ವಡವಡಗಿ ಗ್ರಾಮದ ಮಾದರಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ನಡೆದ ಶಿಕ್ಷಕಿ ಮಹಾನಂದ ಬ್ಯಾಕೋಡ ಅವರ ನಿವೃತ್ತಿ ಸಮಾರಂಭ ಹಾಗೂ ಅವರ ‘ಕಾಡತಾವ ನೆನಪುಗಳು’ ಕವನ ಸಂಕಲನವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ವಿವೇಕಾನಂದ ಕಲ್ಯಾಣಶೆಟ್ಟಿ, ಗುರುವೀರ ಸಿದ್ಧಸ್ವಾಮಿಗಳು, ರವಿಕುಮಾರ ಗಂಗಾಶೆಟ್ಟಿ, ಬ್ರಿಂಗೆಶ್ವರ ಶಿವಾಚಾರ್ಯ ಶ್ರೀ ಇತರರಿದ್ದರು. 
ರಾಜ್ಯ

ಕವನ ಸಂಕಲನದಲ್ಲಿ ಅಡಗಿದೆ ಸಮಾಜದ ನೈತಿಕ ಮೌಲ್ಯ

ಪ್ರಮುಖ ಮುಖ್ಯಾಂಶಗಳು

  • ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿಕೆ
  • ಕಾಡತಾವ ನೆನಪುಗಳು ಪುಸ್ತಕ ಬಿಡುಗಡೆ ಸಮಾರಂಭ
ಬಸವನಬಾಗೇವಾಡಿ: ಕವಿಯಾದವರಿಗೆ ಹೊಸ ಆಲೋಚನೆಗಳ ಜತೆಗೆ ಸಮಾಜ ಕಟ್ಟುವ ಪ್ರಜ್ಞೆ ಇರಬೇಕು ಎಂದು ಹಂಗರಗಿ ಚನ್ನಬಸವೇಶ್ವರ ಪ್ರತಿಷ್ಟಾನ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.
ವಡವಡಗಿ ಗ್ರಾಮದ ಮಾದರಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಶನಿವಾರ ನಡೆದ ಶಿಕ್ಷಕಿ ಮಹಾನಂದ ಬ್ಯಾಕೋಡ ಅವರ ನಿವೃತ್ತಿ ಸಮಾರಂಭ ಹಾಗೂ ಅವರ ‘ಕಾಡತಾವ ನೆನಪುಗಳು’ ಕವನ ಸಂಕಲನ ಬಿಡುಗಡೆ ಮಾಡಿ, ಅವರು
ಮಾತನಾಡಿದರು.
ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮಹಾನಂದ ಬ್ಯಾಕೋಡ ಅವರ ಈ ಮೊದಲ ಪ್ರಯತ್ನವನ್ನು ಕವನ ಸಂಕಲನ ಇದಾಗಿರುವುದರಿಂದ ಓದುಗರು ಪ್ರೋತ್ಸಾಹಿಸಬೇಕು. ಕವನಗಳು ಎಂದರೆ ಕೇವಲ ಶಬ್ದ ಜೋಡಣೆ ಅಲ್ಲ. ಅದರಲ್ಲಿ ಸತ್ವ ಇದ್ದಾಗ ಮಾತ್ರ ಅವುಗಳಿಗೆ ಅರ್ಥ ಬರುತ್ತದೆ. ಜತೆಗೆ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ತುಂಬವ ಕೆಲಸ ಕವನ ಸಂಕಲನದಲ್ಲಿ ಅಡಗಿದೆ ಎಂದು ಹೇಳಿದರು.
ನಂದಿ ಮಠದ ಗುರುವೀರ ಸಿದ್ಧಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸುವುದರ ಜತೆಗೆ ಸಮಾಜದಲ್ಲಿ ಒಳ್ಳೆಯ ಆಸ್ತಿಯಾಗುವಂತೆ ನೋಡಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿ ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ ಗಂಗಾಶೆಟ್ಟಿ ಮಾತನಾಡಿದರು.
ಇಂಗಳೇಶ್ವರದ ಬ್ರಿಂಗೆಶ್ವರ ಶಿವಾಚಾರ್ಯ ಶ್ರೀ, ಯರನಾಳದ ಶಂಕರಗೌಡ ಪಾಟೀಲ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಡೆಂಗಿ, ಪ್ರಭುಗೌಡ ಲಿಂಗದಹಳ್ಳಿ, ಷಣ್ಮುಖಪ್ಪ ಅಂಬಲಿ, ಮಹಾನಂದ ಬ್ಯಾಕೋಡ, ಡಾ. ವೀಣಾ ಗುಳೇದಗುಡ್ಡ, ಸುಜಾತ ಎಡ್ರಾಮಿ ಇತರರಿದ್ದರು. ಶಿಕ್ಷಕ ಜಿ.ಎಂ. ಬಿರಾದಾರ ಸ್ವಾಗತಿಸಿದರು. ವಿದ್ಯಾನಂದ ಕಟ್ಟಿಮನಿ ವಂದಿಸಿದರು. ಶಿಕ್ಷಕ ರವಿ ನಾಯ್ಕ ಎಸ್. ನಿರೂಪಿಸಿದರು.