ಗುರುಮಠಕಲ್ ಖಾಸಾ ಮಠದಲ್ಲಿ ಗುರುಬಸವ ಜ್ಯೋತಿಯಾತ್ರೆ ರಥವನ್ನು ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಸ್ವಾಗತಿಸಿ ಮಾತನಾಡಿದರು. ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ, ಗಿರಿಜಮ್ಮ, ಸರಸ್ವತಿ, ಶಿವಾನಂದ ಬೂದಿ, ನಾಗಭೂಷಣ ಅವಂಟಿ ಇತರರಿದ್ದರು.
ಗುರುಮಠಕಲ್ : ಬಸವ ಉತ್ಸವ ಪ್ರಚಾರಾರ್ಥ ಹಮ್ಮಿಕೊಂಡಿರುವ ಗುರುಬಸವ ಜ್ಯೋತಿಯಾತ್ರೆಗೆ ಖಾಸಾ ಮಠದಲ್ಲಿ ಶುಕ್ರವಾರ ಭವ್ಯ ಸ್ವಾಗತ ಕೋರಲಾಯಿತು.
ಖಾಸಾ ಮಠದ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ದೇಶಾದ್ಯಂತ ಬಸವ ತತ್ವ ಪ್ರಚಾರ ಮಾಡುತ್ತಿರುವ ಡಾ.ಚನ್ನಬಸವಾನಂದ ಸ್ವಾಮೀಜಿಯವರ ಆಗಮನ ಸಂತಸ ತಂದಿದೆ ಎಂದರು.
ಯಾತ್ರೆ ನೇತೃತ್ವ ವಹಿಸಿದ್ದ ಬೆಂಗಳೂರು ಚನ್ನಬಸವ ಜÁ್ಞನಪೀಠದ ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಬೀದರ್‌ನಿಂದ ಬಸವಕಲ್ಯಾಣವರೆಗೆ ಸಾಗುತ್ತಿರುವ ಈ ಜ್ಯೋತಿಯಾತ್ರೆ ಉದ್ದೇಶ ಬಸವ ತತ್ವಗಳನ್ನು ಜನರಿಗೆ ತಲುಪಿಸುವುದಾಗಿದೆ. ಇಂದಿನ ಸಮಾಜಕ್ಕೆ ಬಸವಾದಿ ಶರಣರ ತತ್ವಗಳು ಅತ್ಯಂತ ಅಗತ್ಯವಾಗಿದ್ದು, ಶನಿವಾರದಿಂದ ನಡೆಯಲಿರುವ ಮೂರನೇ ಬಸವ ಉತ್ಸವದಲ್ಲಿ ಜನಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಯಾತ್ರೆ ತಂಡದ ಸದಸ್ಯರಾದ ಗಿರಿಜಮ್ಮ, ಸರಸ್ವತಿ, ಪ್ರಮುಖರಾದ ಶಿವಾನಂದ ಬೂದಿ, ನಾಗಭೂಷಣ ಅವಂಟಿ, ಮಲ್ಲಿಕಾರ್ಜುನ ಹಿರೇಮಠ, ಬಸವರಾಜ ದಳಪತಿ, ಧರ್ಮವೀರ ವಾರದ್, ಅಖಂಡೇಶ್ವರಯ್ಯ ಸ್ವಾಮಿ ಹಿರೇಮಠ, ಆನಂದಶೇಖರ ಹಿರೇಮಠ, ಮುರಳಿಧರ ಸ್ವಾಮಿ, ವೀರಣ್ಣ ಬೇಲಿ, ಶಂಕ್ರಯ್ಯ ಸ್ವಾಮಿ ಗದ್ವಾಲ್, ರಘುನಾಥರೆಡ್ಡಿ ನಜರಾಪುರ, ಮಲ್ಲಿಕಾರ್ಜುನ ವಸöದ್, ಮಲ್ಲಿಕಾರ್ಜುನ ಬೆನಕನಹಳ್ಳಿ ಇತರರಿದ್ದರು. ಖಾಸಾ ಮಠದ ಭಕ್ತ ನರಸರೆಡ್ಡಿ ಪೊಲೀಸ್ ಪಾಟೀಲ್ ಗಡ್ಡೆಸೂಗೂರು ಅವರು ಗುರುಬಸವ ಜ್ಯೋತಿಯಾತ್ರೆಗೆ ೫,೦೦೧ ರೂ. ಕಾಣಿಕೆ ನೀಡಿದರು.