ಯಾದಗಿರಿ ತಾಲೂಕಿನ ಚಟ್ಟಳ್ಳಿ ಸೀಮೆಯ ಹೊಲಗಳಿಗೆ ಶುಕ್ರವಾರ ಭೇಟಿ ನೀಡಿದ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್ ನೇತೃತ್ವದ ನಿಯೋಗ ಬೆಳೆ ಒಣಗಿದ್ದನ್ನು ಪ್ರದರ್ಶಿಸಿದರು. ಭೀಮಣ್ಣಗೌಡ ಕ್ಯಾತನಾಳ ಇತರರಿದ್ದರು.
- ಮುಂಗಾರು ಕೈಕೊಡುವ ಸಾಧ್ಯತೆ
- ನೆಲಬಿಟ್ಟು ಮೇಲೇಳದ ಬೆಳೆ
ಯಾದಗಿರಿ : ಒಂದೂವರೆ ತಿಂಗಳಿAದ ಮಳೆಯಾಗದೆ ಜಿ¯್ಲÉಯಲ್ಲಿ ಬರದ ಛಾಯೆ ಆವರಿಸಿದೆ. ಮುಂಗಾರು ಮಳೆ ನಂಬಿ ಸುಮಾರು ಎರಡು ಲಕ್ಷ ಹೆಕ್ಟೇರ್‌ನಲ್ಲಿ ರೈತರು ಹತ್ತಿ, ಹೆಸರು, ಉದ್ದು, ತೊಗರಿ ಬಿತ್ತನೆ ಮಾಡಿದ್ದಾರೆ. ಆದರೆ ವರುಣದೇವ ಮುಗಿಲಾಚೆ ಇಳಿಯದ ಕಾರಣ ಬಿತ್ತಿದ ಬೆಳೆ ಒಣಗುತ್ತಿರುವುದು ರೈತರ ಚಿಂತೆ ಹೆಚ್ಚಿಸಿದೆ.
ಸೂಪರ್ ಎಲ್‌ನಿನೋ ಬಿಸಿ ಗಿರಿ ಜಿ¯್ಲÉಗೆ ಬಹು ಪ್ರಮಾಣದಲ್ಲಿ ತಟ್ಟಿದೆ. ೧೫ ದಿನಗಳಲ್ಲಿ ಜಿ¯್ಲÉಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್‌ನಲ್ಲಿ ಒಂದೆರಡು ಸಲ ಅಲ್ಪ ಮಳೆಯಾಗಿದ್ದು ಬಿಟ್ಟರೆ ಹನಿ ನೀರು ಭೂಮಿ ತಾಯಿ ಒಡಲು ಸೇರಿಲ್ಲ. ಮುಂಗಾರು ಬೆಳೆ ರೈತರಿಗೆ ವಾರ್ಷಿಕ ಬೋನಸ್ ಇದ್ದಂತೆ. ಇದರಿಂದ ಬಂದ ಲಾಭದಲ್ಲಿ ಹಿಂಗಾರು ಬಿತ್ತನೆ ಬೀಜ, ಗೊಬ್ಬರ ಸೇರಿ ಅಗತ್ಯತೆ ಪೂರೈಸಿಕೊಳ್ಳಲಾಗುತ್ತದೆ.
ಸದ್ಯ ಬಿತ್ತಿದ ಬೆಳೆಗಳಲ್ಲಿ ಶೇ.೬೦ ನೆಲಬಿಟ್ಟು ಎದ್ದಿಲ್ಲ. ಈ ಮಧ್ಯೆ ಭತ್ತ ನಾಟಿಗೆ ರೈತರು ಸಜ್ಜಾಗಿದ್ದು, ಗz್ದÉಗಳಿಗೆ ನೀರುಣಿಸುವ ಕೆಲಸ ಭೀಮಾ ಮತ್ತು ಕೃಷ್ಣಾ ನದಿ ಮೂಲದಿಂದ ನಡೆದಿದೆ. ಆದರೆ ವಾಡಿಕೆಯಂತೆ ಜುಲೈ ಮೊದಲೆರಡು ವಾರ ಸರಾಸರಿ ೧೧೨ ಮಿಮೀ ಮಳೆ ಬದಲು ಕೇವಲ ೩೬ ಮಿಮೀ ಆಗಿ ಶೇ.೭೪ ಮಿಮೀ ಕೊರತೆ ಎದುರಾಗಿದೆ.
