ನಂದರಗಿ ಗ್ರಾಮದ ಎಸ್.ಸಿ. ಕಾಲನಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಕೆಎಂಎಫ್ ನಿರ್ದೇಶಕ ಸಂತೋಷಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ದಯಾನಂದ ಪಾಟೀಲ, ಮಲ್ಲಯ್ಯ ಹಿರೇಮಠ, ಪ್ರೇಮ ಕಟಕಧೋಂಡ, ದಯಾನಂದ ಪಾಟೀಲ, ಸೋಮು ಕತ್ನಾಳಿ ಇತರರಿದ್ದರು. 
ರಾಜ್ಯ

ಅಭಿವೃದ್ಧಿಗೆ ಶಾಸಕರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಸಂತೋಷ ಗೌಡ ಪಾಟೀಲ ಶ್ಲಾಘನೆ
  • ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಹೊರ್ತಿ : ನಾಗಠಾಣ ಮತಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮತ್ತು ಪ್ರತಿಯೊಂದು ಹಳ್ಳಿಯ ಪ್ರತಿವೊಂದು ಮನೆಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಶಾಸಕ ವಿಠ್ಠಲ ಕಟಕಧೋಂಡ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಂತೋಷಗೌಡ ಪಾಟೀಲ ಹೇಳಿದರು.
ನಂದರಗಿ ಗ್ರಾಮದ ಎಸ್.ಸಿ. ಕಾಲನಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 2025-26ನೇ ಸಾಲಿನ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರ ಅನುಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮುಖಂಡ ದಯಾನಂದ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ದುರಸ್ತಿ, ಹೆಚ್ಚುವರಿ ಕೊಠಡಿಗಳ ನಿರ್ಮಾಣ ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಉಪಯುಕ್ತವಾಗುವಂತೆ ಸಮುದಾಯ ಭವನಗಳ ನಿರ್ಮಾಣ ಕಾರ್ಯಗಳು ವೇಗವಾಗಿ ಪ್ರಗತಿಯಲ್ಲಿವೆ. ಗುಣಮಟ್ಟದ ಕಾಮಗಾರಿಗೆ ಗ್ರಾಮಸ್ಥರ ಸಹಕಾರ ಅಗತ್ಯ ಯೋಜನೆಗಳು ಯಶಸ್ವಿಯಾಗಬೇಕಾದರೆ ಕೇವಲ ಅನುದಾನ ಸಾಕಾಗುವುದಿಲ್ಲ, ಬದಲಿಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ಮಲ್ಲಯ್ಯ ಹಿರೇಮಠ, ಪ್ರೇಮ ಕಟಕಧೋಂಡ, ದಯಾನಂದ ಪಾಟೀಲ, ಸೋಮು ಕತ್ನಾಳಿ, ಬಾಳುಗೌಡ ಪಾಟೀಲ, ಸುನೀಲಗೌಡ ಬಳ್ಳೋಳಿ, ರವಿಗೌಡ ಪಾಟೀಲ, ಸುನೀಲ ಮಾಡೇಕಾರ, ನೀಲಪ್ಪ ಪೂಜಾರಿ, ಶಾಂತಪ್ಪ ಕಟ್ಟಿಮನಿ, ರಾಜು ದೊಡಮನಿ ಇತರರಿದ್ದರು.