ಕೊಳ್ಳೇಗಾಲದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯ ಮುಖ್ಯ ರಸ್ತೆ ಬದಿಯಲ್ಲಿ ಕಸದ ಸುರಿದಿರುವುದು. 
ರಾಜ್ಯ

ಕಸ ಸುರಿಯುವ ತಾಣವಾದ ಮುಖ್ಯರಸ್ತೆ!

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯ ಮುಖ್ಯ ರಸ್ತೆ ಬದಿ
  • ಕಸ ಸುರಿಯುವ ತಾಣ

ಕೊಳ್ಳೇಗಾಲ: ಪಟ್ಟಣದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯ ಮುಖ್ಯ ರಸ್ತೆ ಬದಿ ಕಸ ಸುರಿಯುವ ತಾಣವಾಗಿ ಮಾರ್ಪಟ್ಟಿದೆ. ಬಡಾವಣೆಗೆ ತೆರಳುವ ಮುಖ್ಯ ರಸ್ತೆ ಬದಿಯಲ್ಲಿಯೇ ಗೃಹ ಬಳಕೆ ತ್ಯಾಜ್ಯ, ನಿರುಪಯುಕ್ತ ವಸ್ತುಗಳನ್ನು ಸುರಿಯಲಾಗುತ್ತಿದೆ. ಇದ್ದರಿಂದ ರಸ್ತೆಯ ಸೌಂದರ್ಯ ಕಳೆಗುಂದಿದೆ. ದುರ್ವಾಸನೆಯಿಂದ ನಿವಾಸಿಗಳು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.


ಬಡಾವಣೆ ಮುಖ್ಯ ರಸ್ತೆಯಲ್ಲಿ ಕಸ ಸುರಿಯುತ್ತಿರುವ ಕುರಿತು ನಗರಸಭೆ ಅಧಿಕಾರಿಗಳು ಗಮನ ಹರಿಸಬೇಕು. ರಸ್ತೆಯಲ್ಲಿ ಕಸ ಸುರಿಯುವವರ ಮೇಲೆ ಕ್ರಮ ವಹಿಸಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಮಹದೇವಸ್ವಾಮಿ ಯುಪಿಎಸ್ ಒತ್ತಾಯಿಸಿದ್ದಾರೆ.