ತಾಳಿಕೋಟೆ ತಹಸೀಲ್ದಾರ ಕಾರ್ಯಾಲಯದಲ್ಲಿ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಆಚರಿಸಲಾಯಿತು. ಪಿಎಸ್‌ಐ ಜ್ಯೋತಿ ಖೋತ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ ದಮ್ಮೂರಮಠ, ಸಿ.ಆರ್.ಸಿ.ರಾಜು ವಿಜಾಪುರ, ರಡ್ಡಿ ಸಮಾಜದ ಮುಖಂಡ ಜಿ.ಜಿ. ಮದರಕಲ್ಲ, ಬಿ.ಎನ್. ಹಿಪ್ಪರಗಿ, ಸಿದ್ದನಗೌಡ ಪಾಟೀಲ ಇತರರಿದ್ದರು. 
ರಾಜ್ಯ

ಮಹಾಸಾಧ್ವಿ ಜೀವನ ನಮಗೆ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಸಂಗಮೇಶ ದೇಸಾಯಿ ಅಭಿಮತ
  • ಜಯಂತಿ ಆಚರಣೆ
ತಾಳಿಕೋಟೆ: ಶ್ರೀಶೈಲ ಮಲ್ಲಿಕಾರ್ಜುನನ ಪರಮಭಕ್ತೆಯಾಗಿದ್ದ ಹೇಮರಡ್ಡಿ ಮಲ್ಲಮ್ಮ ಜೀವನದಲ್ಲಿನ ಕಷ್ಟಗಳನ್ನು ಸಂತೋಷದಿಂದ ಸ್ವೀಕರಿಸಿ, ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಿದ ಮಹಾನ್ ಸಾಧ್ವಿ ಎಂದು ವಿನಾಯಕ ಇಂಟರ್‌ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಸಂಗಮೇಶ ದೇಸಾಯಿ ಹೇಳಿದರು.
ತಾಲೂಕಾಡಳಿತ ವತಿಯಿಂದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಸವಣ್ಣನವರ ತತ್ವಗಳನ್ನು ಪರಿಪಾಲಿಸಿಕೊಂಡು ಬಂದ ಮಲ್ಲಮ್ಮ, ಸಂಪತ್ತು ಬಂದಾಗ ಅಹಂಕಾರ ಪಡದೆ ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ. ಅವರ ಜೀವನ ನಮಗೆ ದಾರಿದೀಪ, ಅವರ ಆದರ್ಶ ಎಲ್ಲರಿಗೂ ಅನುಕರಣಿಯ ಎಂದರು.
ಪಿಎಸ್‌ಐ ಜ್ಯೋತಿ ಖೋತ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ, ಸಿ.ಆರ್.ಸಿ. ರಾಜು ವಿಜಾಪುರ,
ರಡ್ಡಿ ಸಮಾಜದ ಮುಖಂಡರಾದ ಜಿ.ಜಿ. ಮದರಕಲ್ಲ, ಬಿ.ಎನ್. ಹಿಪ್ಪರಗಿ, ಸಿದ್ದನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಮಂಗಳೂರ, ರವಿ ಪಾಟೀಲ, ಶರಣಗೌಡ ಇಬ್ರಾಹಿಂಪೂರ, ಎಚ್.ಬಿ. ಗೂಗಲ್, ಸಂಗನಗೌಡ ಅಸ್ಕಿ ಇತರರಿದ್ದರು.