The lover who sacrificed the woman
ಚಿಕ್ಕಬಳ್ಳಾಪುರ: ನಗರದಲ್ಲಿ ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ನಗರ ನಿವಾಸಿ ತೇಜಸ್ವಿನಿ (32) ಮೃತೆ. ಆರೋಪಿ ಸಂದೀಪ್(35). ನಗರ ಠಾಣೆಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಜತೆಗೆ ತೇಜಸ್ವಿನಿ ಗೆಳತಿ ಅರುಣಾಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ತೇಜಸ್ವಿನಿ ಇಬ್ಬರು ಮಕ್ಕಳು ತಾಯಿ. ಗಂಡನನ್ನು ತೊರೆದು ಪ್ರಿಯಕರ ಸಂದೀಪ್ನೊಂದಿಗೆ ಜೀವನ ಸಾಗಿಸುತ್ತಿದ್ದಳು. ಇದರ ನಡುವೆ ಮೂರು ದಿನಗಳ ಹಿಂದೆ ಇಬ್ಬರ ನಡುವೆ ಗಲಾಟೆಯಾಗಿದ್ದು, ವಿಕೋಪಕ್ಕೆ ಹೋಗಿ ಆರೋಪಿಯು ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ವಿನಿಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.