ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ದತ್ತಿ ಕಾರ್ಯಕ್ರಮವನ್ನು ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಉದ್ಘಾಟಿಸಿದರು. ಮಾಜಿ ಸಭಾಪತಿ ಬಿ.ಎಲ್.ಶಂಕರ್, ನಾಡೋಜ ವೂಡೇ ಪಿ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.  
ರಾಜ್ಯ

ಮಹನೀಯರ ಸ್ಮರಣೆ ಸಮಾಜಕ್ಕೆ ಪ್ರೇರಣೆ; ನ್ಯಾ.ಶಿವರಾಜ್ ಪಾಟೀಲ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಮಹನೀಯರ ಸ್ಮರಣೆ ಸಮಾಜಕ್ಕೆ ಪ್ರೇರಣೆ
  • ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅಭಿಮತ
  • ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ದತ್ತಿ ಕಾರ್ಯಕ್ರಮ

ಬೆಂಗಳೂರು:ಸಾರ್ವಜನಿಕಸೇವೆಗಾಗಿ ತಮ್ಮನ್ನು ತಾವುತೊಡಗಿಸಿಕೊಂಡ ಮಹನೀಯರ ಸ್ಮರಣೆಮಾಡುವುದರಿಂದ ಸಮಾಜಕ್ಕೆ ಪ್ರೇರಣೆದೊರೆಯುತ್ತದೆ ಎಂದು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಡಾ.ಶಿವರಾಜಪಾಟೀಲ್ ಅಭಿಪ್ರಾಯಿಸಿದ್ದಾರೆ.

ಗಾಂಧಿಭವನದದಲ್ಲಿ ಆಯೋಜಿಸಿದ್ದ ಮಾಜಿಮುಖ್ಯಮಂತ್ರಿ ಕಡಿದಾಳ್ ಮಂಜಪ್ಪದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿದರು.

ಕಡಿದಾಳ್ಮಂಜಪ್ಪನವರು ಸಾರ್ವಜನಿಕ ಸೇವೆಎಂಬ ಪರಿಕಲ್ಪನೆಗೆ ವ್ಯಾಖ್ಯಾನದಂತಿದ್ದರು.ಯಾವುದೇ ಮಹನೀಯರನ್ನುಸ್ಮರಣೆ ಮಾಡುವುದರಿಂದ ಅಥವಾ ಅವರಸ್ಮಾರಕ ನಿರ್ಮಿಸುವುದರಿಂದಅವರಿಗೇನು ಪ್ರಯೋಜನವಾಗುವುದಿಲ್ಲ.ಬದಲಿಗೆ ಮಹನೀಯರಸ್ಮರಣೆಯಿಂದ,ಅವರ ಮೌಲ್ಯಗಳಪಾಲನೆಯಿಂದ ಸಮಾಜಕ್ಕೆ ಹೊಸಸ್ಪೂರ್ತಿ,ಪ್ರೇರಣೆದೊರೆಯುತ್ತದೆ.ರಾಜ್ಯದ ಮಂತ್ರಿಗಳಾಗಿ,ಮುಖ್ಯಮಂತ್ರಿಗಳಾಗಿಸೇವೆ ಮಾಡಿದ ನಂತರ ಮತ್ತೆಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿಮುಂದುವರೆಸಿದ ಅಪರೂಪದ ವ್ಯಕ್ತಿಕಡಿದಾಳ್ ಮಂಜಪ್ಪನವರು.ರಾಜ್ಯದ ಭೂಸುಧಾರಣೆಕಾಯ್ದೆಯ ಜಾರಿಗೆ ಬುನಾದ ಹಾಕಿದದೂರದೃಷ್ಟಿಯ ರಾಜಕಾರಣಿಯಾಗಿದ್ದರು.ರೈತರ ಬದುಕಿನಬಗ್ಗೆ ಕಡಿದಾಳ್ ಅವರಿಗೆ ವಿಶೇಷಕಾಳಜಿ ಇತ್ತು.ಇಂತಹ ಬಹುಮುಖವ್ಯಕ್ತಿತ್ವದ ಕಡಿದಾಳ್ ಮಂಜಪ್ಪನವರದತ್ತಿ ಕಾರ್ಯಕ್ರಮ ನಿಜಕ್ಕೂಅರ್ಥಪೂರ್ಣ ಎಂದು ನ್ಯಾ.ಶಿವರಾಜ್ಪಾಟೀಲ್ ಶ್ಲಾಸಿದರು.

