ಶಹಾಪುರದ ವಿಶ್ವಜ್ಯೋತಿ ಸ್ವತಂತ್ರ ವಿe್ಞÁನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಸಾಹಿತಿ ಅಶೋಕ ಚೌಧರಿ ಮಾತನಾಡಿದರು. ರಾಜಶೇಖರ ದಿಗ್ಗಿ, ವಿಜಯಕುಮಾರ ಪಾಂಡರೆ, ತಬಿತಾ ಪ್ರಸಾದ ಇತರರಿದ್ದರು. 
ರಾಜ್ಯ

ಶಿಕ್ಷಣದ ಜ್ಞಾನ ಜೀವನಕ್ಕೆ ಪೂರಕ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಅಶೋಕ ಚೌಧರಿ ಹೇಳಿಕೆ
  • ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಶಹಾಪುರ:

ಶಿಕ್ಷಣ ನಿಂತ ನೀರಲ್ಲ, ಹರಿಯುವ ಹೊಳೆ. ಜ್ನಾನವು ಕೂಡ ಸದಾ ಮಸ್ತಕದಲ್ಲಿ ಹರಿಯುತ್ತಿರಬೇಕು. ನಿರ್ಮಲವಾದ ಮನಸ್ಸನ್ನು ಜಾಗೃತಗೊಳಿಸಲು ಶಿಕ್ಷಣದ ಜ್ನಾನವು ಸಂಪೂರ್ಣ ಜೀವನಕ್ಕೆ ಪೂರಕವಾಗಿದೆ ಎಂದು ಸಾಹಿತಿ ಅಶೋಕ ಚೌಧರಿ ಹೇಳಿದರು.

ನಗರದ ವಿಶ್ವಜ್ಯೋತಿ ಸ್ವತಂತ್ರ ವಿಜ್ನಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈಗ ಶಿಕ್ಷಣ ಮುಖ್ಯವಾಗಿದೆ. ಹಲವಾರು ವಿಷಯಗಳು ಅಧ್ಯಯನಕ್ಕಾಗಿ ಕಾಯುತ್ತಿವೆ. ಆಯ್ಕೆ ಮಾಡಿಕೊಂಡ ವಿಷಯವನ್ನು ಇಷ್ಟಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಹೆಚ್ಚು ಪುಸ್ತಕವನ್ನು ಪ್ರೀತಿಸಿ. ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು. ಬಣ್ಣದ ಲೋಕಕ್ಕೆ ಮಾರು ಹೋಗಬೇಡಿ. ಅದರಿಂದ ಅನಾಹುತವೇ ಜಾಸ್ತಿ. ಆದರ್ಶವಂತ ಮಕ್ಕಳಾಗಿ, ಸಮಾಜಕ್ಕೆ, ದೇಶಕ್ಕೆ, ಸಂಸ್ಥೆಗೆ ಕೊಡುಗೆ ಕೊಡುವ ಸಾಧಕರು ನೀವಾಗಬೇಕೆಂದು ಚೌಧರಿ ಮಾರ್ಮಿಕವಾಗಿ ಹೇಳಿದರು. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ದಿಗ್ಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವಿಜಯಕುಮಾರ ಪಾಂಡರೆ, ಪ್ರಾಚಾರ್ಯೆ ತಬಿತಾ ಪ್ರಸಾದ ಅತಿಥಿಗಳಾಗಿ ಭಾವಹಿಸಿದ್ದರು. ೨೦೨೫- ೨೦೨೬ನೇ ಸಾಲಿನಲ್ಲಿ ದ್ವಿತಿಯ ಪಿಯುಸಿಯಲ್ಲಿ ಶೇ.೮೯ಅಂಕ ಗಳಿಸಿದ ಮಾನಮ್ಮಳಿಗೆ ಸನ್ಮಾನಿಸಲಾಯಿತು. ಕಾವೇರಿ ಸ್ವಾಗತಿಸಿದರು, ದೀಪಿಕಾ ಮತ್ತು ಅಪ್ಸಾನಾ ನಿರೂಪಿಸಿದರು, ಅಮೃತಾ ವಂದಿಸಿದರು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.