Kempegowda jayanthi  
ರಾಜ್ಯ

ಬೆಂಗಳೂರಿನ ಪ್ರಗತಿಗೆ ಅಡಿಪಾಯ ಹಾಕಿದ ಮಹನೀಯ

ಪ್ರಮುಖ ಮುಖ್ಯಾಂಶಗಳು

  • * ಕೆಂಪೇಗೌಡರ ಸಾಧನೆ ಸ್ಮರಿಸಿದ ಶಾಸಕ ಎಸ್. ಮುನಿರಾಜು
ಪೀಣ್ಯ ದಾಸರಹಳ್ಳಿ: ರಾಜಧಾನಿ ಬೆಂಗಳೂರಿನ ಪ್ರಗತಿಗೆ ಕೆಂಪೇಗೌಡ ಅಡಿಪಾಯ ಹಾಕಿದರು. ಅದರ ಸ್ಫೂರ್ತಿಯಿಂದ ಇದನ್ನು ಮತ್ತಷ್ಟು ಅರ್ಥಪೂರ್ಣ ನಗರವನ್ನಾಗಿಸಬೇಕಿದೆ ಎಂದು ಶಾಸಕ ಎಸ್. ಮುನಿರಾಜು ಹೇಳಿದ್ದಾರೆ.
ಮಲ್ಲಸಂದ್ರದ ಪೈಪ್‌ಲೈನ್ ಮುಖ್ಯರಸ್ತೆಯ ಶನಿಮಹಾತ್ಮ ದೇವಸ್ಥಾನದ ಮುಂಭಾಗದಲ್ಲಿನ ಕೆಂಪೇಗೌಡರ ಪ್ರತಿಮೆ ಬಳಿ ಶಾಸಕ ಎಸ್. ಮುನಿರಾಜು ಅಭಿಮಾನಿಗಳ ಬಳಗದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಪ್ರಭು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕೆಂಪೇಗೌಡರು ಒಕ್ಕಲಿಗ ಜನಾಂಗಕ್ಕೆ ಸೀಮಿತವಾಗಿಲ್ಲ, ಎಲ್ಲ ಸಮುದಾಯದ ಜನಾಂಗಕ್ಕೂ ವ್ಯಾಪಾರಕ್ಕೆ ಅನುಕೂಲವಾಗುವಂತೆ ಅರಳೇಪೇಟೆ, ಕುಂಬಾರಪೇಟೆ, ಅಕ್ಕಿಪೇಟೆ, ಚಿಕ್ಕಪೇಟೆ, ತರಗುಪೇಟೆ, ಉಪ್ಪಾರಪೇಟೆ ಹೀಗೆ ಸುಮಾರು 30ಕ್ಕೂ ಹೆಚ್ಚು ಪೇಟೆ ನಿರ್ಮಿಸಿದ್ದರು. ಅವರು ನಿರ್ಮಿಸಿದ ಕೆರೆಗಳು, ಉದ್ಯಾನವನಗಳು, ರಸ್ತೆಗಳು, ದೇವಸ್ಥಾನಗಳು, ಕಲ್ಯಾಣಿಗಳು, ಮಂಟಪಗಳು ಇಂದಿಗೂ ಸಾಕ್ಷಿಯಾಗಿವೆ ಎಂದರು.
ಬಳಗದ ಅಧ್ಯಕ್ಷ ಕಾರ್ಲೆ ನಂಜಪ್ಪ, ಟಿ. ಶಿವಕುಮಾರ್, ಲಕ್ಷ್ಮಣ್ ಗೌಡ, ಶೆಟ್ಟಿಹಳ್ಳಿ ಸುರೇಶ್, ವಿನೋದ್ ಗೌಡ, ಬಿ.ಟಿ. ಶ್ರೀನಿವಾಸ್, ಹುಚ್ಚರಂಗಯ್ಯ, ಪಾಂಡುರಂಗ ರಾವ್, ಉಮಾದೇವಿ ನಾಗರಾಜು, ಪದಾಧಿಕಾರಿಗಳಾದ ಬಲರಾಮ್ ಶರ್ಮ, ಸಿ.ಎನ್. ದಯಾನಂದ್, ಆನಂದ್, ನಾಗರಾಜು ಇತರರಿದ್ದರು.