ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮೆಯಲ್ಲಿ ಖಾಸಾಮಠದ ಪೀಠಾಽಪತಿ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಶಂಭುಲಿAಗಪ್ಪ ಅರುಣಿ, ಅಖಂಡೇಶ್ವರ ಹಿರೇಮಠ, ವೆಂಕಟರೆಡ್ಡಿ ಅದೋನಿ, ಯಾಮಾರೆಡ್ಡಿ ಗುನ್ನಿ ಇತರರಿದ್ದರು.
ಯಾದಗಿರಿ: ಗುರು ಎನ್ನುವುದು ಕೇವಲ ವ್ಯಕ್ತಿಯಲ್ಲ, ಬದುಕಿಗೆ ಬೆಳಕು ನೀಡುವ e್ಞÁನಸ್ವರೂಪ. ಗುರು ತೋರಿದ ಮಾರ್ಗದಲ್ಲಿ ನಡೆಯುವ ಶಿಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಗುರುಮಠಕಲï ಖಾಸಾಮಠದ ಪೀಠಾಽಪತಿ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.
ಗುರುಮಠಕಲï ತಾಲೂಕಿನ ಗಾಜರಕೋಟ ಗ್ರಾಮದ ಶಿವಶರಣ ಚನ್ನಪ್ಪಯ್ಯನವರ ಶಿಲಾಮಂಟಪದಲ್ಲಿ ಅರಿವು ಆಚಾರ ಸದ್ಭಾವನಾ ಸಂಸ್ಥೆ ಸಂಸ್ಥಾಪಕ ಶಂಭುಲಿAಗಪ್ಪ ಅರುಣಿ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡ ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶಿಷ್ಯನು ಗುರುಭಕ್ತಿ, ಆತ್ಮಶುದ್ಧಿ ಮತ್ತು ನಿಷ್ಠೆಯಿಂದ ಕಾಯಕವನ್ನು ನಿರ್ವಹಿಸಿದಾಗ ಜೀವನಕ್ಕೆ ನಿಜವಾದ ಅರ್ಥ ದೊರೆಯುತ್ತದೆ. ಗುರು-ಶಿಷ್ಯ ಸಂಬAಧವು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದ್ದು, ಸಮಾಜದಲ್ಲಿ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಗುರುವಿನ ಮಾರ್ಗದರ್ಶನ ಬಹಳ ಅಗತ್ಯ ಎಂದರು.
ಶಿವಪುರ ಗ್ರಾಮದ ಅನೇಕ ಶಿಷ್ಯ ಬಳಗವು ಶರಣ ಶಂಭುಲಿAಗಪ್ಪ ಅರುಣಿ ಅವರಿಗೆ ಗುರುನಮನ ಸಲ್ಲಿಸಿ ಗೌರವಿಸಿದರು. ಅತಿಥಿಗಳಾಗಿ ಅಖಂಡೇಶ್ವರ ಹಿರೇಮಠ, ವೆಂಕಟರೆಡ್ಡಿ ಅದೋನಿ, ಯಾಮಾರೆಡ್ಡಿ ಗುನ್ನಿ ಭಾಗವಹಿಸಿದ್ದರು. ಆರಂಭದಲ್ಲಿ ಲಿಂ. ಗುರುಗಂಗಾಧರ ಶ್ರೀಗಳ ಹಾಗೂ ಚನ್ನಪ್ಪಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನೂರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.ಶಾಂತವೀರಯ್ಯ ಹಿರೇಮಠ ನಿರೂಪಿಸಿದರು. ರಂಗಣ್ಣ ಆಚಾರಿ ಪ್ರಾರ್ಥಿಸಿದರು. ಚಂದ್ರಕಾAತ ಹೊಟ್ಟಿ ವಂದಿಸಿದರು. ಗಾಜರಕೋಟ, ಶಿವಪುರ ಗ್ರಾಮಸ್ಥರು ಭಾಗವಹಿಸಿದ್ದರು.