ಗ್ಯಾರಂಟಿ ಯೋಜನಾ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ 
ರಾಜ್ಯ

ಸರ್ಕಾರದ ಗ್ಯಾರಂಟಿಗಳಿಂದ ಬದಲಾದ ಜನಸಾಮಾನ್ಯರ ಬದುಕು

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನಾ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿಕೆ
  • ಯೋಜನೆ ಅಚ್ಚುಕಟ್ಟಾಗಿ ಜಾರಿಗೆ ತಂದ ಜಿಲ್ಲೆಗಳಿಗೆ ಪ್ರೋತ್ಸಾಹ ಬಹುಮಾನ
ರಾಯಚೂರು: ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾತ್ರ ಅನನ್ಯ. ಯೋಜನೆಗಳು ಚುನಾವಣೆಗಾಗಿ ಮಾತ್ರ ಜಾರಿಗೊಳಿಸಿದ್ದಲ್ಲ ಎಂದು ಗ್ಯಾರಂಟಿ ಯೋಜನಾ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಉತ್ಸವದಲ್ಲಿ ಶನಿವಾರ ಕೃಷಿ ವಿವಿಯ ಬೆಳ್ಳಿ ಮಹೋತ್ಸವ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಕ್ತಿ ಯೋಜನೆಯಿಂದ ಇದುವರೆಗೆ 659 ಕೋಟಿ ಟ್ರಿಪ್‌ಗಳು ನಡೆದಿದ್ದು, 500 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಅನ್ನಭಾಗ್ಯ ಮೂಲಕ ಹಸಿವುಮುಕ್ತ ಕರ್ನಾಟಕವಾಗಿದೆ. 21 ಜಿಲ್ಲೆಗಳಲ್ಲಿ ಗ್ಯಾರಂಟಿಗಳ ಕಾರ್ಯಾಗಾರ ನಡೆಸಲಾಗಿದೆ.
ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಅನೇಕ ಕುಟುಂಬಗಳು ತಮ್ಮ ಜೀವನವನ್ನು ಸುಧಾರಿಸಿಕೊಂಡಿವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮೃತಪಟ್ಟಿರುವ 1,922 ಫಲಾನುಭವಿಗಳ ಕುಟುಂಬಗಳ ಖಾತೆಗಳಿಗೆ ಒಟ್ಟು 2.20 ಲಕ್ಷ ಕೋಟಿ ರೂ. ಗೃಹಲಕ್ಷ್ಮಿ ಹಣ ಜಮಾ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಸೇರಿದೆ. ಇಂಥ ಸೋರಿಕೆಗಳನ್ನು ತಡೆಗಟ್ಟುವ ಕೆಲಸವಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಚ್ಚುಕಟ್ಟಾಗಿ ಜಾರಿಗೆ ತಂದ ಜಿಲ್ಲೆಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 10 ಪ್ರೋತ್ಸಾಹ ಬಹುಮಾನಗಳನ್ನು ನೀಡಲಾಗುವುದು.