ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಯೋಜನಾ ಬಾಧಿತ ಸಂತ್ರಸ್ತರ ಧರಣಿ ಸ್ಥಳಕ್ಕೆ ಸಂಸದ ಪಿ.ಸಿ. ಗದ್ದಿಗೌಡರ ಭೇಟಿ ನೀಡಿ ಬೆಂಬಲ ಸೂಚಿಸಿದರು. ಡಾ. ಮಹಾಂತೇಶ ಕಡಪಟ್ಟಿ, ವೀರೇಶ ಉಂಡೋಡಿ ಇದ್ದರು.
- ಸಂಸದ ಪಿ.ಸಿ. ಗದ್ದಿಗೌಡರ ಬೆಂಬಲ
- ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು
ಹುನಗುಂದ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ನಡೆಸುತ್ತಿರುವ ಹೋರಾಟವು ಶನಿವಾರ 46ನೇ ದಿನಕ್ಕೆ ಕಾಲಿಟ್ಟಿದ್ದು, ಸಂಸದ ಪಿ.ಸಿ. ಗದ್ದಿಗೌಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತ್ರಸ್ತರ ಬದುಕು ಬಹಳಷ್ಟು ನೋವಿನಿಂದ ಕೂಡಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ವಿಶೇಷವಾಗಿ ಸಿಎಂ ಡಿ.ಕೆ. ಶಿವಕುಮಾರ ಸೇರಿ ಸಂಬಂಧಪಟ್ಟ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬ, ಕೃಷಿ ಚಟುವಟಿಕೆಗೆ ಬೇಕಾಗುವ ಸಲಕರಣೆ ಹಾಗೂ ದನಕರುಗಳನ್ನು ಜೊತೆಗೆ ಜೀವನ ನಡೆಸಲು ಹೆಚ್ಚಿನ ಜಾಗೆ ಬೇಕಾಗುತ್ತದೆ.
ಆದ್ದರಿಂದ ಸಂಸ್ರಸ್ತರಿಗೆ ನೀಡಿದ ಕೇವಲ 1 ಗುಂಟೆ ಜಾಗ ವೈಜ್ಞಾನಿಕವಾಗಿದೆ. ಇಷ್ಟರಲ್ಲಿ ಬದುಕು ಸಾಗದೆ ಸಂತ್ರಸ್ತರಿಗೆ ಕನಿಷ್ಠ 4 ಗುಂಟೆ ಸ್ಥಳವನ್ನು ಕಲ್ಪಿಸಿ ಜೀವನಕ್ಕೆ ಬೇಕಾಗುವ ವಿವಿಧ ಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಡಾ. ಮಹಾಂತೇಶ ಕಡಪಟ್ಟಿ, ಮಾಜಿ ಜಿಪಂ ಸದಸ್ಯ ವೀರೇಶ ಉಂಡೋಡಿ, ವಿಠ್ಠಲ ತಿಮ್ಮಾಪುರ, ಅಜ್ಜಪ್ಪ ನಾಡಗೌಡ, ಬಸವರಾಜ ಬಡ್ಡಿ, ಮಹಾಂತೇಶ ನಾಡಗೌಡ, ಮಲ್ಲಪ್ಪ ಹಳಪೇಟಿ, ಹಸನಸಾಬ ಪಿಂಜಾರ, ಶರಣಪ್ಪ ಮುಳ್ಳೂರ, ವೀರಪ್ಪ ಆನೇಹೊಸೂರ ಇತರರಿದ್ದರು. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ನಡೆಸುತ್ತಿರುವ ಹೋರಾಟವು ಶನಿವಾರ 46ನೇ ದಿನಕ್ಕೆ ಕಾಲಿಟ್ಟಿದ್ದು, ಸಂಸದ ಪಿ.ಸಿ. ಗದ್ದಿಗೌಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತ್ರಸ್ತರ ಬದುಕು ಬಹಳಷ್ಟು ನೋವಿನಿಂದ ಕೂಡಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ವಿಶೇಷವಾಗಿ ಸಿಎಂ ಡಿ.ಕೆ. ಶಿವಕುಮಾರ ಸೇರಿ ಸಂಬಂಧಪಟ್ಟ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬ, ಕೃಷಿ ಚಟುವಟಿಕೆಗೆ ಬೇಕಾಗುವ ಸಲಕರಣೆ ಹಾಗೂ ದನಕರುಗಳನ್ನು ಜೊತೆಗೆ ಜೀವನ ನಡೆಸಲು ಹೆಚ್ಚಿನ ಜಾಗೆ ಬೇಕಾಗುತ್ತದೆ.
ಆದ್ದರಿಂದ ಸಂಸ್ರಸ್ತರಿಗೆ ನೀಡಿದ ಕೇವಲ 1 ಗುಂಟೆ ಜಾಗ ವೈಜ್ಞಾನಿಕವಾಗಿದೆ. ಇಷ್ಟರಲ್ಲಿ ಬದುಕು ಸಾಗದೆ ಸಂತ್ರಸ್ತರಿಗೆ ಕನಿಷ್ಠ 4 ಗುಂಟೆ ಸ್ಥಳವನ್ನು ಕಲ್ಪಿಸಿ ಜೀವನಕ್ಕೆ ಬೇಕಾಗುವ ವಿವಿಧ ಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಡಾ. ಮಹಾಂತೇಶ ಕಡಪಟ್ಟಿ, ಮಾಜಿ ಜಿಪಂ ಸದಸ್ಯ ವೀರೇಶ ಉಂಡೋಡಿ, ವಿಠ್ಠಲ ತಿಮ್ಮಾಪುರ, ಅಜ್ಜಪ್ಪ ನಾಡಗೌಡ, ಬಸವರಾಜ ಬಡ್ಡಿ, ಮಹಾಂತೇಶ ನಾಡಗೌಡ, ಮಲ್ಲಪ್ಪ ಹಳಪೇಟಿ, ಹಸನಸಾಬ ಪಿಂಜಾರ, ಶರಣಪ್ಪ ಮುಳ್ಳೂರ, ವೀರಪ್ಪ ಆನೇಹೊಸೂರ ಇತರರಿದ್ದರು.