The guiding principle of religious practice is the doctrine of Shikhamani.
ಚಿಕ್ಕನಾಯಕನಹಳ್ಳಿ: ಮನುಷ್ಯ ತನ್ನ ಮೌಲ್ಯಗಳನ್ನು ಸ್ಥಿರವಾಗಿಸಿಕೊಳ್ಳಲು, ಧರ್ಮ, ಆಚರಣೆ, ಮಾರ್ಗಸೂಚಿ ಸಿದ್ಧಾಂತ, ಶಿಖಾಮಣಿಯನ್ನು ರೇಣುಕಾಚಾರ್ಯರು ಕೊಡುಗೆಯಾಗಿ ನೀಡಿದ್ದಾರೆ ಎಂದು ಬೀರೂರಿನ ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ಭೂಲೋಕದಲ್ಲಿ ಅಧರ್ಮ ಹೆಚ್ಚಿದಾಗ ಶಿವನ ಆಣತಿಯಂತೆ ಶಿವಗಣದಲ್ಲಿ ಒಬ್ಬರಾದ ರೇಣುಕರು ಭೂಮಿಯಲ್ಲಿ ಜನ್ಮ ತಳೆದು ಅಗಸ್ಥ$್ಯ ಮುನಿಗಳಿಂದ ದೀೆ ಪಡೆದರು. ರಾವಣನ ಕಡೆ ಆಸೆಯಂತೆ 10 ಸಾವಿರ ಲಿಂಗಗಳನ್ನು ವಿಭೀಷಣನ ಮೂಲಕ ಪ್ರತಿಷ್ಠಾಪಿಸಿದರು. ಆ ಲಿಂಗಗಳನ್ನು ಈಗಲೂ ಶ್ರೀಲಂಕಾದಲ್ಲಿ ಕಾಣಬಹುದಾಗಿದೆ ಎಂದರು.
ಮನುಷ್ಯ ಹುಟ್ಟಿದ ಮೇಲೆ ಲಿಂಗಧಾರಣೆ ಮಾಡಿ, ಸಂಸ್ಕಾರವನ್ನು ಅಳವಡಿಸಿಕೊಂಡು, ಇಷ್ಟ್ಟಲಿಂಗ ಪೂಜಿಸಬೇಕು. ಗುರುವಿನಿಂದ ಸಂಸ್ಕಾರಪಡೆದ ವ್ಯಕ್ತಿ ಸನ್ಮಾರ್ಗದಲ್ಲಿ ಧಮಾರ್ಚರಣೆ ಮಾಡುತ್ತಾನೆ ಎಂದು ರೇಣುಕರ ಸಿದ್ಧಾಂತ ಶಿಖಾಮಣಿಯಲ್ಲಿ ತಿಳಿಸಲಾಗಿದೆ ಎಂದರು.
ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯ ಜಯಂತಿ ಗುಡಿ, ಮಂದಿರಗಳಲ್ಲಿ ಮಾಡಿದರೆ ಸಾಲದು, ಮನೆಗಳಲ್ಲಿ ಹಬ್ಬವಾಗಿ ಆಚರಿಸಿ ಮಕ್ಕಳಿಗೂ ರೇಣುಕರ ಪರಿಚಯ ಮಾಡಿಸಬೇಕು ಎಂದರು.
ಡಿ.ಎಂ.ಕುರ್ಕೆ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ಧಬಸವ ಸ್ವಾಮೀಜಿ ಮಾತನಾಡಿ, ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಬೇಕೆಂದು ಪಾಲಕರು ಜೀವನ ಪೂರ್ತಿ ಶ್ರಮಿಸುತ್ತಾರೆ. ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ, ಆದರೆ ವಿವೇಕ ಮತ್ತು ಸಂಸ್ಕರ ಮರೆಯುತ್ತಿದ್ದಾರೆ. ಇದರಿಂದಾಗಿ ಕುಟುಂಬಗಳಲ್ಲಿ ಬಿರುಕು ಮೂಡುತ್ತಿವೆ ಎಂದರು.
ಭದ್ರಾವತಿಯ ಸಹ್ಯಾದ್ರಿ ಅಂಧ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಖಂಡರಾದ ಸಿದ್ದಪ್ಪ, ವೇ.ಜಗದೀಶ್, ಆಡಿಟರ್ ಜಗದೀಶ್, ಕಲ್ಮಠದ ಸಿದ್ಧಲಿಂಗಸ್ವಾಮಿ, ಎಸ್.ಎಂ.ಪ್ರಕಾಶ್ ಇತರರಿದ್ದರು.