ರಾಜ್ಯ

371(ಜೆ) ವಿಧಿ ಜಾರಿ ಅಪೂರ್ಣ

ಪ್ರಮುಖ ಮುಖ್ಯಾಂಶಗಳು

  • ಡಿಸಿಸಿ ಬ್ಯಾಂಕ್​ ನಿರ್ದೇಶಕ ಗೌತಮ ಪಾಟೀಲ್​ ಅಸಮಾಧಾನ
  • ರಾಜಕೀಯಕ್ಕೆ ಬಳಸುವುದು ಸಲ್ಲ
ಚಿಂಚೋಳಿ: ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ 371(ಜೆ) ವಿಧಿ ಪರಿಪೂರ್ಣ ಅನುಷ್ಠಾನಕ್ಕೆ ತರದೆ ಅಸಮಾನತೆ, ಅಪೂರ್ಣ ವಾಗ್ದಾನ ಮತ್ತು ರಾಜಕೀಯಕ್ಕಾಗಿ ಬಳಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್​ ನಿರ್ದೇಶಕ ಗೌತಮ ಪಾಟೀಲ್​ ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನಾತ್ಮಕ ರಣೆಗಳಿದ್ದರೂ ಕಕ ಮೂಲಸೌಕರ್ಯ, ಶಿಣ, ಉದ್ಯೋಗಾವಕಾಶ ಮತ್ತು ಆಡಳಿತಾತ್ಮಕ ಪ್ರತಿನಿಧಿತ್ವದಲ್ಲಿ ಇನ್ನೂ ಹಿಂದುಳಿದಿದೆ. 371(ಜೆ) ಉದ್ದೇಶವೇ ಈ ಅಂತರ ಕಡಿಮೆ ಮಾಡಬಹುದಿತ್ತು. ಆದರೆ ಸರ್ಕಾರದ ನೇಮಕಾತಿ, ಬಡ್ತಿ ಮತ್ತು ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ಅಸಮತೋಲನ ಸ್ಪಷ್ಟವಾಗಿ ಕಾಣಿಸುತ್ತಿದೆ. ಪ್ರದೇಶದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ೂಷಿಸುತ್ತಿದ್ದರೂ ಹಣವನ್ನು ಅರ್ಥಪೂರ್ಣವಾಗಿ ಬಳಸುವಲ್ಲಿ ನಮ್ಮ ನಾಯಕರು ವಿಫಲವಾಗಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೆಲ ನಾಯಕರು 371(ಜೆ) ವಿಷಯದಲ್ಲಿ ತಮ್ಮದೇ ಕ್ರೆಡಿಟ್​ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇತಿಹಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲು ಸಾಧ್ಯವಿಲ್ಲ. ಈ ಹೋರಾಟ ರಾಜಕೀಯ ದಾನದಿಂದ ಬಂದದ್ದಲ್ಲ, ನಿಷ್ಠೆ, ತ್ಯಾಗ ಮತ್ತು ನ್ಯಾಯಕ್ಕಾಗಿ ತಂದೆ ಮಾಜಿ ಮಂತ್ರಿ ದಿ.ವೈಜನಾಥ ಪಾಟೀಲ್​ ಅವರಂತಹ ದೃಢಸಂಕಲ್ಪದ ನಾಯಕ ಅವಿರತ ಹೋರಾಟದ ಫಲ ಎಂಬುದನ್ನು ನೆನಪಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದರು.