ಬೀಳಗಿ ಪಟ್ಟಣದ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಸ್ನಾತಕೋತ್ತರ ಕೇಂದ್ರದ ಸಭಾ ಭವನದಲ್ಲಿ ಇಳಕಲ್ಲ ಡಾ.ಮಹಾಂತ ಸ್ವಾಮೀಜಿ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ ದಿನ ಆಚರಿಸಲಾಯಿತು. ಗುರುಪಾದ ಶ್ರೀಗಳು, ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಅಧಿಕಾರಿ ಭಾಗೀರಥಿ ಕೋರಿ, ಆರ್.ಪಿ. ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಶ್ರೀದೇವಿ ಪಾಟೀಲ ಇದ್ದರು.
- ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಅಭಿಮತ
- ವ್ಯಸನಮುಕ್ತ ದಿನಾಚರಣೆ
ಬೀಳಗಿ: ಸ್ವಾಸ್ಥೃ ಸಮಾಜ ನಿರ್ಮಾಣಕ್ಕೆ ಅನೇಕ ಸಂತರು, ಶರಣರು, ಸಾಧು, ಮಹಾತ್ಮರಲ್ಲಿ ಇಳಕಲ್ಲ ಮಹಾಂತ ಶ್ರೀಗಳು ತಮ್ಮ ಜೀವನಪುರ್ತಿ ಜೋಳಿಗೆ ಹಾಕಿಕೊಂಡು ನಿಮ್ಮಲ್ಲಿರುವ ದುಶ್ಚಟಗಳನ್ನು ಬೇಡಿದರು. ಇದು ಬಹುದೊಡ್ಡ ಸಾಮಾಜಿಕ ಕ್ರಾಂತಿ ಎಂದು ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಸ್ನಾತಕೋತ್ತರ ಕೇಂದ್ರದ ಸಭಾ ಭವನದಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ವಿವಿಧ ಇಲಾಖೆಯ ಸಹಯೋಗದಲ್ಲಿ ಇಳಕಲ್ಲನ ಮಹಾಂತ ಸ್ವಾಮೀಜಿ ಜನ್ಮ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದುಶ್ಚಟಗಳಿಗೆ ಒಳಗಾದವರ ಕುಟುಂಬ ಬೀದಿಗೆ ಬರುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಹಿನ್ನೆಲೆ ದುಶ್ಚಟಗಳನ್ನು ಮಾಡಬಾರದು ಎಂದು ಸಮಾಜಕ್ಕೆ ಸಂದೇಶ ನೀಡಿದರು. ಅಂದು ಅವರ ಮಾತು ಕೇಳಿದ ಅನೇಕರು ದುಶ್ಚಟಗಳಿಂದ ಮುಕ್ತಿ ಹೊಂದಿದ್ದಾರೆ ಎಂದರು.
ತಹಸೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ಸದೃಢ ದೇಶ ನಿರ್ಮಾಣವಾಗಬೇಕಾದರೆ ಯುವಕರು ದುಶ್ಚಟಗಳಿಂದ ಮುಕ್ತರಾಗಬೇಕು. ಆರೋಗ್ಯಕ್ಕಿಂತ ದೊಡ್ಡ ಶ್ರೀಮಂತಿಕೆ ಯಾವುದು ಇಲ್ಲ. ಸರ್ವೋತ್ತಮ ಬೆಳವಣಿಗೆಯ ವ್ಯಸನಗಳಿಗೆ ನಾವು ಹತ್ತಿರವಾಗಬೇಕು ಎಂದರು.
ತಾಪಂ ಅಧಿಕಾರಿ ಭಾಗೀರಥಿ ಕೋರಿ, ಆರ್.ಪಿ. ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಶ್ರೀದೇವಿ ಪಾಟೀಲ, ಟಿಎಚ್‌ಒ ಡಾ, ಅನಿಲಕುಮಾರ ಬದ್ನೂರ, ಡಾ.ವಿಶ್ವನಾಥ ಪತ್ತಾರ, ಸುಜಾತಾ ರಜಪೂತ, ಉಪನ್ಯಾಸಕಿ ಶಶಿಕಲಾ ಜೋಳದ, ಬಾಪೂಜಿ ಕಾತರಕಿ ಇದ್ದರು.