ಸಮಾನ ಹಕ್ಕು ನೀಡಿದ ಮಹಾನ್ಚೇತನ equal rights
ಬೇತಮಂಗಲ: ಶೋಷಿತರ ಹಾಗೂ ಮಹಿಳೆಯರ ಪರ ಹೋರಾಟ ಮಾಡಿ, ಸಂವಿಧಾನದ ಮೂಲಕ ಸಮಾನ ಹಕ್ಕು ನೀಡಿದ ಮಹಾನ್ಚೇತನ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಸಂವಿಧಾನ ಓದು ಕಾರ್ಯಕ್ರಮದ ಮುಖ್ಯಸ್ಥ ಜೆ.ಜಿ.ನಾಗರಾಜ್ ತಿಳಿಸಿದರು.equal rights
ಕೆಜಿಎ್ ತಾಲೂಕು ಬಂಗಾರುತಿರುಪತಿಯಲ್ಲಿ ಪೊ.ಬಿ.ಕೃಷ್ಣಪ್ಪ ಅವರ ದಲಿತ ಸಂರ್ಷ ಸಮಿತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಪದಾಧಿಕಾರಿಗಳಿಗೆ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ವಿದ್ಯಾಭ್ಯಾಸ, ಸಮಾಜ ಸೇವೆ, ಹೋರಾಟ, ರಾಜಕೀಯದ ಬಗ್ಗೆ ಶಿಕರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಾಗಿದೆ. ಮಹಿಳೆಯರು ಸ್ವಯಂ ಪ್ರೇರಿತರಾಗಿ ಅವರ ಬಗ್ಗೆ ಓದಿ ತಿಳಿದುಕೊಳ್ಳಬೇಕಿದೆ ಎಂದರು.
ಅಂಬೇಡ್ಕರ್ ಕಾನೂನು ಮಂತ್ರಿಯಾಗಿದ್ದಾಗ ಹಿಂದೂ ಕೋಡ್ಬಿಲ್ ಮಂಡಿಸುವ ಮೂಲಕ ಮಹಿಳೆಯರಿಗೆ ಸಮಾನ ಹಕ್ಕು ನೀಡಿದರು. ಆದರೆ ಹಿಂದೂ ಕೋಡ್ಬಿಲ್ ವಿರೋಧ ಮಾಡಿದ ಹಿನ್ನೆಲೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಿಳೆಯರ ಪರ ನಿಂತರು ಎಂದು ತಿಳಿಸಿದರು.