ಜೇವರ್ಗಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ನ 112ನೇ ಸಂಸ್ಥಾಪನಾ ದಿನ ಹಾಗೂ ಕನ್ನಡ ಹಾಡುಗಳ ಕಾರ್ಯಕ್ರಮವನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ಪೊ.ರಮೇಶ ಲಂಡನಕರ್ ಉದ್ಘಾಟಿಸಿದರು. ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯ, ಚನ್ನಮಲ್ಲಯ್ಯ ಹಿರೇಮಠ, ಎಸ್.ಕೆ. ಬಿರಾದಾರ, ಕಲ್ಯಾಣಕುಮಾರ ಸಂಗಾವಿ, ದಯಾನಂದ ದೇವರಮನಿ, ಸೋಮಶೇಖರಗೌಡ ಗುಡೂರ, ಮಲ್ಲಿಕಾರ್ಜುನಗೌಡ ಪಾಟೀಲ್ ಬಿರಾಳ ಇತರರಿದ್ದರು.
ಜೇವರ್ಗಿ: ತನ್ನದೇ ಆದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ಪೊ.ರಮೇಶ ಲಂಡನಕರ್ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ನ 112ನೇ ಸಂಸ್ಥಾಪನಾ ದಿನ ಹಾಗೂ ಕನ್ನಡ ಹಾಡುಗಳ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶರಣರು, ಸಂತರು ಬಾಳಿ ಬೆಳಗಿದ ಪೂಣ್ಯ ಭೂಮಿ ಜೇವರ್ಗಿ. ಇಂತಹ ನೆಲದಲ್ಲಿ ಜನಿಸಿದ ನಾವೇ ಭಾಗ್ಯಶಾಲಿಗಳು ಎಂದರು.
ಕನ್ನಡ ಸಾಹಿತ್ಯ ಲೋಕಕ್ಕೆ ಜೇವರ್ಗಿ ತಾಲೂಕಿನ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳು, ಕಡಕೋಳ ಮಡಿವಾಳೇಶ್ವರ, ರಾಂಪುರದ ಬಕ್ಕಪ್ಪಯ್ಯ, ಚನ್ನೂರಿನ ಜಲಾಲಸಾಬ್ ಮೊದಲಾದ ಶರಣ&ಸಂತರು ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ವಚನ, ಸ್ವರ ವಚನ, ತತ್ವಪದಗಳ ಮೂಲಕ ನಮ್ಮ ಬದುಕಿಗೆ ಬೇಕಾದ ಮುಕ್ತಿ ಮಾರ್ಗದ ತತ್ವ ಸಂದೇಶಗಳನ್ನು ಸಾರಿದ ಮೇರು ವ್ಯಕ್ತಿತ್ವದ ಮಹಾತ್ಮರು ಎಂದರು.
ಶಖಾಪುರ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಚನ್ನಮಲ್ಲಯ್ಯ ಹಿರೇಮಠ, ಎಸ್.ಕೆ. ಬಿರಾದಾರ, ಕಲ್ಯಾಣಕುಮಾರ ಸಂಗಾವಿ, ದಯಾನಂದ ದೇವರಮನಿ, ಸೋಮಶೇಖರಗೌಡ ಗುಡೂರ, ಮಲ್ಲಿಕಾರ್ಜುನಗೌಡ ಪಾಟೀಲ್ ಬಿರಾಳ, ಶಾಂತಗೌಡ ಮಾಲಿಪಾಟೀಲ್, ಶರಣಗೌಡ ಪಾಟೀಲ್ ಜೈನಾಪುರ, ಶ್ರೀನಿವಾಸ ಕುಷ್ಟಗಿ, ಡಾ.ಪಿ.ಎಂ. ಮಠ, ಆದಪ್ಪ ಸಿಕೇದ, ಕವಿತಾ ಹಳ್ಳಿ, ಎಸ್.ಟಿ. ಬಿರಾದಾರ, ಸುನಂದಾ ಕಲ್ಲಾ, ಬಸವರಾಜ ಹಡಪದ, ಶ್ರೀಹರಿ ಕರಕಿಹಳ್ಳಿ, ಉಮಾಕಾಂತ ಗೋಲಗೇರಿ, ಬಂಗಾರಪ್ಪ ಆಡಿನ್, ರಾಜಶೇಖರ ಹಿರೇಮಠ ಇತರರಿದ್ದರು.
ವಿವಿಧ ೇತ್ರದ ಸಾಧಕರಾದ ಮುನಿಯಣ್ಣಗೌಡ ಮಾಲಿಪಾಟೀಲ್, ನೀಲಕಂಠ ಹಳಿಮನಿ, ಎಂ.ಎಸ್. ಪಾಟೀಲ್, ಉಮಾದೇವಿ ಂಟಿಮಠ, ಸುಧಾ ಬೆಣ್ಣೂರ, ಸಂದೀಪ ಠಾಕೂರ್, ಸಂಗಮೇಶ ಸಂಕಾಲಿ, ಶಿವಪುತ್ರಪ್ಪ ನೆಲ್ಲಗಿ, ಸದಾಶಿವ ಪತ್ತಾರ, ಕಲ್ಲಯ್ಯ ಸ್ವಾಮಿ ಮಠಪತಿ, ಚಂದ್ರಾಮ, ತುಕಾರಾಮ, ಸಾಯಿಬಣ್ಣ ಕಲ್ಯಾಣಕರ್, ವೀರಣ್ಣಗೌಡ ಬಿರಾದಾರ, ಷಣ್ಮುಖ ಹುಗ್ಗಿ, ತೇಜಸ್ವಿನಿ ಹಿರೇಮಠ, ಮಲ್ಲಿಕಾರ್ಜುನ ಗುಳ್ಯಾಳ, ಖಲೀಫ್ ಶಿಕಾರಿ ಮಂದ್ರವಾಡ, ನಿಖಿಲ್ ಇಬ್ರಾಹಿಂಪುರ ಅವರನ್ನು ಸನ್ಮಾನಿಸಲಾಯಿತು.