್ತ ಸಾಲಿನಲ್ಲಿ 104ಕ್ಕೆ ಕುಸಿದಿವೆ.
ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯವು 2025-26ನೇ ಸಾಲಿನ ಯುಡೈಸ್ ಪ್ಲಸ್ (ಯೂನಿೈಡ್ ಡಿಸ್ಟ್ರಿಕ್ಟ್ ಇನ್‌ಾರ್ಮೇಷನ್ ಸಿಸ್ಟಂ ಾರ್ ಎಜುಕೇಷನ್) ವರದಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಶಾಲಾ ಶಿಕ್ಷಣದಲ್ಲಿನ ದಾಖಲಾತಿಯು 66 ಸಾವಿರ ಕುಸಿದಿರುವುದು ದತ್ತಾಂಶಗಳಿಂದ ತಿಳಿದುಬಂದಿದೆ.
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ಪದವಿ ಪೂರ್ವ (ಪಿಯು) ಶಿಕ್ಷಣದವರೆಗಿನ ಸರ್ವೆ ಮಾಡಲಾಗಿದೆ.
2023-24ರಲ್ಲಿ 1,19,26,303, 2024-25ರಲ್ಲಿ 1,17,80,251 ಇದ್ದ ದಾಖಲಾತಿ ಸಂಖ್ಯೆಯು 2025-26ಕ್ಕೆ 1,17,14,214ಕ್ಕೆ ಕುಸಿದಿದೆ. 66,037 ಮಕ್ಕಳ ಸಂಖ್ಯೆ ಕಡಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಈ ಮೂರು ವರ್ಷದಲ್ಲಿ 2,12,089 ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.
ಖಾಸಗಿ ಶಾಲೆಗಳಲ್ಲಿ 58,61,960 ಮಕ್ಕಳು ದಾಖಲಾಗಿದ್ದರೆ, ಸರ್ಕಾರಿ ಶಾಲೆಗಳಲ್ಲಿ 45,39,093 ಹಾಗೂ ಅನುದಾನಿತ ಶಾಲೆಗಳಲ್ಲಿ 13,12,859 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೊರೊನಾ ಸಮಯದಲ್ಲಿ ಮಾತ್ರ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿತ್ತು.

ಶೂನ್ಯ ಶಾಲೆಗಳ ಸಂಖ್ಯೆ ಉತ್ತಮ:

ಅಂಕಿ-ಅಂಶಗಳ ಪ್ರಕಾರ, ಶೂನ್ಯ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. 270ರಿಂದ ಪ್ರಸಕ್ತ ಸಾಲಿನಲ್ಲಿ 104ಕ್ಕೆ ಕುಸಿದಿವೆ. ಆದರೆ, ಯುಡೈಸ್ ವರದಿಯ ಪ್ರಕಾರ ರಾಜ್ಯದಲ್ಲಿ ಸುವಾರು 308 ಶಿಕ್ಷಕರು ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ದಾಖಲಾತಿಗಳಲ್ಲಿ ತೋರಿಸಲಾಗಿದೆ ಎಂದಿದೆ.
ರಾಜ್ಯದಲ್ಲಿ 2025-26ರಲ್ಲಿ 676 ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ ಅಥವಾ ಪಕ್ಕದ ಶಾಲೆಗಳೊಂದಿಗೆ ವಿಲೀನಗೊಂಡಿವೆ. ಇದೇ ಅವಧಿಯಲ್ಲಿ ನೂರಕ್ಕೂ ಅಧಿಕ ಹೊಸದಾಗಿ ಖಾಸಗಿ ಶಾಲೆಗಳು ಆರಂಭವಾಗಿರುವುದು ತಿಳಿದುಬಂದಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೊಡೆತ ಬೀಳುತ್ತಿದೆ. ಖಾಸಗಿ ಶಾಲೆಗಳ ಪ್ರಮಾಣ ಹೆಚ್ಚಳವಾಗುತ್ತಿರುವುದು ಸರ್ಕಾರಿ ಶಾಲೆಗಳಿಗೆ ಹೊಡೆತ ಬೀಳಲು ಕಾರಣವಾಗಿದೆ.

