The installation of a still image is complete.
ಎಂ.ಎನ್.ಕೋಟೆ: ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಮಂಚಲದೊರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿ ಸ್ಥಿರಬಿಂಬ ಪ್ರತಿಷ್ಠಾಪನ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ರಾತ್ರಿ ಕೆಂಪಮ್ಮದೇವಿ, ಲಕ್ಷ್ಮೀರಂಗನಾಥಸ್ವಾಮಿ ಹಾಗೂ ಮೈಲಾರಲಿಂಗೇಶ್ವರ ಸ್ವಾಮಿಯ ಆಗಮನದೊಂದಿಗೆ ಅದ್ದೂರಿಯಾಗಿ ಉತ್ಸವ ನಡೆಯಿತು.
ಬೆಳಗ್ಗೆ ದೇವಾಲಯದಲ್ಲಿ ಗಂಗಾಪೂಜೆ, ಗಣಪತಿ ಹೋಮ, ದೇವತಾ ನಂದಿ ಹಾಗೂ ಕಳಸ ಪ್ರತಿಷ್ಠಾಪನೆ ಹಾಗೂ ಪೂರ್ಣಹುತಿ ನಡೆಯಿತು. ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಭಕ್ತರಿಗೆ ಮಹಾ ದಾಸೋಹ ಹಮ್ಮಿಕೊಳಾಗಿತ್ತು. ಸಂಜೆ ಶ್ರೀ ಲಕ್ಷಿ$್ಮರಂಗನಾಥಸ್ವಾಮಿ, ಶ್ರೀ ಕೆಂಪಮ್ಮ ದೇವಿಯ ಉತ್ಸವ ಊರಿನ ರಾಜಬೀದಿಗಳಲ್ಲಿ ವೈಭವದಿಂದ ನಡೆಯಿತು. ಮಾಜಿ ತಾಪಂ ಸದಸ್ಯ ಕರಿಯಮ್ಮ ರಮೇಶ್, ಮುಖಂಡರಾದ ರಂಗಸ್ವಾಮಯ್ಯ, ಶಿವಣ್ಣ, ಸಂತೋಷ್, ಶ್ರೀಕಂಠ, ಉಮೇಶ್, ಚಿಕ್ಕಣ್ಣ, ಭೈರಣ್ಣ ಮತ್ತಿತರರು ಇದ್ದರು.