ಅಫಜಲಪುರ ತಾಲೂಕಿನ ಭೈರಾಮಡಗಿಯಲ್ಲಿ ಮಂಗಳವಾರ ನಡೆದ ನರೇಗಾ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಾಪಂ ಇಒ ಶಂಕರ ರಾಠೋಡ್​, ಡಾ.ಉದಯಕುಮಾರ, ಶ್ವೇತಾ, ಸುಮಂಗಲಾ, ಅಂಬಾರಾಯ ಕಟ್ಟಿಮನಿ ಇತರರಿದ್ದರು.  
ರಾಜ್ಯ

ಕಾರ್ಮಿಕರ ಆರೋಗ್ಯವೇ ಮೂಲ ಧ್ಯೇಯ

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಶಂಕರ ರಾಠೋಡ್​ ಹೇಳಿಕೆ
  • ಭೈರಾಮಡಗಿಯಲ್ಲಿ ತಪಾಸಣೆ ಶಿಬಿರ
ಅಫಜಲಪುರ: ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೂಲಿಕಾರರ ಆರೋಗ್ಯ ರಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೆಲಸದ ಸ್ಥಳದಲ್ಲಿ ಮೂಲಸೌಲಭ್ಯ ಜತೆ ಪ್ರಥಮ ಚಿಕಿತ್ಸಾ ಸಲಕರಣೆಗಳನ್ನು ಇರಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಂಕರ ರಾಠೋಡ್​ ಹೇಳಿದರು.
ಭೈರಾಮಡಗಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ನರೇಗಾ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಅವರು, ಬಿಸಿಲಿನಲ್ಲಿ ದುಡಿಯುವ ಕಾರ್ಮಿಕರಿಗೆ ರಕ್ತದೊತ್ತಡ, ಮಧುಮೇಹ, ಚರ್ಮರೋಗಗಳಂತಹ ಸಮಸ್ಯೆಗಳು ಕಂಡುಬರುತ್ತವೆ. ಹೀಗಾಗಿ ಪ್ರತಿ ಊರಿನ ಕಾಮಗಾರಿ ಸ್ಥಳದಲ್ಲೇ ಉಚಿತ ತಪಾಸಣೆ ನಡೆಸಿ ವೈದ್ಯರು ಸೂಕ್ತ ಸಲಹೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಕೆಲಸದಲ್ಲಿ ಉತ್ಪಾದಕತೆ ಹೆಚ್ಚುತ್ತದೆ. ಕೂಲಿಯೊಂದಿಗೆ ಆರೋಗ್ಯವೂ ಮುಖ್ಯ ಎಂಬುದು ಸರ್ಕಾರದ ಉದ್ದೇಶ. ಎಲ್ಲ ಕಾರ್ಮಿಕರು ಇಂಥ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಡಾ.ಉದಯಕುಮಾರ, ಶ್ವೇತಾ, ಸುಮಂಗಲಾ ಪಿಡಿಒ ಅಂಬಾರಾಯ ಕಟ್ಟಿಮನಿ, ಸಿಬ್ಬಂದಿ ಗಂಗಾಧರ, ಶೋಭಾ ಕಣಮಸ್ಕರ, ಹಣಮಂತ ಕಾಯಕ, ಮಿತ್ರ ಗೌಶಿಯಾ ಇತರರಿದ್ದರು.