ಶಾಲೆ ಬಿಡುವ ಮಕ್ಕಳ ಸಂಖ್ಯೆ ಶೇ.14.3

ಒಟ್ಟು ದಾಖಲಾತಿ ಅನುಪಾತವು (ಜಿಇಆರ್) ಪೂರ್ವ ಪ್ರಾಥಮಿಕ ಹಂತದಲ್ಲಿ ಶೇ.42, ಪ್ರಾಥಮಿಕ ಹಂತದಲ್ಲಿ ಶೇ.106, ಹಿರಿಯ ಪ್ರಾಥಮಿಕ ಹಂತ- ಶೇ.102.5 ಮತ್ತು ಪ್ರೌಢಶಾಲಾ ಹಂತದಲ್ಲಿ ಶೇ.82.3 ಇದೆ. ಅದೇ ರೀತಿ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹಿರಿಯ ಪ್ರಾಥಮಿಕ ಹಂತದಲ್ಲಿ ಶೇ.1.2 ಇದ್ದರೆ, ಪ್ರೌಢಶಾಲಾ ಹಂತದಲ್ಲಿ ಶೇ.14.3ರಷ್ಟಿದೆ.

3047 ಶಾಲೆಗಳಲ್ಲಿ ಮಾತ್ರ ಡಿಜಿಟಲ್ ಲೈಬ್ರರಿ:

74 ಸಾವಿರ ಶಾಲೆಗಳಲ್ಲಿ ಕೇವಲ 3,047 ಶಾಲೆಗಳಲ್ಲಿ ಮಾತ್ರ ಡಿಜಿಟಲ್ ಗ್ರಂಥಾಲಯ ಸೌಲಭ್ಯವಿದೆ. ಉಳಿದ ಶಾಲೆಗಳಲ್ಲಿರುವ ಗ್ರಂಥಾಲಯ ಮಾಹಿತಿ ಲಭ್ಯವಾಗಿಲ್ಲ. 43,281 ಶಾಲೆಗಳಲ್ಲಿ ಕಂಪ್ಯೂಟರ್ ಸೌಲಭ್ಯವಿದ್ದರೂ 38,584 ಶಾಲೆಗಳಲ್ಲಿ ಮಾತ್ರ ಇಂಟರ್‌ನೆಟ್ ಸೌಲಭ್ಯವಿದೆ. 1.17 ಕೋಟಿ ಮಕ್ಕಳಿದ್ದರೂ ಇಲ್ಲಿಯವರೆಗೂ ಕೇವಲ 1.09 ಕೋಟಿ (93.2) ಮಕ್ಕಳ ಆಧಾರ್ ಮಾತ್ರ ಅಪ್‌ಡೇಟ್ ಮಾಡಲಾಗಿದೆ. ಉಳಿದ ಮಕ್ಕಳ ಆಧಾರ್ ಸಂಖ್ಯೆಯನ್ನು ಅಪ್‌ಲೋಡ್ ಮಾಡಿಲ್ಲ.

ರಾಜ್ಯದ ಶಾಲಾ ಶಿಕ್ಷಣದ ಸದ್ಯದ ಸ್ಥಿತಿ

ರಾಜ್ಯದ ಒಟ್ಟು ಶಾಲೆಗಳು: 74,859
ಒಟ್ಟು ವಿದ್ಯಾರ್ಥಿಗಳ ದಾಖಲಾತಿ ಅಂದಾಜು: 1.17 ಕೋಟಿ.
ಶೂನ್ಯ ದಾಖಲಾತಿ ಶಾಲೆಗಳು: 270ರಿಂದ 104ಕ್ಕೆ ಇಳಿಕೆ.
ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿರುವ ಶಿಕ್ಷಕರು: 308
ಏಕಶಿಕ್ಷಕ ಶಾಲೆಗಳು: 7,349

ರಾಷ್ಟ್ರಮಟ್ಟದಲ್ಲೂ ಸರ್ಕಾರಿ ಶಾಲೆಗಳ ದುಃಸ್ಥಿತಿ:

ದೇಶದಾದ್ಯಂತ ಇದೇ ಪ್ರವೃತ್ತಿ ಕಂಡುಬಂದಿದ್ದು, ಇಡೀ ದೇಶದಲ್ಲಿ ಒಂದೇ ವರ್ಷದಲ್ಲಿ 8,077 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ದೇಶಾದ್ಯಂತ ಸರ್ಕಾರಿ ಶಾಲೆಗಳ ದಾಖಲಾತಿ 12.15 ಕೋಟಿಯಿಂದ 11.89 ಕೋಟಿಗೆ ಕುಸಿದಿದ್ದು, ಸುವಾರು 26 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ದೇಶಾದ್ಯಂತ ಇರುವ ಶಾಲೆಗಳ ಸಂಖ್ಯೆ- 14,66,682
ದಾಖಲಾತಿ - 24,72,19,766
ಶಿಕ್ಷಕರ ಸಂಖ್ಯೆ- 1,02,73,020
ಶಿಕ್ಷಕ-ಮಕ್ಕಳ ಅನುಪಾತ- 24