ಶಹಾಬಾದ್ನಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮವನ್ನು ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು. ಭಂತೆ ವರಜ್ಯೋತಿ ಮಹಾಥೇರೋ, ಪೊ. ವಿಜಯಕುಮಾರ ಸಾಲಿಮನಿ, ಮರಿಯಪ್ಪ ಹಳ್ಳಿ, ಡಾ.ಫಾರೂಕ್ ಮಣ್ಣೂರ್ ಇತರರಿದ್ದರು.
- ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಬಣ್ಣನೆ
- ಶಹಾಬಾದ್ನಲ್ಲಿ ಅಂಬೇಡ್ಕರ್ ಹಬ್ಬ
ಶಹಾಬಾದ್: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕನ್ನು ಕೊಟ್ಟ ಮಹಾನ್ ಜ್ಞಾನಿಯಾಗಿದ್ದಾರೆ ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ರಾಯಲ್ ಸಭಾಗೃಹದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜಯಂತ್ಯುತ್ಸವ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಸಂವಿಧಾನದ ಮೂಲಕ ಕೊಟ್ಟಿರುವ ಓದಿನ ಹಕ್ಕನ್ನು ಎಸ್ಐಆರ್ ಮೂಲಕ ಸರ್ಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಮೂಲಕ ಸಂವಿಧಾನವನ್ನು ಮುಗಿಸುವ ಪ್ರಯತ್ನ ನಡೆದಿದೆ. ಸಂಘಟನೆಗಳು ಮನೆಮನೆಗೆ ಹೋಗಿ ಜಾಗೃತಿ ಮೂಡಿಸಬೇಕು, ದಲಿತರು ಅಂಬೇಡ್ಕರ್ ಅವರಂತೆ ಓದಿ ಲೀಡರ್ ಆಗಬೇಕು. ಓದದಿದ್ದಲ್ಲಿ ಡೀಲರ್ ಆಗಿ ಉಳಿಯುತ್ತೀರಿ ಎಂದು ಎಚ್ಚರಿಸಿದರು.
ಡಾ.ವಿಜಯಕುಮಾರ ಸಾಲಿಮನಿ ಮಾತನಾಡಿ, ಜಗತ್ತು ಇಂದು ಡಾ.ಅಂಬೇಡ್ಕರ್ ಅವರ ವಿದ್ವತ್ ಅನ್ನು ನೋಡುತ್ತಿದ್ದರೆ, ನಮ್ಮ ದೇಶದಲ್ಲಿ ಅವರ ಜಾತಿಯನ್ನು ನೋಡಲಾಗುತ್ತಿದೆ. ಸ್ವಾತಂತ್ರ್ಯದ ನಂತರ ನಮ್ಮ ನಾಯಕರು ಮಹಿಳಾ ಶಿಕ್ಷಣ ವಿರೋಧಿಸಿದರು. ಆದರೆ ಅಂಬೇಡ್ಕರ್ ಅವರು ಮಹಿಳೆಯರಿಗೆ ಶಿಕ್ಷಣ ಹಕ್ಕನ್ನು ಸಂವಿಧಾನದ ಮೂಲಕ ನೀಡಿ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದರು. ಪ್ರಬುದ್ಧ ಭಾರತ ಕಟ್ಟುವ ಕನಸನ್ನು ಹೊಂದಿದ್ದರು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಮಾತನಾಡಿದರು.
ಭಂತೆ ವರಜ್ಯೋತಿ ಮಹಾಥೇರೋ ಸಾನ್ನಿಧ್ಯ, ರಾಜೇಶ ಯನಗುಂಟಿಕರ್ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಪೌರಾಯುಕ್ತ ಫಕ್ರೋದ್ದಿನ್, ಪ್ರಮುಖರಾದ ವಸಂತ ಕಾಂಬಳೆ, ಮರಿಯಪ್ಪ ಹಳ್ಳಿ, ಡಾ.ಫಾರೂಕ್ ಮಣ್ಣೂರ, ಸುರೇಶ ಮೆಂಗನ್, ಮೃತ್ಯುಂಜಯ ಸ್ವಾಮಿ ಹಿರೇಮಠ, ಮಾಣಿಕಗೌಡ ಪಾಟೀಲ್, ಸೂರ್ಯಕಾಂತ ರದ್ದೇವಾಡಿ, ಶರಣಬಸ್ಸು ಸಿರನೂರಕರ್, ಸುನೀಲ ಭಗತ್, ದೇವೆಂದ್ರ ಕಾರೊಳ್ಳಿ, ಪಿ.ಎಸ್.ವನಂಜಕರ್, ಅಣ್ಣಾರಾವ ಪಾಟೀಕ್, ಭೀಮುಗೌಡ ಖೇಣಿ, ಪೀರ್ ಪಾಶಾ, ಶಿವಪುತ್ರ ಕರಣಿಕ, ಅನೀಲಕುಮಾರ ಮರಗೋಳ, ಮಲ್ಲಣ್ಣ ಮಸ್ಕಿ, ಮಲ್ಲಿಕಾರ್ಜುನ ಗೌಡ ಪಾಟೀಲ್, ನರಸಿಂಹಲು ರಾಯಚೂಕರ್, ಸುಭಾಷ ಸಾಕ್ರೆ, ಮಲ್ಲಿಕಾರ್ಜುನ ಮರತೂರ ಇತರರಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಶಂಕರಜಾನಾ, ರುನಾಥ ಜಾಯಿ, ಮಲ್ಕಣ್ಣ ಮಸ್ಕಿ, ಯಶೋಧಾ ದೊಡ್ಡಮನಿ, ಸಿದ್ದು ಹರವಾಳ ಅಂಬೇಡ್ಕರ್ ಗೀತೆ, ಕ್ರಾಂತಿ ಗೀತೆ ಹಾಡಿದರು. ಪಿ.ಎಸ್.ಮೇತ್ರೆ, ಪ್ರವಿಣ ರಾಜನ್ ನಿರೂಪಣೆ ಮಾಡಿದರು. ಅಲ್ಲಮಪ್ರಭು ಮಸ್ಕಿ ಸ್ವಾಗತಿಸಿದರು. ಮರಿಯಪ್ಪ ಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ದೊಡ್ಡಮನಿ ವಂದಿಸಿದರು.