ಸಮಾರಂಭದಅಧ್ಯಕ್ಷತೆ ವಹಿಸಿದ್ದ ನಾಡೋಜವೂಡೇ ಪಿ.ಕೃಷ್ಣಮಾತನಾಡಿ, ಹಿಂದಿನರಾಜಕಾರಣಿಗಳಿಗೆ ಕಾನೂನು ಪರಿಜ್ಞಾನಚನ್ನಾಗಿತ್ತು.ಅದರಿಂದ ಯಾವುದೇಹಗರಣಗಳು,ಭ್ರಷ್ಟಾಚಾರಆಗುತ್ತಿರಲಿಲ್ಲ.ಅಂತಹ ಕಾನೂನುಪರಿಣತಿ ಹೊಂದಿದ್ದ ರಾಜಕಾರಣಿಗಳಲ್ಲಿಕಡಿದಾಳ್ ಮಂಜಪ್ಪ ಪ್ರಮುಖರಾಗಿದ್ದರು.ಕಡಿದಾಳ್ಗ್ರಾಮದಲ್ಲಿರುವ ಇವರ ಸಮಾದಿಯನ್ನುಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಹಿತಾಸಕ್ತಿ ವರ್ಸಸ್ಖಾಸಗಿ ಹಿತಾಸಕ್ತಿ ಎಂಬ ವಿಷಯದಕುರಿತು ಮಾಜಿ ಸಭಾಪತಿ ಬಿ.ಎಲ್.ಶಂಕರ್ಉಪನ್ಯಾಸ ನೀಡಿದರು.ಮಾಜಿ ಶಾಸಕಡಿ.ಆರ್.ಪಾಟೀಲ್,ಮಾಜಿ ಸಂಸದನಾರಾಯಣ ಸ್ವಾಮಿ,ಹಿರಿಯ ವಿಜ್ಞಾನಿಶರತ್‌ಚಂದ್ರ,ಗಾಂಧಿ ಭವನದಕಾರ್ಯದರ್ಶಿ ನರೇಂದ್ರ, ಶ್ರೀಕಲಾ ಕಡಿದಾಳ್,ಜಯಪ್ರಕಾಶ್ಕಡಿದಾಳ್, ಕಡಿದಾಳ್ಕುಟುಂಬದ ಇನ್ನಿತರ ಸದಸ್ಯರುಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಒಮ್ಮೆ ಕಡಿದಾಳ್ ಮಂಜಪ್ಪನವರು ಪ್ರಮಾಣಿಕರಾಗಿರುವುದರಿಂದ ಅವರು ಪ್ರಖ್ಯಾತರಾಗಿಲ್ಲ ಎಂದು ಹೇಳಿದ್ದರು. ಇದೊಂದು ಮಾತು ಕಡಿದಾಳ್ ಅವರ ವ್ಯಕ್ತಿತ್ವವನ್ನು ವಿವರಿಸುತ್ತದೆ. ವಕೀಲರಾಗಿ, ಚಿಂತಕರಾಗಿ, ಸಾಹಿತಿಯಾಗಿ, ರಾಜಕಾರಣಿಯಾಗಿ ಕಡಿದಾಳ್ ಮಂಜಪ್ಪನವರ ವ್ಯಕ್ತಿತ್ವ ಇತ್ತೀಚಿನ ರಾಜಕಾರಣಿಗಳಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಆದರ್ಶವಾಗಿದೆ.