ಚಿಂಚೋಳಿ ತಾಲೂಕಿನ ಕಲ್ಲೂರ ರೋಡ್​ ಗ್ರಾಮದಲ್ಲಿ ಬುಧವಾರ ಶ್ರೀ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ಜರುಗಿತು. 
ರಾಜ್ಯ

ಶ್ರೀ ವೀರಭದ್ರೇಶ್ವರನ ಮಹಾರಥೋತ್ಸವ

ಚಿಂಚೋಳಿ: ಕಲ್ಲೂರ ರೋಡ್​ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು. ಜಾತ್ರೆ ನಿಮಿತ್ತ ಐದು ದಿನ ಅದ್ದೂರಿಯಾಗಿ ಪಲ್ಲಕ್ಕಿ ಉತ್ಸವ ಜರುಗಿತು. ಬುಧವಾರ ಬೆಳಗ್ಗೆ ಅಪಾರ ಭಕ್ತರು ಅಗ್ಗಿ ತುಳಿದು ಹರಕೆ ತೀರಿಸಿದರು. ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಸಂಜೆ 7ಕ್ಕೆ ಶ್ರೀ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ನೆರವೇರಿತು. ಶ್ರೀ ವೀರಭದ್ರೇಶ್ವರ ಮಹಾರಾಜ್​ಕಿ ಜೈ.. ಜೈ ವೀರಭದ್ರ.. ಹರಹರ ಮಹಾದೇವ ಸೇರಿ ವಿವಿಧ ೂಷ ಮೊಳಗಿದವು. ರಥಕ್ಕೆ ಬಾಳೆಹಣ್ಣು, ಉತ್ತತ್ತಿ, ಹೂವು, ನಾಣ್ಯ ಅರ್ಪಿಸಿ ಹರಕೆ ತೀರಿಸಿದರು. ಶಾಸಕ ಡಾ.ಅವಿನಾಶ ಜಾಧವ್​, ಪ್ರಮುಖರಾದ ವೀರಾರೆಡ್ಡಿ ಪಾಟೀಲ್​, ಚಂದ್ರು ಜೊನ್ನಲ್​, ಕಿಷ್ಟಪ್ಪ ಪೂಜಾರಿ, ನಾಗರಾಜ ಸೇವಾತ್ಕಾರ್​, ಜಗದೀಶ ಸಜ್ಜನ್​, ಬಸವರಾಜ್​ ಕಂಟ್ಲಿ, ಶ್ರೀಶೈಲಂ ಹೋಟೆಲ್​, ಗೋಪಾಲ ಭೋವಿ, ರವಿಕುಮಾರ ಊರೆಡಿ, ಪ್ರಭಾಕರ ಸ್ವಾಮಿ, ಅಭಿಷೇಕ ಸಜ್ಜನ್​, ಶಾಂತು ಭೋವಿ, ವೀರೇಶ ರೈಪಳ್ಳಿ, ನಾಗೀಂದ್ರ ಸುಂಟನ್​, ಈಶಪ್ಪ ಮರಪಳ್ಳಿ, ಹರೀಶ ಜೊನ್ನಲ್​, ಸಚಿನ್​ ಪಲ್ಲೆದ್​, ರಾಕೇಶ ಕಂಟ್ಲಿ, ಪ್ರವಿಣ ಕಂಟ್ಲಿ, ನಿತಿನ್​ ಮಂಗಳೆಕರ್​, ಮಹೇಶ ಸ್ವಾಮಿ ಇತರರಿದ್ದರು.