‘ಮೊಹೆ ಬ್ರೈಡ್ ಟ್ರೈಬ್ 
ರಾಜ್ಯ

ಗಮನ ಸೆಳೆದ ಮೊಹೆ ಬ್ರೈಡ್ ಟ್ರೈಬ್-Mohey

ಬೆಂಗಳೂರು: ಜಯನಗರದ 4ನೇ ಹಂತದಲ್ಲಿ ಮಾನ್ಯವರ್ ಶೋರೂಂನಲ್ಲಿ ಶನಿವಾರ ಆಯೋಜಿಸಿದ್ದ ‘ಮೊಹೆ ಬ್ರೈಡ್ ಟ್ರೈಬ್’ ಕಾರ್ಯಕ್ರಮದಲ್ಲಿ ಯುವತಿಯರು ಮತ್ತು ಫ್ಯಾಷನ್​​​ ಉತ್ಸಾಹಿಗಳು ಸೇರಿ ಹಲವು ಗ್ರಾಹಕರು ವಿವಿಧ ಬಗೆಯ ವಿನ್ಯಾಸದ ಲೆಹೆಂಗಾ ಧರಿಸಿ ಮಿಂಚಿದರು.
ಈ ಕಾರ್ಯಕ್ರಮಕ್ಕಾಗಿ ಮಾನ್ಯವರ್ ಶೋರೂಂನ 2 ಮತ್ತು 3ನೇ ಮಹಡಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಲಕ್ಷಾಂತರ ರೂ. ಮೌಲ್ಯದ ಲೆಹೆಂಗಾ ಧರಿಸುವ ಮೂಲಕ ಯುವತಿಯರು, ತಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
‘ಬ್ಯಾಂಗಲ್ ಬಂಗಾರಿ’ ಪರಿಕಲ್ಪನೆ ಆಧಾರಿತ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಸಂಗೀತ ಸೇರಿ ಇತರ ಕಾರ್ಯಕ್ರಮಗಳಿದ್ದವು. ವಿಶೇಷವಾಗಿ ಲೆಹೆಂಗಾ ಉಡುಪುಗಳನ್ನು ವಿವಾಹಕ್ಕಾಗಿ ವಿನ್ಯಾಸಪಡಿಸಲಾಗಿದೆ. ಬೆಂಗಳೂರಿನ ವಿವಾಹ ಶಾಪಿಂಕ್ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಬದಲಾವಣೆಯಲ್ಲಿ ‘ಮೊಹೆ ಬ್ರೈಡ್ ಟ್ರೈಬ್’ ಪ್ರತಿಬಿಂಬಿಸುತ್ತಿದೆ.
2016ರಲ್ಲಿ ಸ್ಥಾಪನೆಯಾದ ಮೊಹೆ, ವೇದಾಂತ್ ಫ್ಯಾಷನ್ಸ್​​ ಲಿ. ಅಡಿ ಫ್ಯಾಷನ್​​​ ಉಡುಪುಗಳ ಬ್ರ್ಯಾಂಡ್‌ಗೆ ಆಧುನಿಕ ಸ್ಪರ್ಶ ನೀಡುತ್ತಿದೆ. ದೇಶಾದ್ಯಂತ 170ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿರುವ ಮೊಹೆ, ಬ್ರ್ಯಾಂಡೆಡ್, ಉತ್ತಮ ಗುಣಮಟ್ಟದ ಫ್ಯಾಷನ್​​​ ಉಡುಪುಗಳನ್ನು ಮಾರಾಟ ಮಾಡುತ್ತಿದೆ. ಮದುವೆ ಸೇರಿ ಇತರ ಶುಭ ಸಮಾರಂಭಗಳಿಗೆ ಮೊಹೆ ಬ್ರ್ಯಾಂಡ್‌ನ ಲೆಹೆಂಗಾ ಚಿರಪರಿಚಿತವಾಗಿದೆ. ಸೀರೆ, ಸೂಟ್, ಇಂಡೋ-ವೆಸ್ಟರ್ನ್ ಉಡುಪುಗಳಿವೆ. ಆಯಾ ಕಾಲಕ್ಕೆ ತಕ್ಕಂತೆ ವಿನ್ಯಾಸದ ಮೂಲಕ ಉಡುಪು ತಯಾರಿಸುತ್ತಿದೆ.