ಬಸವಕಲ್ಯಾಣದ ಶರಣ ನಗರದಲ್ಲಿ ಇಷ್ಟಲಿಂಗ ಮಹಾಪೂಜೆ ನಿಮಿತ್ತ ಆಯೋಜಿಸಿದ್ದ ಬುಧವಾರ ಧರ್ಮಸಭೆಯನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಶರಣಯ್ಯ ಸ್ವಾಮಿ ಮಠಪತಿ, ರಾಚಯ್ಯ ಸ್ವಾಮಿ ಮಠಪತಿ, ಶಿವಲಿಂಗಮ್ಮ ಸ್ವಾಮಿ, ಬಸವರಾಜ ಸ್ವಾಮಿ ಮಠಪತಿ ಇತರರಿದ್ದರು. 
ರಾಜ್ಯ

ಗುರುವಿನ ಸಾನ್ನಿಧ್ಯದಿಂದ ಭಾಗ್ಯದ ಬೆಳಕು

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ. ಚನ್ನವಿರ ಶಿವಾಚಾರ್ಯ ನುಡಿ
  • ಬಸವಕಲ್ಯಾಣದಲ್ಲಿ ಧರ್ಮಸಭೆ
ಬಸವಕಲ್ಯಾಣ: ಒಂಟಿತನ, ಬಡತನ, ರೋಗ-ರುಜಿನ, ಕಷ್ಟ-ನಷ್ಟ ಇವೆಲ್ಲ ಶಾಪವಲ್ಲ, ಇವು ಬದುಕನ್ನು ಅರ್ಥ ಮಾಡಿಸುವ ಅಮೂಲ್ಯ ಸಂದರ್ಭಗಳು, ಮನುಷ್ಯನನ್ನು ಗಟ್ಟಿಗೊಳಿಸುವ ಸಾಧನಗಳು ಎಂದು ಭಾವಿಸಬೇಕು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ. ಚನ್ನವಿರ ಶಿವಾಚಾರ್ಯರು ನುಡಿದರು.
ನಗರದ ಎಂ.ಬಿ.ಪಾಟೀಲ ಬಡಾವಣೆಯ ಶರಣ ನಗರದಲ್ಲಿ ಇಷ್ಟಲಿಂಗ ಮಹಾಪೂಜೆ ನಿಮಿತ್ತ ಬುಧವಾರ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯನ ಬದುಕಿನಲ್ಲಿ ಕತ್ತಲೆಯ ಅಧ್ಯಾಯಗಳು ಬರುವುದು ಸಹಜ ಅವುಗಳಿಂದ ದೃತಿಗೆಟ್ಟು ಹೆದರಬಾರದು, ಗುರುವಿನ ಸಾನ್ನಿಧ್ಯದಿಂದ ಭಾಗ್ಯದ ಬೆಳಕು ಮೂಡುತ್ತದೆ ಎಂದರು.
ಮಹಾತ್ಮರ ಬದುಕಿನಲ್ಲಿಯೂ ಕತ್ತಲೆಯ ಅಧ್ಯಾಯಗಳು ಉಂಟೆಂಬುದು ತಿಳಿದಿದ್ದೇವೆ, ರಾಮನಿಗೂ ವನವಾಸವಿತ್ತು ಕೃಷ್ಣನಿಗೂ ಕಞ್ಟವಿತ್ತು ಅಂದ ಮೇಲೆ ಸಾಮಾನ್ಯರ ಬದುಕಿನಲ್ಲಿ ಇರುಳು ಇಣುಕುವುದು ಸಹಜ. ಗುರುವಿನ ದಿವ್ಯಾನುಭವದ ಬೆಳಕಿನಲ್ಲಿ ಆತ್ಮಸಾಕ್ಷಿ ಹೆಮ್ಮೆ ಪಡುವಂತೆ ಬದುಕಿದರೆ, ಗೆಲುವುಗಳು ಸಾಲುಗಟ್ಟಿ ನಿಲ್ಲುತ್ತವೆ ಎಂದರು.
ಶರಣಯ್ಯ ಸ್ವಾಮಿ ಮಠಪತಿ, ವೀರಣ್ಣ ಶೀಲವಂತ, ಶ್ರಾವಣಕುಮಾರ ಸ್ವಾಮಿ, ರುದ್ರೇಶ್ವರ ಗೋರಟ, ಬಸವರಾಜ ಮಠಪತಿ ಇದ್ದರು. ರಾಚಯ್ಯ ಸ್ವಾಮಿ ಮಠಪತಿ ನೀಲಳ್ಳಿ ಸ್ವಾಗತಿಸಿದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ಹಾಡಿದರು. ಶರಣಯ್ಯ ಸ್ವಾಮಿ ಮಠಪತಿ ನೀಲಳ್ಳಿ ಪರಿವಾರದಿಂದ ಹಾರಕೂಡ ಶ್ರೀಗಳ 1023ನೇ ತುಲಾಭಾರ ಜರುಗಿತು.