ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಸಂಟನ ಸೃಜನ್ ಅಭಿಯಾನಕ್ಕೆ ಮಹಾರಾಷ್ಟ್ರದ ಶಾಸಕ ವಿಶ್ವಜಿತ್ ಕದಂ ಚಾಲನೆ ನೀಡಿದರು. ಸುಭಾಷ ರಾಠೋಡ್, ಜಗದೇವ ಗುತ್ತೇದಾರ್, ಅರವಿಂದ ಅರಳಿ, ಶಂಕರ ದೊಡ್ಡಿ, ಅಕ್ಕಮಹಾದೇವಿ ಪಾಟೀಲ್ ಇತರರಿದ್ದರು.
- ಎಐಸಿಸಿ ವೀಕ್ಷಕ ವಿಸ್ವಜಿತ್ ಕದಂ ಅನಿಸಿಕೆ
- ಚಿಂಚೋಳಿ, ಸೇಡಂನಲ್ಲಿ ಸಂಘಟನ ಸೃಜನ್ ಅಭಿಯಾನ
ಚಿಂಚೋಳಿ : ಕಾಂಗ್ರೆಸ್ ವೀಕನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದು ನನ್ನ ಸುದೈವ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಹಾರಾಷ್ಟ್ರದ ಶಾಸಕ ಹಾಗೂ ಎಐಸಿಸಿ ವೀಕ್ಷಕ ವಿಶ್ವಜಿತ್ ಕದಂ ಹೇಳಿದರು.
ಶ್ರೀಚನ್ನ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಶನಿವಾರ ಹಮ್ಮಿಕೊಂಡಿದ್ದ ಸಂಘಟನ ಸೃಜನ್ ಅಭಿಯಾನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಜಿಲ್ಲೆಯ ಪ್ರತಿ ಕಾರ್ಯಕರ್ತರ ಅಭಿಪ್ರಾಯ, ಸಲಹೆ&ಸೂಚನೆ ಪಡೆಯುವುದಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್, ಕೆಪಿಸಿಸಿ ವೀಕ್ಷಕರಾದ ಅರವಿಂದ ಅರಳಿ, ಅಕ್ಕಮಹಾದೇವಿ ಪಾಟೀಲ್, ಶಂಕರ ದೊಡ್ಡಿ, ಉಪಾಧ್ಯ ಸುಭಾಷ ರಾಠೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯ ಬಸವರಾಜ ಮಾಲಿ, ಪ್ರಮುಖರಾದ ಲ್ಮಪತಿ, ಭೀಮರಾವ ತೇಗಲತಿಪ್ಪಿ, ಬಾಬುರಾವ ಪಾಟೀಲ್, ಅನೀಲಕುಮಾರ ಜಮಾದಾರ, ಮಧುಸೂದನರೆಡ್ಡಿ ಕಲ್ಲೂರ, ಆನಂದ ಟೈಗರ್, ಸಂತೋಷ ಗುತ್ತೇದಾರ್, ಲ್ಮಣ ಅವಂಟಿ, ಲ್ಮದೇವಿ ಕೊರವಿ, ನರಸಿಂಹಲು ಸವಾರಿ, ಸೋಮಶೇಖರ, ಶಬ್ಬೀರ್ಮಿಯ್ಯ ಕೋಡ್ಲಿ, ಪ್ರವಿಣ ತೇಗಲತಿಪ್ಪಿ ಇತರರಿದ್ದರು.