ಮಾಡಿಯಾಳದಲ್ಲಿ ಗುರುಪೂರ್ಣಿಮೆ ನಿಮಿತ್ತ ಶ್ರೀ ಡಾ.ಚನ್ನಮಲ್ಲ ಶಿವಯೋಗಿ ಹಾಗೂ ಶ್ರೀ ಮರುಳಸಿದ್ದ ಮಹಾಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಶರಣಯ್ಯ ಸ್ವಾಮಿ ನೀಲೂರ, ಅವಧೂತಪ್ಪ ಪೂಜಾರಿ, ಡಾ.ಹಣಮಂತರಾಯ ಕುಡುಕಿ, ಸೂರ್ಯಕಾಂತ ರಾಮಜಿ, ಚನ್ನಮಲ್ಲೇಶ್ವರ ಬಿರಾದಾರ, ಸಂಗಣ್ಣ ಮುದ್ದಡಗಿ ಇತರರಿದ್ದರು. 
ರಾಜ್ಯ

ಪ್ರತಿ ಕಾರ್ಯದಲ್ಲಿ ಗುರುವಿನ ಸಲಹೆ ಅಗತ್ಯ

ಬಾಬುರಾವ ಯಡ್ರಾಮಿ
ನಿಂಬರ್ಗಾ: ಈ ಲೋಕದಲ್ಲಿ ಜನ್ಮತಾಳಿದ ಪ್ರತಿಯೊಬ್ಬರ ಜೀವನದ ತೇರು ಸಾಗಬೇಕಾದರೆ ಮಾಡುವ ಪ್ರತಿ ಕಾರ್ಯದಲ್ಲಿ ಗುರುವಿನ ಸಲಹೆ ಜತೆಗೆ ಬದುಕು ಹಸನಾಗಲು ಗುರು ಮಾರ್ಗ ಬೇಕೇಬೇಕು ಎಂದು ಶ್ರೀ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ನುಡಿದರು. ಮಾಡಿಯಾಳದ ಶ್ರೀ ಚನ್ನಮಲ್ಲೇಶ್ವರ ಶಾಖಾ ಮಠದಲ್ಲಿ ಬುಧವಾರ ಗುರುಪೂರ್ಣಿಮೆ ನಿಮಿತ್ತ ಏರ್ಪಡಿಸಿದ್ದ ಪಾದಪೂಜೆ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಅಡ್ಡ ಮಾರ್ಗದ ಮೂಲಕ ಏನೆಲ್ಲ ಸಾಧನೆ ಮಾಡಬಹುದು. ಆದರೆ ಜೀವನದಲ್ಲಿ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಎಲ್ಲರೂ ತಂದೆ&ತಾಯಿ ಮತ್ತು ಗುರುವನ್ನು ಎಂದಿಗೂ ಅಲಕ್ಷಿಸದೆ ಪೂಜ್ಯ ಭಾವದಿಂದ ಕಾಣಬೇಕು ಎಂದು ಹಿತೋಪದೇಶ ನೀಡಿದರು. ವಪ್ಪತ್ತೇಶ್ವರ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮೀಜಿ ಮಾತನಾಡಿ, ಗುರುಸ್ಮರಣೆ ಒಂದೇ ದಿನ ಮಾಡಿ ಬಿಡುವುದಲ್ಲ. ಇಂಥ ಸಭೆಗಳು ನಿರಂತರ ನಡೆದರೆ ಭಕ್ತರಿಗೆ ಸನ್ಮಾರ್ಗ ಲಭಿಸಲಿದೆ. ಶ್ರದ್ಧಾ ಭಕ್ತಿಯಿಂದ ಗುರುವನ್ನು ನೆನೆದರೆ ಭಕ್ತರ ಬಾಳು ಬಂಗಾರವಾಗಲಿದೆ. ಉತ್ತಮ ಮಳೆ ಬೆಳೆಯಾಗಿ ರೈತರು ಒಳ್ಳೆಯ ಫಸಲು ಪಡೆಯಲಿ ಎಂದು ಹಾರೈಸಿದರು. ಶರಣಯ್ಯ ಸ್ವಾಮಿ ನೀಲೂರು ಮಾತನಾಡಿದರು. ಪ್ರಮುಖರಾದ ಅವಧೂತಪ್ಪ ಪೂಜಾರಿ, ಡಾ.ಹಣಮಂತರಾಯ ಕುಡುಕಿ, ಸೂರ್ಯಕಾಂತ ರಾಮಜಿ, ಚನ್ನಮಲ್ಲೇಶ್ವರ ಬಿರಾದಾರ, ಸಂಗಣ್ಣ ಮುದ್ದಡಗಿ, ಯಶವಂತರಾವ ಮಾಲಿಪಾಟೀಲ್​, ಗೌಡಪ್ಪ ಬಿರಾದಾರ, ಸಿದ್ದರಾಮ ಶಿರೋಳ, ಸುಭಾಷ ಪಾಟೀಲ್​, ನಿಂಗಣ್ಣ ಮಾಸ್ಟರ್​, ಶ್ರವಣಕುಮಾರ ಮದ್ರೆಕರ್​, ಶರಣಬಸಪ್ಪ ಕಲಶೆಟ್ಟಿ ಇತರರಿದ್ದರು.