ಜೂನ್ ೭ರಿಂದ ೧೫ರವರೆಗೆ ಸರಾಸರಿ ೪೫ ಮಿಮೀ ಬದಲು ೨೧ ಮಿಮೀ ಮಳೆಯಾಗಿದ್ದು, ಶೇ.೨೪ ಮಿಮೀ ಅಭಾವ. ಈ ನಡುವೆ ಆಷಾಢ ಮಾಸದ ಗಾಳಿ ವೇಗವೂ ವರ್ಷಧಾರೆ ದೂರ ಸರಿಯುವಂತೆ ಮಾಡಿದೆ. ಸುರಪುರ, ಕೊಡೇಕಲï, ಶಹಾಪುರ ತಾಲೂಕಿನ ಸಗರ, ಗೋಗಿ ವಲಯ ಮತ್ತು ವಡಗೇರಾ ವ್ಯಾಪ್ತಿಯ ಹಲವೆಡೆ ಮಳೆ ಪ್ರಮಾಣ ಹೆಚ್ಚಾಗಿದ್ದರೆ, ಯಾದಗಿರಿ ಮತ್ತು ಗುರುಮಠಕಲï ತಾಲೂಕುಗಳಲ್ಲಿ ಪ್ರಮಾಣ ಕಡಿಮೆ. ಮಳೆಯನ್ನೇ ನಂಬಿ ಬಿತ್ತಿದ ರೈತರು ಮುಗಿಲತ್ತ ಮುಖ ಮಾಡಿದ್ದು, ಮಳೆರಾಯ ಕೂಡಲೇ ಧರೆಗಿಳಿದರೆ ರೈತರು ಸ್ವಲ್ಪ ಮಟ್ಟಿಗಾದರೂ ಉಸಿರಾಡಬಹುದಾಗಿದೆ.
೩೨ ಟಿಎಂಸಿ ನೀರು ಸಾಮರ್ಥ್ಯದ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ೨೦ ಟಿಎಂಸಿ ಮಾತ್ರ ನೀರಿದೆ. ಇದು ಭತ್ತ ಬೆಳೆ ಮತ್ತು ಕುಡಿಯಲು ಬಳಕೆ ಮಾಡಬಹುದಾಗಿದೆ.
ಸಿಎಂ ಹೇಳಿ ಎರಡು ವಾರವಾಯ್ತು
ಬರ ಘೋಷಣೆ ನಿರ್ಧಾರ ಮಾಡಬೇಕಿದೆ ಎಂದು ಇತ್ತೀಚೆಗೆ ಕಲಬುರಗಿಗೆ ಭೇಟಿ ನೀಡಿದ್ದ ಸಿಎಂ ಡಿ.ಕೆ. ಶಿವಕುಮಾರ್ ಮಳೆ ಬರುವುದನ್ನು ನೋಡಿಕೊಂಡು ಬರ ಘೋಷಿಸುವುದಾಗಿ ಹೇಳಿ ಎರಡು ವಾರವಾಗಿದೆ. ಮಳೆಯಂತೂ ಬಂದಿಲ್ಲ. ರೈತರ ಉಳಿವಿಗಾಗಿ ಮಹತ್ವದ ನಿರ್ಧಾರ ಕೈಗೊಳ್ಳವುದು ತುರ್ತು ಅಗತ್ಯವೆನಿಸಿದೆ.
ರಾಷ್ಟಿçÃಯ ವಿಪತ್ತು ಘೋಷಣೆ ಮಾಡಿ
ರಾಜ್ಯದಲ್ಲಿ ಭೀಕರ ಬರ ಸ್ಥಿತಿ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಕಂದಾಯ ಸಚಿವರೂ ಆದ ಡಿಸಿಎಂ ಡಾ.ಪರಮೇಶ್ವರ್ ಅವರು ರಾಷ್ಟಿçÃಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿ ತಕ್ಷಣ ಎನ್‌ಡಿಆರ್‌ಎ-ï ನಿಽ ಬಿಡುಗಡೆ ಕೋರಿ ಕೇಂದ್ರ ಸಚಿವರಿಗೆ ಪತ್ರ ಬರೆದಿz್ದÁರೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ರೈತರ ನೆರವಿಗೆ ತುರ್ತಾಗಿ ಬರಬೇಕಿದೆ.
"
-ÉÇಟೊ - ರಾಚಣ್ಣಗೌಡ ಮುದ್ನಾಳ ಮಳೆ ಇಲ್ಲದೆ ಗಿರಿ ಜಿಲ್ಲೆ ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಅನೇಕ ವರ್ಷದ ನಂತರ ಸತತ ಒಂದೂವರೆ ತಿಂಗಳು ಮಳೆಯಾಗಿಲ್ಲ. ಕಾರಣ ಸರ್ಕಾರ ಈ ಕೂಡಲೇ ಬರಗಾಲ ಘೋಷಿಸಿ ಜಿಲ್ಲೆಯ ಪ್ರತಿ ರೈತನಿಗೆ ಪರಿಹಾರ ನೀಡಬೇಕು.| ರಾಚಣ್ಣಗೌಡ ಮುದ್ನಾಳ್ಬಿಜೆಪಿ ಹಿರಿಯ ಮುಖಂಡ