The hand that showed the mace got a stick!
ಚಿಂತಾಮಣಿ: ಬೆಂಗಳೂರು ಜೋಡಿ ರಸ್ತೆಯ ತಹಸೀಲ್ದಾರ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗೆ ಸೋಮವಾರ ಬೆಳಗ್ಗೆ ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಂತಾಮಣಿ ನಗರದ 4ನೇ ವಾರ್ಡ್ನ ಟ್ಯಾಂಕ್ ಬಂಡ್ ರಸ್ತೆಯ ನಿವಾಸಿ ರಾಜೇಶ್ ಕುಮಾರ್ (37) ಬಂಧಿತ.
ಇಸ್ಪೀಟ್, ಜೂಜಾಟ, ಮಟ್ಕಾ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಶಾಲಾ ಕಾಲೇಜುಗಳ ಬಳಿ ಹೆಣ್ಣು ಮಕ್ಕಳ ಹಿಂದೆ ಓಡಾಡುವ ಪುಂಡರ ಪತ್ತೆಗೆ ನಗರಠಾಣೆ ಪೊಲೀಸ್ ಪೇದೆ ಸುನಿಲ್ ಕುಮಾರ್ ಮಫ್ತಿಯಲ್ಲಿ ವಿಶೇಷ ಕರ್ತವ್ಯಕ್ಕೆ ನೇಮಿಸಲಾಗಿತ್ತು.
ಈ ವೇಳೆ ಸುನೀಲ್ ಕುಮಾರ್ಗೆ ಬೈಕ್ ಸವಾರ ಟಿಪು$್ಪನಗರ ನಿವಾಸಿ ಇಮ್ರಾನ್ (34) ಅಡ್ಡಬಂದಿದ್ದು, ಆತನನ್ನು ತಡೆದು ಬುದ್ಧಿ ಹೇಳುತ್ತಿದ್ದಾಗ ಅಲ್ಲಿಗೆ ಬಂದ ರಾಜೇಶ್ ಕುಮಾರ್ ಪೇದೆಗೆ ಧಮ್ಕಿ ಹಾಕಿದ್ದಲ್ಲದೆ, ಸಮೀಪದಲ್ಲಿ ಎಳನೀರು ವ್ಯಾಪಾರಿ ಇಟ್ಟಿದ್ದ ಮಚ್ಚು ಎತ್ತಿಕೊಂಡು ಬಂದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಸುನೀಲ್ ಕುಮಾರ್ ನೀಡಿದ ದೂರಿನ ಮೇರೆಗೆ ನಗರಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿ, ಆರೋಪಿ ರಾಜೇಶ್ ಕುಮಾರ್ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.