ಆಳಂದ ತಾಲೂಕಿನ ಯಳಸಂಗಿಯಲ್ಲಿ ಅಧಿಕ ಮಾಸ ಅನುಷ್ಠಾನ ಮಂಗಲ ನಿಮಿತ್ತ ಶ್ರೀ ಪರಮಾನಂದ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಸಿದ್ಧಾರೂಡ ಮಠಕ್ಕೆ ಕರೆತರಲಾಯಿತು. ಪ್ರಬುದ್ಧ ಪಾಟೀಲ, ಭೀಮಣ್ಣ ಶಿವಪುರೆ, ಸೂರ್ಯಕಾಂತ ಯಲ್ದೆ, ಗುರುನಾಥ ಶಿವಪುರೆ, ಬಾಬುರಾವ ಯಲ್ದೆ ಇತರರಿದ್ದರು.
- ಶ್ರೀ ಪರಮಾನಂದ ಸ್ವಾಮೀಜಿ ನುಡಿ
- ಯಳಸಂಗಿಯಲ್ಲಿ ಅನುಷ್ಠಾನ ಮಂಗಲ
ಆಳಂದ: 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸ ಆಸ್ತಿಕರ ಪುಣ್ಯ ಸಂಪಾದನೆಗೆ ಪರ್ವಕಾಲ. ಈ ಮಾಸದಲ್ಲಿ ದಿನಗಳು ಹೆಚ್ಚಾಗಿರುವುದರಿಂದ ಧಾರ್ಮಿಕ ಆಚರಣೆ ಹಾಗೂ ದಾನ, ಪೂಜೆ ಮಾಡಬೇಕು ಎಂದು ಮುಚಳಂಬ ಶ್ರೀ ಪರಮಾನಂದ ಸ್ವಾಮೀಜಿ ಹೇಳಿದರು.
ಲೋಕಕಲ್ಯಾಣಾರ್ಥ ಯಳಸಂಗಿ ಗ್ರಾಮದ ಸಿದ್ದಗಿರಿ ಆಶ್ರಮದಲ್ಲಿ ಭಾನುವಾರ ಏರ್ಪಡಿಸಿದ್ದ ಅಧಿಕ ಮಾಸ ಅನುಷ್ಠಾನ ಮಂಗಲೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಅಧಿಕ ಮಾಸಕ್ಕೆ ಪುರುಷೋತ್ತಮ ಮಾಸವೆಂದೂ ಕರೆಯಲಾಗುತ್ತದೆ. ಈ ತಿಂಗಳಲ್ಲಿ ಯಜ್ಞ-ಯಾಗ, ಗ್ರಂಥ ಪಾರಾಯಣ, ಅನ್ನದಾನ, ವಸ್ತ್ರದಾನ ಮಾಡುವುದರಿಂದ ವಿಶೇಷವಾದ ಲ ಸಿಗಲಿದೆ ಎಂದರು.
ಶ್ರೀ ಚಿಕ್ಕರಾಮಲಿಂಗ ಮಹಾಸ್ವಾಮೀಜಿ, ಶ್ರೀ ಕುಮಾರ ಅಂಬಿಗರ ಚೌಡಯ್ಯ ಮಹಾಸ್ವಾಮೀಜಿ, ಬಸವಾನಂದ ಸಾಧಕರು, ಶ್ರೀ ಚನ್ನಬಸವ ದೇವರು, ಶ್ರೀ ಧರ್ಮಲಿಂಗ ಸ್ವಾಮೀಜಿ, ಪ್ರಮುಖರಾದ ಪ್ರಬುದ್ಧ ಪಾಟೀಲ, ಭೀಮಣ್ಣ ಶಿವಪುರೆ, ಸೂರ್ಯಕಾಂತ ಯಲ್ದೆ, ಗುರುನಾಥ ಶಿವಪುರೆ, ಬಾಬುರಾವ ಯಲ್ದೆ, ಶಿವಪುತ್ರ ಜಲ್ದೆ, ಚಿದಾನಂದ ತೇಲಿ, ಮಾಳಪ್ಪ ಪೂಜಾರಿ, ತುಳಜಪ್ಪ ಮೇತ್ರೆ, ಶರಣು ಹೊಸಮನಿ ಇತರರಿದ್ದರು. ಸಿದ್ದಗಿರಿ ಆಶ್ರಮದಿಂದ ಶ್ರೀ ಸಿದ್ದಾರೂಡ ಮಠದವರಿಗೆ ಪರಮಾನಂದ ಸ್ವಾಮೀಜಿಯವರ ಭವ್ಯ ಮೆರವಣಿಗೆ ನಡೆಯಿತು.