ಚಿತ್ತಾಪುರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಉದ್ಘಾಟಿಸಿದರು. ಅಬ್ಬೆತುಮಕೂರ ಶ್ರೀ, ಶಿವಶಂಕರ ಶ್ರೀ, ಕಂಬಳೇಶ್ವರ ಶ್ರೀ, ಕೊಟ್ಟುರೇಶ್ವರ ಶ್ರೀ, ನಾಗರಾಜ ಭಂಕಲಗಿ, ಅಶೋಕ ನಿಪ್ಪಾಣಿ ಇದ್ದರು.
- ಜಯಶ್ರೀ ಮತ್ತಿಮಡು ಬಣ್ಣನೆ
- ಚಿತ್ತಾಪುರದ ಶರಣನ ದೇಗುಲದಲ್ಲಿ ಪುರಾಣ ಕಾರ್ಯಕ್ರಮ
ಚಿತ್ತಾಪುರ: ಸದ್ಗುರು ವಿಶ್ವಾರಾಧ್ಯರು ಮಹಾನ್ ತಪಸ್ವಿಗಳಾಗಿದ್ದು, ಸಾಕಷ್ಟು ಪವಾಡಗಳ ಮೂಲಕ ಅಪಾರ ಭಕ್ತರ ಕಷ್ಟಗಳನ್ನು ದೂರ ಮಾಡಿದ್ದಾರೆ ಎಂದು ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಹೇಳಿದರು.
ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀಣೋರ್ದ್ಧಾರ ಹಾಗೂ ಸೇವಾ ಟ್ರಸ್ಟ್ನಿಂದ ಶ್ರೀ ಶರಣಬಸವೇಶ್ವರ ಜಾತ್ರೋತ್ಸವ, ಶ್ರೀ ಶಿವಶಂಕರ ಶಿವಾಚಾರ್ಯರ ಪಟ್ಟಾಧಿಕಾರ ಸುವರ್ಣ ಮಹೋತ್ಸವ ನಿಮಿತ್ತ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ವಿಶ್ವಾರಾಧ್ಯರು ಪುರಾಣಕ್ಕೆ ಚಾಲನೆ ನೀಡಿ ಮಾತನಾಡಿ, ಅಬ್ಬೆತುಮಕೂರು ಮಠದಲ್ಲಿ ಅಗಾಧ ಶಕ್ತಿಯಿದೆ. ಆ ಶಕ್ತಿ ಎಲ್ಲರನ್ನೂ ಕಾಪಾಡುವುದರ ಜತೆಗೆ ನಂಬಿದ ಭಕ್ತರನ್ನು ಉದ್ಧರಿಸುತ್ತಿದೆ ಎಂದರು.
ಅಬ್ಬೆತುಮಕೂರಿನ ಶ್ರೀ ಡಾ.ಗಂಗಾಧರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನ ಪಂಡಿತ ವಿಶ್ವಾರಾಧ್ಯರು ತತ್ವಾನಿಯಾಗಿ, ಮನುಕುಲದ ಉದ್ಧಾರಕಾಗಿದ್ದಾರೆ. ಅವರ ಚರಿತ್ರೆಯ ಪವಾಡಗಳು ಮನುಷ್ಯನ ಉತ್ತಮ ಬದುಕಿಗೆ ದಾರಿದೀಪವಾಗಿವೆ. ಭಕ್ತಿಯ ಸಂಕಲ್ಪದಿಂದ ಮನುಷ್ಯನ ಕಷ್ಟಗಳು ದೂರವಾಗುತ್ತವೆ ಎಂದು ಹೇಳಿದರು.
ವೀರಶೈವ ಸಮಾಜದ ತಾಲೂಕು ಅಧ್ಯ ನಾಗರಾಜ ಭಂಕಲಗಿ, ಪತ್ರಕರ್ತ ಶರಣು ಗೊಬ್ಬುರ್ ಮಾತನಾಡಿದರು. ಚಿತ್ತಾಪುರ, ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ, ಮಳಖೇಡದ ಶ್ರೀ ಕೊಟ್ಟುರೇಶ್ವರ ಶಿವಾಚಾರ್ಯರು ಸಾನ್ನಿಧ್ಯ, ಟ್ರಸ್ಟ್ ಅಧ್ಯ ವಿಜಯಕುಮಾರ ದೇಶಮುಖ, ಜಾತ್ರಾ ಮಹೋತ್ಸವ ಸಮಿತಿ ಅಧ್ಯ ಅಶೋಕ ನಿಪ್ಪಾಣಿ ಅಧ್ಯತೆ ವಹಿಸಿದ್ದರು.
