ಧಾರ್ಮಿಕ ಸಂಸತಿಯಲ್ಲಿದೆ ಹಬ್ಬಕ್ಕೆ ಮಹತ್ವ religious council 
ರಾಜ್ಯ

ಧಾರ್ಮಿಕ ಸಂಸ್ಕೃತಿಯಲ್ಲಿದೆ ಹಬ್ಬಕ್ಕೆ ಮಹತ್ವ religious council

ಮುಳಬಾಗಿಲು: ಭಾರತೀಯ ಧಾರ್ಮಿಕ ಸಂಸತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ವೈಶಿಷ್ಟ$್ಯತೆ ಇದೆ. ವಿಶ್ವದಲ್ಲಿ ಎಲ್ಲೂ ಇಲ್ಲದ ಹಬ್ಬದ ಆಚರಣೆ ನಮ್ಮಲ್ಲಿ ಇರುವುದು ಹೆಮ್ಮೆ. ಅದರಲ್ಲೂ ಭೋಗಿ ಹಬ್ಬ, ಮಕರ ಸಂಕ್ರಾಂತಿ ಬಹಳಷ್ಟು ವೈಶಿಷ್ಟ್ಯ ಹೊಂದಿದೆ  ಎಂದು ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷ ಅಲಂಗೂರು ವೈ.ಸುರೇಂದ್ರ ಗೌಡ ಹೇಳಿದರು. religious council
ನಗರದ ಹೊರವಲಯದ ನರಸಿಂಹ ತೀರ್ಥದ ಸೀಗೆನಹಳ್ಳಿ ರಸ್ತೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಭಾರತೀಯ ಕಿಸಾನ್​ ಸಂಘ ಸಹಯೋಗದಲ್ಲಿ   ಬುಧವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಭೋಗಿ ಹಬ್ಬ, ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಉನ್ನತಿಗೆ ಶ್ರಮಿಸಿದ ಸಾಧು, ಸಂತರು, ಪುಣ್ಯಪುರುಷರ ಹುಟ್ಟುಹಬ್ಬ ಆಚರಣೆ ಮಾಡುವುದರಿಂದ ಮಕ್ಕಳಲ್ಲಿ ಸಾಧಕರ ಮೇಲೆ ಆಸಕ್ತಿ ಮೂಡುತ್ತದೆ ಎಂದರು. ನಿವೃತ್ತ ಮುಖ್ಯಶಿಕ್ಷಕ ಆರ್​ಎಸ್​ಎಸ್​ ನಾರಾಯಣಪ್ಪ ಮಾತನಾಡಿ, ಪುಣ್ಯಪುರುಷರ ಜಯಂತಿ ಆಚರಿಸುವ ಮೂಲಕ ಅವರ ಬಗ್ಗೆ ತಿಳಿದುಕೊಂಡು ಅವರಂತೆ ಆದರ್ಶಯುತ ಬದುಕು ಕಟ್ಟಿಕೊಳ್ಳೋಣ. ಸ್ವಂತಕ್ಕೆ ಸ್ವಲ್ಪ. ಸಮಾಜಕ್ಕೆ ಸರ್ವಸ್ವ ಎಂಬ ಮನೋಭಾವ ಪ್ರತಿಯೊಬ್ಬರಲ್ಲಿ ಬರುವಂತಾಗಲಿ. ಸಜ್ಜನರ  ಸಂಖ್ಯೆ ಹೆಚ್ಚಾಗಿ ದುರ್ಜನರ ಸಂಖ್ಯೆ ಕಡಿಮೆಯಾಗಲಿ ಎಂದು ಆಶಿಸಿದರು. 
ಭಾರತೀಯ ಕಿಸಾನ್​ ಸಂಘದ ಜಿಲ್ಲಾಧ್ಯಕ್ಷ ಕೆ.ರಘುನಾಥ್​ ರೆಡ್ಡಿ, ಬಿಕೆಎಸ್​ ಜಿಲ್ಲಾ ಮಹಿಳಾ ಪ್ರಮುಖ್​ ಬಿ.ಎಸ್​.ಶಶಿಕಲಾ, ತಾಲೂಕು ಅಧ್ಯಕ್ಷ  ಉಗಣಿ ಆರ್​.ನಾರಾಯಣಗೌಡ, ಉಪಾಧ್ಯಕ್ಷ ವೆಂಕಟರಾಮಚಾರಿ, ಕಾರ್ಯದರ್ಶಿ ಪಿ.ಗಂಗಾಪುರ ಮುನಿವೆಂಕಟರಾಮಯ್ಯ, ಪ್ರೇಮಮ್ಮ, ಪತ್ರಕರ್ತರ ಸಂಘದ ತಾಲೂಕು ಬಿ.ದೇವಾನಂದ್​, ಖಜಾಂಚಿ  ಕೆ.ತ್ಯಾಗರಾಜ್​, ನಾಗರಾಜ್​ ಇತರರು ಇದ್ದರು.