ಕಲಬುರಗಿ ಕರುಣೇಶ್ವರ ಕಾಲನಿಯ ಜೈವೀರ ಹನುಮಾನ್​ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್​ ದೀಪ ಬೆಳಗಿಸಿದರು. ರಾಮಾಚಾರ್ಯ ಂಟಿ, ಯೋಗೇಶ ಭಟ್​ ಜೋಶಿ, ಪಿ.ಎಚ್​.ಕುಲಕರ್ಣಿ, ಯಲ್ಲಪ್ಪ ನಾಯ್ಕೋಡಿ, ಚಂದ್ರಕಾಂತ ಕುಲಕರ್ಣಿ ಇತರರಿದ್ದರು. 
ರಾಜ್ಯ

ವೇದಾಂತದ ಸಾರ ಜನಮಾನಸಕ್ಕೆ ತಲುಪಿಸಿದ ಶ್ರೇಷ್ಠ ಸಂತ

ಪ್ರಮುಖ ಮುಖ್ಯಾಂಶಗಳು

  • ಪಂ.ಗೋಪಾಲಾಚಾರ್ಯ ಅಕಮಂಚಿ ಬಣ್ಣಣೆ
  • ಕಲಬುರಗಿಯಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ
ಕಲಬುರಗಿ:ಅಲ್ಪಾಯುಷ್ಯದಲ್ಲಿಯೇ ವೇದಾಂತದ ಸಾರವನ್ನು ಜನಮಾನಸಕ್ಕೆ ತಲುಪಿಸಿ, ಭಾರತೀಯ ಸಂಸತಿಯ ಏಕತೆ ಬಲಪಡಿಸಿದ ಮಹಾನ್​ ಸಂತ ಶ್ರೀ ಶಂಕರಾಚಾರ್ಯರು ಎಂದು ಪಂ.ಗೋಪಾಲಾಚಾರ್ಯ ಅಕಮಂಚಿ ಬಣ್ಣಿಸಿದರು.
ನಗರದ ಜೈ ವೀರ ಹನುಮಾನ್​ ದೇವಸ್ಥಾನದಲ್ಲಿ ಸನಾತನ ಯುವಶಕ್ತಿ ಚಾರಿಟೇಬಲ್​ ಟ್ರಸ್ಟ್​ನಿಂದ ಸೋಮವಾರ ಹಮ್ಮಿಕೊಂಡಿದ್ದ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯಲ್ಲಿ ಮಾತನಾಡಿ, ಕೇರಳದ ಒಂದು ಸಣ್ಣ ಹಳ್ಳಿಯಾದ ಕಾಲಡಿಯಲ್ಲಿ ಜನಿಸಿದ ಆದಿ ಶಂಕರಾಚಾರ್ಯರನ್ನು ಭಾರತೀಯ ತತ್ವಶಾಸದ ಶ್ರೇಷ್ಠ ವ್ಯಕ್ತಿಯಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕ ಮತ್ತು ಬೌದ್ಧಿಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಅವರ ಕೊಡುಗೆಗಳು ಭಾರತದ ಆಧ್ಯಾತ್ಮಿಕ ಮತ್ತು ತಾತ್ವಿಕ ಭೂದೃಶ್ಯದ ಮೇಲೆ ಶಾಶ್ವತವಾದ ಪ್ರಭಾವ ಬೀರಿವೆ ಎಂದು ಹೇಳಿದರು.
ಯೋಗೇಶ್​ ಭಟ್​ ಜೋಶಿ ಮಾತನಾಡಿ, ಜೀವ ಮತ್ತು ಬ್ರಹ್ಮ ಒಂದೇ ಎಂಬ ಸಂದೇಶ, ಮಾನವಕುಲಕ್ಕೆ ಶಾಂತಿ ಹಾಗೂ ಸಮತೆಯ ದಾರಿ ತೋರಿಸುತ್ತದೆ. ಇಂದಿನ ವಿಭಜಿತ ಸಮಾಜದಲ್ಲಿ ಶಂಕರಾಚಾರ್ಯರ ತತ್ವಗಳು ಹೆಚ್ಚು ಪ್ರಸ್ತುತವಾಗಿದ್ದು, ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್​, ಶಶೀಲ್​ ನಮೋಶಿ, ಟ್ರಸ್ಟ್​ ಅಧ್ಯ ಗುರುರಾಜ ಕುಲಕರ್ಣಿ ಮಾತನಾಡಿದರು. ಶ್ರೀ ದತ್ತಪಯ್ಯ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು.
ಪ್ರಮುಖರಾದ ಪಂ.ರಾಮಾಚಾರ್ಯ ಂಟಿ, ಪಿ.ವಿ.ಜೋಶಿ, ಯಲ್ಲಪ್ಪ ನೈಕೋಡಿ, ಅವಿನಾಶ ಕುಲಕರ್ಣಿ, ಚಂದ್ರಕಾಂತ ಕುಲಕರ್ಣಿ ನಾಗೂರ, ಅರ್ಚನಾ ಬಿರಾಳ, ಶಿವಕುಮಾರ ತೋಟನಹಳ್ಳಿ, ಡಾ.ವಿನೋದ ಹೊಲಗುಂಟಿ, ಪ್ರಸನ್ನ ದೇಶಪಾಂಡೆ, ಶ್ರೀಪಾದ ಜೋಶಿ, ವೇಣುಗೋಪಾಲ್​ ಗೊಬ್ಬೂರು, ನಾರಾಯಣ ಜಹಾಗೀರದಾರ್​, ನಿಖಿಲ್​ ಜೋಶಿ, ಉಲ್ಲಾಸ್​ ಕುಲಕರ್ಣಿ, ಪ್ರಶಾಂತ ನಾಗೂರ ಇತರರಿದ್ದರು.
ಜೈ ವೀರ ಹನುಮಾನ್​ ಅಭಿವೃದ್ಧಿ ಸಂ ಹಾಗೂ ಬಸವೇಶ್ವರ ಬೋಧಕ ಜನರಲ್​ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ, ನೇತ್ರದಾನ ಹಾಗೂ ದೇಹದಾನ ಜಾಗೃತಿ ಶಿಬಿರ ನಡೆಯಿತು.
"

ಶ್ರೀ ಶಂಕರಾಚಾರ್ಯರು ಅಲ್ಪ ವಯಸ್ಸಿನಲ್ಲಿಯೇ ಅಪಾರ ಸಾಧನೆ ಮಾಡಿದ ಮಹಾನುಭಾವರು. ಕಲಬುರಗಿಯಲ್ಲಿ ಶಂಕರರ ಪ್ರತಿಮೆ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು.

"

ಶರಣಬಸವೇಶ್ವರ ದೇವಸ್ಥಾನದ ಎದುರಿನ ಅಪ್ಪ ಕೆರೆಯ ಮಧ್ಯದಲ್ಲಿ ಜಗದ್ಗುರು ಶಂಕರಾಚಾರ್ಯರ ಭವ್ಯ ಪ್ರತಿಮೆ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಬೇಕು. ಇದು ಕೇವಲ ಪ್ರತಿಮೆ ಅಲ್ಲ, ನಮ್ಮ ಸಂಸತಿಯ ಸಂಕೇತ. ಯುವಪೀಳಿಗೆಗೆ ಪ್ರೇರಣೆಯ ಕೇಂದ್ರವಾಗಲಿದೆ.