ಯಾದಗಿರಿ ನಗರದ ಸದ್ಗುರು ಶ್ರೀ ದಾಸಬಾಳದೀಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀವೀರೇಶ್ವರ ಸ್ವಾಮೀಜಿ ಮಾತನಾಡಿದರು.
- ಬದುಕಿನ ದಾರಿ ತೋರುವ ದಿವ್ಯ ಶಕ್ತಿಯೇ ಗುರು
ಯಾದಗಿರಿ: ಗುರು ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ಬದುಕಿನ ದಾರಿ ತೋರಿಸುವ ದಿವ್ಯ ಶಕ್ತಿ. ಅe್ಞÁನದ ಕತ್ತಲೆಯನ್ನು ದೂರ ಮಾಡಿ e್ಞÁನದ ಬೆಳಕನ್ನು ನೀಡುವವನು. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರಷ್ಟೇ ಶ್ರೇಷ್ಠ ಸ್ಥಾನ ನೀಡಲಾಗಿದೆ ಎಂದು ಶ್ರೀವೀರೇಶ್ವರ ಸ್ವಾಮೀಜಿ ನುಡಿದರು.
ನಗರದ ಸದ್ಗುರು ಶ್ರೀ ದಾಸಬಾಳದೀಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದದರು. ಬೆಳಗ್ಗೆಯಿಂದ ಮಠದಲ್ಲಿ ನಡೆದ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಬಿಲ್ಪ ಪುಷ್ಪಾರ್ಚನೆ, ಲಕ್ಷ ಜಪಯಜ್ಞ ಹೋಮ, ಪಂಚಮುಖಿ ಹನುಮಾನ್ ದೇವರಿಗೆ ಕ್ಷೀರಾಭಿಷೇಕ, ಎಲಿ ಪೂಜೆ, ಪವಮಾನ ಹೋಮ, ಶಂಕ್ರಮ್ಮ ದೇವಿಗೆ ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.