ಪ್ರಮುಖರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಚಂದ್ರಶೇಖರ ಸಜ್ಜನಶೆಟ್ಟಿ, ನಾಗರೆಡ್ಡಿ ಪಾಟೀಲ್ ಕರದಾಳ, ಡಾ.ಚಂದ್ರಶೇಖರ ಕಾಂತಾ, ರವೀಂದ್ರ ಸಜ್ಜನಶೆಟ್ಟಿ, ಬಸವರಾಜ ಶಿವಗೋಳ, ಚಂದ್ರಶೇಖರ ಅವಂಟಿ, ಶಿವರೆಡ್ಡಿ ಪಾಲಪ, ಮಲ್ಲರೆಡ್ಡಿ ಗೋಪಸೇನ, ಕೋಟೇಶ್ವರ ರೇಷ್ಮಿ, ಮಲ್ಲಕಾರ್ಜುನರೆಡ್ಡಿ ಇಜಾರ, ಶಿವಲಿಂಗಪ್ಪ ವಾಡೇದ, ಬಸವರಾಜ ಹೂಗಾರ, ಶಾಂತಣ್ಣ ಚಾಳೀಕಾರ, ವೆಂಕಟಮ್ಮ ಪಾಲಪ, ಆನಂದ ಪಾಟೀಲ್ ನರಿಬೋಳ, ಪ್ರಸಾದ ಅವಂಟಿ, ಬಸವರಾಜ ಕಾಳಗಿ, ಚಂದ್ರಶೇಖರ ಬಳ್ಳಾ, ಬಸವರಾಜ ಸಂಕನೂರ, ಅನಿಲ ವಡ್ಡಡಗಿ, ಚಂದ್ರಶೇಖರ ಉಟಗೂರ, ಆರ್.ರುದ್ರಯ್ಯ, ಪ್ರಕಾಶ ಹಂಚನಾಳ, ನಿರ್ಮಲಾ ಭಂಗಿ, ಲ್ಮಬಾಯಿ ಹತ್ತಿ, ಕಮಲಾಬಾಯಿ ಟೋಕಾಪುರ, ಲ್ಮಬಾಯಿ ಮಟ್ಟಿ, ಬಸವರಾಜಗೌಡ ಆಲೂರ, ಜಯಂತ ಕುಲಕರ್ಣಿ, ಚನ್ನಬಸಪ್ಪ ಹೆಗ್ಗಿನಾಳ, ಗುರುಲಿಂಗಪ್ಪ ಯರಗಲ್ ಇತರರಿದ್ದರು.
ಭಕ್ತರಿಂದ ಶ್ರೀ ಶಿವಶಂಕರ ಶಿವಾಚಾರ್ಯರಿಗೆ ನಾಣ್ಯಗಳ ತುಲಾಭಾರ ನಡೆಯಿತು. ಶಿವಕುಮಾರ ಪುರದಯ್ಯನಮಠ, ಮಂಜುನಾಥ ಶಾಸಿ ಮಂತ್ರ ಪಠಣ ಮಾಡಿದರು. ಮಲಕೂಡದ ವೀರೇಶ ಶಾಸಿ ಪುರಾಣ ಹೇಳಿದರು. ಕುಷ್ಟಗಿಯ ಶಾಂತಾನಂದ, ಭಾಗೇವಾಡಿಯ ಸಿದ್ಧಲಿಂಗೇಶ ಸಂಗೀತ ಸೇವೆ ಸಲ್ಲಿಸಿದರು. ಪ್ರತಿಾ ಗಾರಂಪಳ್ಳಿ ಭರತನಾಟ್ಯ ಪ್ರದರ್ಶಿಸಿದರು. ಅಂಬರೀಷ ಸುಲೇಗಾಂವ ಸ್ವಾಗತಿಸಿದರು. ವೀರೇಶ ಮಾಕಾಪ ಕರದಾಳ ನಿರೂಪಣೆ ಮಾಡಿದರು.
ದಾನ, ಧರ್ಮ ಮಾಡುವ ಕೈ ಶ್ರೇಷ್ಠವಾಗಿದ್ದು, ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಇಲ್ಲಿನ ಶ್ರೀ ಶರಣಬಸವೇಶ್ವರ ದೇವಸ್ಥಾನದ ಜೀಣೋರ್ದ್ಧಾರಕ್ಕೆ ನಾನು ಹಾಗೂ ಶಾಸಕರಾದ ಬಸವರಾಜ ಮತ್ತಿಮಡು ಅವರು ಭಕ್ತಿಯ ಸೇವೆ ಸಲ್ಲಿಸುತ್ತೇವೆ.